ಧಾರವಾಡ, 13 : ಭಾರತದ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಸಂಪರ್ಕ ಕ್ಷೇತ್ರದಲ್ಲಾದ ಅತ್ಯದ್ಭುತ ಸಾಧನೆಗೆ ಬಾಹ್ಯಾಕಾಶದ ತಂತ್ರಜ್ಞಾನದ ಹಾಗೂ ಇಸ್ರೋದ ಕೊಡುಗೆ ಬಹುದೊಡ್ಡದು ಎಂದು ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಎ.ಎಸ್. ಕಿರಣಕುಮಾರ ಹೇಳಿದರು.
ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಇಲ್ಲಿಯ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಶನಿವಾರ (ಜ.12) ಜರುಗಿದ 'ಸ್ಪೇಸ್ ತತ್ವ ವಿಜ್ಞಾನ ಮೇಳದಲ್ಲಿ 15 ಯುವ ವಿಜ್ಞಾನಿಗಳ ಆಯ್ಕೆಯನ್ನು ಘೋಷಣೆ ಮಾಡಿ ಮಾತನಾಡುತಿದ್ದರು. 75ನೆಯ ಸ್ವಾತಂತ್ರೋತ್ಸವದ ಒಳಗಾಗಿ ಭಾರತದ ಮಾನವ ಸಹಿತ ಗಗನ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ತರುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಕ್ತಪಡಿಸಿರುವ ಆಶಯವನ್ನು ಈಡೇರಿಸುವಲ್ಲಿ ಇಸ್ರೋ ತನ್ನ ಸಾಧನೆಯನ್ನು ಮುಂದುವರೆಸಿದೆ ಎಂದರು.
ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ಅಪಾರ ಪ್ರಮಾಣದ ಪ್ರ್ರಾಣಹಾನಿಯನ್ನು ತಡೆಗಟ್ಟಲು ಇಸ್ರೋ ನಡೆಸಿದ ನಿರಂತರ ಸಂಶೋಧನೆಗಳಿಂದಾಗಿ ಸಾಧ್ಯವಾಗಿದೆ. ಜೊತೆಗೆ 2008ರಲ್ಲಿ ನಡೆಸಿದ ಚಂದ್ರಯಾನ-1 ಯೋಜನೆಯಿಂದ ಚಂದ್ರನ ಮೇಲೆ ನೀರಿದೆ ಎಂಬುದನ್ನು ವಿಶ್ವದಲ್ಲಿಯೇ ಮೊಟ್ಟ ಮೊದಲಿಗೆ ಗುರುತಿಸಿದ ಕೀತರ್ಿ ಇಸ್ರೋಗೆ ಸಲ್ಲುತ್ತದೆ. ಹಾಗೂ 2013 ರಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಕೈಗೊಂಡ ಮಂಗಳಯಾನ ಯೋಜನೆ ಜಗತ್ತಿನ ಪ್ರಶಂಶೆಗೆ ಪಾತ್ರವಾಗಿದೆ ಎಂದರು.
ಬಾಹ್ಯಾಕಾಶದ ಅದ್ಭುತ ಪ್ರಪಂಚದ ಅನಂತ ಕುತೂಹಲ ಹಾಗೂ ಕನಸುಗಳ ಬಗ್ಗೆ ಧಾರವಾಡದ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯು ವಿದ್ಯಾಥರ್ಿಗಳಿಗೆ ಇಂದಿನ ಸಂದರ್ಭದ ವೇದಿಕೆಯನ್ನು ಒದಗಿಸಿ, ಬಾಲ ವಿಜ್ಞಾನಿಗಳ ಬಾಹ್ಯಾಕಾಶದ ಪಯಣಕ್ಕೆ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯು ದಾರಿ ತೋರಿಸುವಲ್ಲಿ ಅರುಣ ಚರಂತಿಮಠ ಅವರ ಪ್ರಯತ್ನ ಶ್ಲ್ಯಾಘನೀಯವಾದದ್ದು ಎಂದೂ ಕಿರಣಕುಮಾರ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಧಾರವಾಡ ಶಹರದ 30 ಶಾಲೆಗಳ ಬಾಲ ವಿಜ್ಞಾನಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಜಿಜ್ಞಾಸೆಯನ್ನು ಮೂಡಿಸಿ ಸೂಕ್ತ ವೇದಿಕೆಯನ್ನು ಒದಗಿಸಿದ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಹಾಗೂ ಇಲ್ಲಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡಿದ ಇಸ್ರೋದ ವಿಜ್ಞಾನಿಗಳ ಕಾರ್ಯ ಒಂದು ಉತ್ತಮ ಬೆಳವಣಿಗೆಯಾಗಿದೆ. ಮೂಲ ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದುವ ಮೂಲಕ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡು ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.
ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ನ್ಯಾಯವಾದಿ ಅರುಣ ಚರಂತಿಮಠ ಅಧ್ಯಕ್ಷತೆವಹಿಸಿದ್ದರು. ಉನ್ನತ ಶಿಕ್ಷಣ ಅಕಾಡಮಿಯ ನಿದರ್ೆಶಕ ಎಸ್.ಎಂ. ಶಿವಪ್ರಸಾದ,
ಇಸ್ರೋ ವಿಜ್ಞಾನಿಗಳಾದ ಬಿ.ಆರ್. ಗುರುಪ್ರಸಾದ, ಸುನೀಲ ಕುಲಕಣರ್ಿ, ಡಾ. ಜಾನ್ ಮ್ಯಾಥೀವ್, ಕೆ.ಆರ್. ಮಂಜುನಾಥ, ಪಿ.ಜಿ. ದಿವಾಕರ, ಹನುಮಂತರಾಯ ಬಳೂರಗಿ, ನಗರ ಬಿ.ಇ.ಓ. ಎ.ಎ. ಖಾಜಿ, ಮಾಜಿ ಮೇಯರ್ ಶಿವು ಹಿರೇಮಠ, ನ್ಯಾಯವಾದಿ ಭೈರವ ಚರಂತಿಮಠ, ಸುಜಾತಾ ಚರಂತಿಮಠ, ಪ್ರಿ. ವೀಣಾ ಮಣಿ ಇದ್ದರು.
ಶ್ರೀಹರಿಕೋಟಾ ಉಪಗ್ರಹ ಉಡಾವಣೆ ವೀಕ್ಷಣೆಗೆ ಆಯ್ಕೆಯಾದ ವಿದ್ಯಾಥರ್ಿಗಳು : ಗೌರಿ ಎಚ್. (ಜೆ.ಎಸ್.ಎಸ್. ಶಾಲೆ ಕೆಲಗೇರಿ), ಪ್ರಗತಿ (ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ), ರಿತ್ವಿಕ್ (ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ), ಗಿರಿಜಾ (ಜೆ.ಎಸ್.ಎಸ್. ಸೆಂಟ್ರಲ್ ಸ್ಕೂಲ್ ವಿದ್ಯಾಗಿರಿ), ಶರಣಗೌಡ (ಜೆ.ಎಸ್.ಎಸ್. ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ)
ಇಸ್ರೋ ಸಂದರ್ಶನಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳು : ಅಭಿಷೇಕ ಕೆ. (ಶಾಂತಿಸದನ ಶಾಲೆ), ಮಹೇಶ ಎಂ. (ಜೆ.ಎಸ್.ಎಸ್. ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ), ಕೌಸ್ತುಭ ಜಿ. (ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ), ಸಂಜನಾ ಎಂ. (ಜೆ.ಎಸ್.ಎಸ್. ಸೆಂಟ್ರಲ್ ಸ್ಕೂಲ್ ವಿದ್ಯಾಗಿರಿ), ಆದಿತ್ಯ ಬಿ. (ಬಾಲಬಳಗ ಶಾಲೆ), ರಮೇಶ ಜಿ. (ಶಾಂತಿಸದನ ಶಾಲೆ), ಶ್ರೇಯಸ್ ಎನ್.ಕೆ. (ಜೆ.ಎಸ್.ಎಸ್. ಸೆಂಟ್ರಲ್ ಸ್ಕೂಲ್ ವಿದ್ಯಾಗಿರಿ), ಜಾಯೀದ್ ಮುಲ್ಲಾ (ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ), ಸಾಯಿಪ್ರಸಾದ (ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ), ಫರಾನ್ ಸೈಯ್ಯದ್ (ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ).