ಪಂಚಗ್ಯಾರಂಟಿ ಯೋಜನೆಗಳ ಅನುಷ್ಟಾನವು ಬಡಜನರ ಸೇವೆ ಮಾಡಲು ಒದಗಿಸಿದ ಬಹುದೊಡ್ಡ ಅವಕಾಶ ಸಚಿವ ಎಚ್‌.ಕೆ.ಪಾಟೀಲ

Implementation of Panch Guarantee Schemes is a great opportunity to serve the poor Minister HK Pati

ಪಂಚಗ್ಯಾರಂಟಿ ಯೋಜನೆಗಳ ಅನುಷ್ಟಾನವು ಬಡಜನರ ಸೇವೆ ಮಾಡಲು ಒದಗಿಸಿದ ಬಹುದೊಡ್ಡ ಅವಕಾಶ   ಸಚಿವ ಎಚ್‌.ಕೆ.ಪಾಟೀಲ 

ಗದಗ   3: ಸರ್ಕಾರದಿಂದ ಜಾರಿಯಾಗಿರುವ ಪಂಚಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು ಈ ಯೋಜನೆಗಳ ಅನುಷ್ಟಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ವಿಡಿಯೋ ಸಭಾಂಗಣದಲ್ಲಿ ಸೋಮವಾರ ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಅಶೋಕ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ  ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ  ಅನುಷ್ಟಾನ ಕುರಿತು  ಪ್ರಗತಿ ಪರೀಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.    ಪಂಚಗ್ಯಾರಂಟಿ ಯೋಜನೆಯ ಮಹತ್ವವನ್ನು ಅರ್ಥೈಸಿಕೊಳ್ಳುವುದು ಹಾಗೂ ಅವುಗಳ ಅನುಷ್ಟಾನವನ್ನು ಜವಾಬ್ದ್ದಾರಿಯುತವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರದ್ದೆವಹಿಸಿ ಕೆಲಸ ಮಾಡಬೇಕು. ಗದಗ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರುಗಳು  ಒಟ್ಟು  82,000 ಜನರನ್ನು ಸಂಪರ್ಕಿಸಿ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದ್ದಾರೆ. 40,000 ಬಡಜನರಿಗೆ ಕಣ್ಣು ಪರೀಕ್ಷೆ ನಡೆಸಲಾಗಿದೆ. 4,000 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿ 17,000 ಬಡಜನರಿಗೆ ಕನ್ನಡಕ ಕೊಡಿಸಲಾಗಿದೆ.  ಬಡವರಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು.  ಸೌಲಭ್ಯಗಳನ್ನು  ನಿಗದಿತ ಅವಧಿಯಲ್ಲಿಯೇ ತಲುಪಿಸಿದಾಗ ತಲುಪಿಸುವಂತಾಗಬೇಕು.  ಅನರ್ಹರನ್ನು ಹೊರತುಪಡಿಸಿ  ಪಂಚಗ್ಯಾರಂಟಿ ಯೋಜನೆಗಳ ಅನುಷ್ಟಾನ ಶೇಕಡ ನೂರರಷ್ಟು ಪ್ರಗತಿ ಸಾಧಿಸಬೇಕು. ಗ್ಯಾರಂಟಿ ಯೋಜನೆಯ ಅನುಷ್ಟಾನದಲ್ಲಿ ಪ್ರಾಮಾಣಿಕತನವಿರಬೇಕು. ಭೃಷ್ಟಾಚಾರ ರಹಿತ ಪಾರದರ್ಶಕ  ಆಡಳಿತ ನಡೆಸಿ ಅರ್ಹರು ಇದರ ಲಾಭ ಪಡೆಯುವಂತೆ ಮಾಡಬೇಕು. ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ನಿರ್ವಹಿಸಬೇಕು.  ಬಡಜನರಿಗೆ ಸೇವೆ ಸಲ್ಲಿಸುವುದು ಪವಿತ್ರ ಕೆಲಸವಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ತಿಳಿಸಿದರು. ಕಟ್ಟುನಿಟ್ಟಿನ ಸೂಚನೆ   ನೀಡಿದರು. ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಅಶೋಕ ಮಂದಾಲಿ ಅವರು ಸಭೆಯ ಅಧ್ಯಕ್ಷತೆವಹಿಸಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ನಡೆಸುತ್ತಾ ಮಾತನಾಡಿ  ಪಂಚಗ್ಯಾರಂಟಿ ಯೋಜನೆ ಲಭಿಸುವಲ್ಲಿ ಫಲಾನುಭವಿಗಳಿಗೆ ಯಾವುದೇ ಅಡಚಣೆಗಳು ಉಂಟಾದರೆ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.  ಪ್ರತಿನಿಧಿಗಳ ಸಹಕಾರ ಈ ನಿಟ್ಟಿನಲ್ಲಿ ಇದ್ದೇ ಇರುತ್ತದೆ. ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಾಗ ಸಮೀಕ್ಷೆ ಮುಖಾಂತರ  ಅರ್ಹ ಹಾಗೂ ಅನರ್ಹ ಫಲಾನುಭವಿಗಳ ಪಟ್ಟಿ ತಯಾರು ಮಾಡಬೇಕು. ಗೃಹಲಕ್ಷ್ಮೀ ಯೋಜನೆಗಳ ಫಲಾನುಭವಿಗಳಿಗೆ ಯೋಜನೆ ಸೌಲಭ್ಯದ ಕುರಿತು   ಸಮೀಕ್ಷೆಯನ್ನು ಮಾಡುವಾಗ ಸಿಡಿಪಿಓಗಳು ಅಂಗನವಾಡಿ ಕಾರ್ಯಕರ್ತೆಯರು ಸೂಕ್ತ ಮಾರ್ಗದರ್ಶನ ಮಾಡಬೇಕು.   