ರೈತರ ಬಗ್ಗೆ ಹಾಗೂ ಉತ್ತರಕರ್ನಾಟಕದ ಬಗ್ಗೆ ಸುದೀರ್ಘಚರ್ಚೆಮಾಡುವುದಾದರೆ ಚಳಿಗಾಲದ ಅಧಿವೇಶನಕ್ಕೆ ಬನ್ನಿ : ಸಂಗಮೇಶ ಸಗರ

If you want to have a long discussion about farmers and Uttar Karnataka, come to the winter session

ರೈತರ ಬಗ್ಗೆ ಹಾಗೂ ಉತ್ತರಕರ್ನಾಟಕದ ಬಗ್ಗೆ ಸುದೀರ್ಘಚರ್ಚೆಮಾಡುವುದಾದರೆ ಚಳಿಗಾಲದ ಅಧಿವೇಶನಕ್ಕೆ ಬನ್ನಿ : ಸಂಗಮೇಶ ಸಗರ

ವಿಜಯಪುರ 07 : ಜಿಲ್ಲೆಯಲ್ಲಿರೈತರಿಗೆ ಸಾಕಷ್ಟು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ, ಈ ಕುರಿತುರೈತರಿಂದ ಮತಭಿಕ್ಷೆ ಪಡೆದು ಆರಿಸಿ ಬಂದಿರುವಜಿಲ್ಲೆಯ 8 ಶಾಸಕರುಗಟ್ಟಿಧ್ವನಿಯಲ್ಲಿ ಮಾತನಾಡಬೇಕು, ಮತ ಕೇಳುವಾಗ ಇರುವ ಕಾಳಜಿ ಕಕಲಾತಿ ಈಗೇಕೆ ಇಲ್ಲ, ಕಳೆದ 4-5 ವರ್ಷಗಳಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದಕಂಗಾಲಾಗಿರುವರೈತರಿಗೆ ಈ ಸರತಿಯಅಧಿವೇಶನದಿಂದಾದರೂ ಒಂದಿಷ್ಟು ನೆಮ್ಮದಿ ಸಿಗಬೇಕಾದರೆ ಚಳಿಗಾಲದ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಮಾತ್ರಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದುಕರ್ನಾಟಕರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಕೃಷ್ಣಾ ಕಣಿವೆಯ ಮಕ್ಕಳಿಗೆ ಪ್ರತಿಸಲವೂ ಅನ್ಯಾಯವಾಗಿತ್ತಿದೆ, ಆಲಿಮಟ್ಟಿಜಲಾಶಯದಎತ್ತರವನ್ನು 524.256 ಕ್ಕೆ ಎತ್ತರಿಸಲುಇನ್ನು ಎಷ್ಟು ವರ್ಷಕಾಯಬೇಕಾಗುತ್ತದೊ ಆ ಭಗವಂತನೇ ಬಲ್ಲ, ಸುಮಾರು 60 ವರ್ಷಗಳೇ ಕಳೆದರೂ ಈ ಯೋಜನೆ ಪೂರ್ಣ ಮಾಡುತ್ತಿಲ್ಲಎಂದರೆಇದರಲ್ಲಿ ನಮ್ಮಜನಪ್ರತಿನಿಧಿಗಳು ಮಲಗಿ ಚಿರ ನಿದ್ರೆಯಲ್ಲಿಇರುವುದುಕಂಡು ಬರುತ್ತಿದೆ, ಇದರಲ್ಲಿರಾಜ್ಯ ಮತ್ತುಕೇಂದ್ರದ ಪ್ರತಿನಿಧಿಗಳು ಕಾಳಜಿ ವಹಿಸಬೇಕು, ಇದರಿಂದ 5-6 ಜಿಲ್ಲೆಯ ಬಹತೇಕರೈತರಿಗೆ ಅನುಕೂಲವಾಗಲಿದೆ. 

ರೈತರ ಬಾಳಲ್ಲಿ ನಿತ್ಯವೂಕಗ್ಗತ್ತಲೆ ಆವರಿಸಿದರೆ ರೈತ ಬದುಕುವುದಾದರೂ ಹೇಗೆ, ವಿಮೆಯಲ್ಲಿದೊಡ್ಡ ಮಟ್ಟದ ಮೊಸ, ಕಳಪೆ ಬೀಜ, ಗೊಬ್ಬರ, ಕೀಟನಾಶಕ, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ, ಭೂ ಪರಿಹಾರದಲ್ಲಿತಾರತಮ್ಯ, ಕೃಷ್ಣಾನದಿ ನೀರಿನ ಹಂಚಿಕೆಯಲ್ಲಿ ಮೊಸ, ಬೆಳೆದ ಬೆಳೆಗೆ ಸರಿಯಾದ ಬೆಲೆಯಲ್ಲಿ ಮೊಸ, ಇವುಗಳ ಬಗ್ಗೆ ಕುಲಂಕುಶವಾಗಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು,  

ವಿಜಯಪುರಜಿಲ್ಲೆಯಲ್ಲಿ ನಡೆದಿರುವ ಬಹುತೇಕ ನೀರಾವರಿ ಯೋಜನೆಗಳು ಕಳಪೆ ಹಾಗೂ ಇಲ್ಲಿಯವರೆಗೆ ಬಹುತೇಕ ಪೂರ್ಣಗೊಂಡಿರುವುದಿಲ್ಲ, ಜೊತೆಗೆರೈತರಿಗೆ ಬರಬೇಕಾದ ಭೂಸ್ವಾಧೀನದ ಹಣ 10 ವರ್ಷಗಳಾದರೂ ಇನ್ನುರೈತರ ಕೈ ಸೇರಿಲ್ಲ, ಇದರಿಂದರೈತರು ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡು ಇಗ ಹಣ ಬಾರದೇಕೋರ್ಟಿಗೆಅಲೆದಾಡುತ್ತಿದ್ದಾರೆ,  

ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ಲಿಂಬೆ, ಹಾಗೂ ಜೋಳ, ತೋಗರಿ, ವಿಶ್ವ ಪ್ರಸಿದ್ದಿಯನ್ನು ಪಡೆದಿರುವುದು ನಮ್ಮೆಲ್ಲರಿಗೂಗೊತ್ತಿದೆ, ಆದರೆ ಅವುಗಳನ್ನು ವರ್ಷವಿಡಿಕಷ್ಟಪಟ್ಟು ಬೆಳೆದಿರುವ ರೈತರಿನಿಗೆ ಬೆಳೆ ಬರುವಷ್ಟುರಲ್ಲಿದರ ಬಿದ್ದು, ಮಾಡಿರುವ ಸಾಲ ತೀರಿಸಲಾಗದೇಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತುಂಬಾ ವಿಷಾಧವೆನ್ನಿಸುತ್ತಿದೆ, ಇವುಗಳಿಗೆ ಮಾರುಕಟ್ಟೆಕಲ್ಪಿಸಲು, ಮೌಲ್ಯವರ್ಧನೆ ಮಾಡಲುನಮ್ಮ 8 ಶಾಸಕರು ವಿಶೇಷ ಆಸಕ್ತಿ ತೋರಿಸಿ ಗಟ್ಟಿಧ್ವನಿ ಎತ್ತಿ ಇವುಗಳಿಗೆ ವಿಶೇಷ ಅನುದಾನತರಬೇಕು. 

ಉತ್ತರಕರ್ನಾಟಕದಅಭಿವೃದ್ಧಿಗಾಗಿಯಾವುದೇ ಮುಲಾಜು ಹಿಡಿಯದೇ ಪಕ್ಷಾತೀತವಾಗಿಚರ್ಚೆ ಮಾಡಿ ವಿಶೇಷ ಅನುದಾನ ಸೇರಿದಂತೆ ಹೊಸ ಹೊಸ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಕೃಷಿ, ಶಿಕ್ಷಣ, ಉದ್ಯೋಗ, ಮೂಲಭೂತ ಸೌಕರ್ಯಸೇರಿದಂತೆಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿಇಟ್ಟುಕೊಂಡು ಮಾತನಾಡಿ, ಸದನದಲ್ಲಿಒಬ್ಬರ ಮೇಲೆ ಒಬ್ಬರ ಹಾಕಿ ಜಗಳಾಡಿ ಸಮಯ ವ್ಯರ್ಥ ಮಾಡುವುದಾದರೆ ನಮಗೆ ದಕ್ಷಿಣಕರ್ನಾಟಕದ ಶಾಸಕರಅವಶ್ಯಕತೆಇಲ್ಲ, ಪ್ರತೇಕರಾಜ್ಯ ಮಾಡಿಕೊಡಿ ಸಾಕು,  

ಜಿಲ್ಲೆಯಲ್ಲಿ ಹೊಸ 8 ತಾಲೂಕುಗಳನ್ನು ಘೋಷಣೆ ಮಾಡಿ 10 ವರ್ಷಗಳೇ ಕಳೆದರು ಸರಕಾರದ ಕಚೇರಿಗಳು ಆಗೇ ಇಲ್ಲ, ಎಲ್ಲಾ ಇಲಾಖೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ, ಇಲಾಖೆಯಲ್ಲಿಅನುದಾನದಲ್ಲಿಯೂಕೂಡಾಕಡಿತ ಮಾಡಿರುವುದುಉತ್ತರಕರ್ನಾಟಕದಅಭಿವೃದ್ಧಿ ಬಗ್ಗೆ  ನಿರ್ಲಕ್ಷಎದ್ದುತೊರುತ್ತಿದೆ, ಈ ಅಸಮಾನತೆಯ ವಿರುದ್ದವಾಗಿಜಿಲ್ಲೆಯಎಲ್ಲಾ ಶಾಸಕರು ಮಾತನಾಡಿಇಲ್ಲವಾದರೆರಾಜಿನಾಮೆ ನೀಡಿಎಂದು ಸಂಗಮೇಶ ಸಗರಅವರು ಪತ್ರಿಕೆ ಮೂಲಕ ಆಗ್ರಹ ಮಾಡಿದ್ದಾರೆ.