ಪ್ರಚಾರದಲ್ಲಿ ಸಿಎಂ ಭಾಗಿ ದೋಸ್ತಿಯಲ್ಲಿ ಗರಿಗೆದರಿದ ಉತ್ಸಾಹ

ಕಲಬುರಗಿ 14: ಮೇ 19ರಂದು ಉಪ ಚುನಾವಣೆ ನಡೆಯಲಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ  ಮೈತ್ರಿಕೂಟದ ಅಭ್ಯಥರ್ಿ ಕಾಂಗ್ರೆಸ್ ನ ಸುಭಾಷ್ ರಾಥೋಡ್ ಪರವಾಗಿ  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ  ಜೆಡಿಎಸ್-ಕಾಂಗ್ರೆಸ್  ನಾಯಕರು ಒಗ್ಗೂಡಿ  ಪ್ರಚಾರ ನಡೆಸುವ ಮೂಲಕ  ಮೈತ್ರಿ ಸಕರ್ಾರದ  ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದರು.ಕೆಲ  ಕಾಂಗ್ರೆಸ್ ನಾಯಕರೊಂದಿಗೆ  ಅಸಮಧಾನ  ಹೊಂದಿದ್ದಾರೆಂಬ ವರದಿಗಳ ನಡುವೆಯೇ  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ಕ್ಷೇತ್ರದಲ್ಲಿ   ಕಾಂಗ್ರೆಸ್  ಅಭ್ಯಥರ್ಿ ಪರ ಭರ್ಜರಿ  ಪ್ರಚಾರ  ಆರಂಭಿಸಿದ್ದಾರೆ.   

   ಬಿಜೆಪಿ ಹಾಗೂ ಕಾಂಗ್ರೆಸ್   ಹಿರಿಯನಾಯಕರು ಉಭಯ ಪಕ್ಷಗಳ ಪದಾಧಿಕಾರಿಗಳು ತಮ್ಮ ಉಮೇದುವಾರರ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. 

   ಮಂಗಳವಾರ  ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ಮೊದಲು  ದೇವಲ ಗಾಣಗಾಪುರಕ್ಕೆ ಭೇಟಿ ನೀಡಿ ದತ್ತಾತ್ರೇಯ ದೇಗುಲದಲ್ಲಿ  ಪ್ರಾರ್ಥನೆ ಸಲ್ಲಿಸಿ, ದತ್ತ ಸುವರ್ಣ ಪಾದುಕ ಪೂಜೆ ನೆರವೇರಿಸಿದರು ನಂತರ  ಚಂಚೋಳಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು ಬಿಜೆಪಿ ಅಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ನಿನ್ನೆಯಿಂದ ಚಿಂಚೋಳಿಯಲ್ಲಿ  ವಾಸ್ತವ್ಯ ಹೂಡಿ,  ಪಕ್ಷದ ಅಭ್ಯಥರ್ಿ ಡಾ. ಉಮೇಶ್ ಯಾದವ್ ಅವರನ್ನು ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದವರಂತೆ  ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.ಮತ್ತೊಬ್ಬ ಬಿಜೆಪಿ ನಾಯಕ  ಕೆ.ಎಸ್.ಈಶ್ವರಪ್ಪ  ನಿನ್ನೆಯಿಂದಲೇ ಕ್ಷೇತ್ರಾಧ್ಯಂತ ಸಂಚರಿಸಿ  ತಮ್ಮ ಸಮುದಾಯ ಹೆಚ್ಚಿರು ಪ್ರದೇಶಗಳಲ್ಲಿ   ಪ್ರಚಾರ ನಡೆಸುತ್ತಿದ್ದಾರೆ.

   ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಎರಡು ಬಾರಿ ಶಾಸಕರಾಗಿದ್ದ  ಡಾ. ಉಮೇಶ್ ಜಾಧವ್  ಶಾಸಕ ಸ್ಥಾನಕ್ಕೆ  ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು  ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾಜರ್ುನ ಖಗರ್ೆ ಅವರ ಎದುರು ಬಿಜೆಪಿ ಅಭ್ಯಥರ್ಿಯಾಗಿ ಸ್ಪಧರ್ಿಸಿದ್ದರಿಂದ ಚಿಂಚೋಳಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕ್ಷೇತ್ರಾದ್ಯಂತ  ಮೈಸುಡುವ ಬಿಸಿಲ ಝಳ ಹಾಗೂ ಬಿಸಿಗಾಳಿಯ  ನಡುವೆಯೇ   ಹಿರಿಯ ನಾಯಕರು  ಬೆವರು  ಹರಿಸುತ್ತಲೇ ಚುನಾವಣಾ ಸಭೆಗಳನ್ನು  ನಡೆಸಿ  ತಮ್ಮ ವಿರೋಧಿಗಳ ವಿರುದ್ಧ ರಾಜಕೀಯ ದಾಳಿ ನಡೆಸುತ್ತಿದ್ದಾರೆ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗಾಪಾಲ್  ನಿನ್ನೆ  ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. 

  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ  ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ  ಜಿ.ಪರಮೇಶ್ವರ  ಚಿಂಚೋಳಿಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

   ಕಳೆದ ಒಂದು ವಾರದಿಂದ  ಚಂಚೋಳಿ ಕ್ಷೇತ್ರದಲ್ಲೇ ತಳವೂರಿರುವ ಮಲ್ಲಿಕಾಜರ್ುನ ಖಗರ್ೆ, ಇಂದು ಕೊಡದೂರಿನಲ್ಲಿ  ಪ್ರಚಾರ ನಡೆಸಿ,  ಬಿಜೆಪಿ ನಾಯಕರು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು. ಚಿಂಚೋಳಿಯಲ್ಲಿ ಈಗಾಗಲೇ ವಾಸ್ತವ್ಯ ಹೂಡಿರುವ  ಬಿಜೆಪಿ ನಾಯಕರಾದ  ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ,ಆರ್.ಆಶೋಕ್  ಭಾನುವಾರದಿಂದ  ಚುನಾವಣಾ ಸಭೆಗಳನ್ನು ನಡೆಸುತ್ತಿದ್ದಾರೆ.