ಜಿಲ್ಲೆಯಲ್ಲಿನ  ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳೊಂದಿಗೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವ ಶಕ್ತಿ ಯೋಜನೆಯ ಸೌಲಭ್ಯ ನಿಗದಿತ ಕಾಲಾವಧಿಯಲ್ಲಿಯೇ ದೊರಕಬೇಕು. ಮಹಿಳೆಯರು ಶಕ್ತಿ ಯೋಜನೆ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಲ್ಳಬೇಕು. ಮಾರ್ಚ 16 ರೊಳಗೆ ಪಂಚ ಗ್ಯಾರಂಟಿ ಯೋಜನೆ ಪೂರ್ಣ ಪ್ರಮಾಣದ  ಪ್ರಗತಿ ಸಾಧಿಸಬೇಕೆಂದು ನಿರ್ದೇಶನ ನೀಡಿದರು.  ಪಂಚಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.  ಗೃಹಲಕ್ಷ್ಮೀ ಯೋಜನೆಯಡಿ ಅಕ್ಟೋಬರ್ 2024 ರವರೆಗೆ  ಗದಗ ತಾಲೂಕಿನಲ್ಲಿ  78334 ನೋಂದಣಿಯಾದ ಅರ್ಜಿಗಳ ಪೈಕಿ 77191 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ.  ಜಿಲ್ಲೆಯಲ್ಲಿ  ವಾಕರಸಾಸಂಸ್ಥೆಯಿಂದ  11-6-2023 ರಿಂದ 26-1-2025 ರವರೆಗೆ  5.51 ಕೋಟಿ ಪುರುಷ ಪ್ರಯಾಣಿಕರು ಹಾಗೂ 8.39 ಕೋಟಿ  ಮಹಿಳಾ ಪ್ರಯಾಣಿಕರು  ಸೇರಿದಂತೆ ಒಟ್ಟಾರೆ  13.90 ಪ್ರಯಾಣಿಕರು  ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2622788507 ( 26227.89 ಲಕ್ಷ )  ಮಹಿಳಾ ಪ್ರಯಾಣಿಕರ ಆದಾಯವಾಗಿದ್ದು  ತಾಲೂಕಾವಾರು  ವಿವರ ಇಂತಿದೆ ( ಲಕ್ಷಗಳಲ್ಲಿ) :  ಗದಗ ಹಿ 7734.25 ರೋಣ-3841.30,   ಲಕ್ಷ್ಮೇಶ್ವರ- 3189.02, ನರಗುಂದ-  3801.10  ಲಕ್ಷ,  ಮುಂಡರಗಿ- 3325.24,  ಗಜೇಂದ್ರಗಡ-  3379.17,  ಶಿರಹಟ್ಟಿ  957.80.  ಅನ್ನಭಾಗ್ಯ ಯೋಜನೆಯಡಿ ಗದಗ ತಾಲೂಕಿನಲ್ಲಿ ಸೆಪ್ಟೆಂಬರ್ 2024 ರ ಮಾಹೆಯಲ್ಲಿ  28,842 ಫಲಾನುಭವಿಗಳಿಗೆ 1,62,16,470 ರೂ.ಗಳನ್ನು  ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ.   ಗೃಹಜ್ಯೋತಿ ಯೋಜನೆಯಡಿ 31-1-2025 ರವರೆಗೆ ಗದಗ ಗ್ರಾಮೀಣ ಉಪವಿಭಾಗದಲ್ಲಿ 53268  ಸ್ಥಾವರಗಳು ಅರ್ಹವಿದ್ದು  52909 ಸ್ಥಾವರಗಳ ನೋಂದಣಿಯಾಗಿದ್ದು  ಶೇ 99.33 ರಷ್ಟು ಪ್ರಗತಿಯಾಗಿದೆ. ಗದಗ ಶಹರ ಉಪವಿಭಾಗದಲ್ಲಿ 45901 ಸ್ಥಾವರಗಳು ಅರ್ಹವಾಗಿದ್ದು 45549 ಸ್ಥಾವರಗಳ ನೋಂದಣಿಯಾಗಿದ್ದು ಶೇ 99.23 ಪ್ರಗತಿಯಾಗಿದೆ.  ಯುವನಿಧಿ ಯೋಜನೆಯಡಿ  ಗದಗ ತಾಲೂಕಿನಲ್ಲಿ  ಡಿಸೆಂಬರ್ 2024 ರವರೆಗೆ  1350 ಫಲಾನುಭವಿಗಳ ನೋಂದಣಿಯಾಗಿದ್ದು   857 ಅರ್ಹ ಫಲಾನುಭವಿಗಳಿಗೆ   ಡಿಬಿಟಿ ಮೂಲಕ  1,69,77,000 ರೂ.   ವರ್ಗಾವಣೆಯಾಗಿರುತ್ತದೆ ಎಂದು ಸಂಬಂಧಿತ ಅಧಿಕಾರಿಗಳು  ಮಾಹಿತಿ ಒದಗಿಸಿದರು.  ಸಭೆಯಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರವನವರ, ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ.ಅಸೂಟಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಶಂಭು ಕಾಳೆ, ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ್, ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ,  ಗಣೇಶಸಿಂಗ್ ಮಿಟಾಡ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಕೃಷ್ಣಗೌಡ ಎಚ್‌. ಪಾಟೀಲ, ಶ್ರೀಮತಿ ಸಾವಿತ್ರ್ರಿ ಹೂಗಾರ, ತಾಲೂಕಾ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು  ಹಾಜರಿದ್ದರು.