ರಾ.ಹ.ದೇಶಪಾಂಡೆ ಸಭಾಭವನದಲ್ಲಿ, ಪ್ರೊ.ಕೆ.ಎಸ್. ದೇಶಪಾಂಡೆ ದತ್ತಿಉಪನ್ಯಾಸ ಕಾರ್ಯಕ್ರಮ ಏರಿ್ಡಸಿದೆ.
ಧಾರವಾಡ 04 :ಕರ್ನಾಟಕ ವಿದ್ಯಾವರ್ಧಕ ಸಂಘವು ದಿ 5 ರಂದು ಸಂಜೆ: 6ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ, ಪ್ರೊ.ಕೆ.ಎಸ್. ದೇಶಪಾಂಡೆ ದತ್ತಿಉಪನ್ಯಾಸ ಕಾರ್ಯಕ್ರಮ ಏರಿ್ಡಸಿದೆ.ಗರಗದ ಧಾರವಾಡ ತಾಲೂಕಾ ಗರಗಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷ ಬಸವಪ್ರಭು ಹೊಸಕೇರಿ ‘ಖಾದಿ: ನಿನ್ನೆ-ಇಂದು-ನಾಳೆ’ವಿಷಯದ ಕುರಿತು ಉಪನ್ಯಾಸ ನೀಡುವರು. ಧಾರವಾಡ ಪ್ರಗತಿಪರ ಚಿಂತಕ ಡಾ.ಸಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ಮಹಿಳೆಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಮರಾಠಿಮಯವಾಗಿದ್ದ ಆಗಿನ ದಕ್ಷಿಣ ಮಹಾರಾಷ್ಟ್ರದ ಜನರಲ್ಲಿ ಒಬ್ಬರಾದ ಅಥವಾ ಈಗಿನ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಕನ್ನಡತನವನ್ನು ಬೆಳೆಸಲು ಶ್ರಮವಹಿಸಿದ ಹಾಗೂ ಧಾರವಾಡದಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಹುಟ್ಟು ಹಾಕಿದವರಲ್ಲಿ ಒಬ್ಬರಾದ ಹಾಗೂ ಕನ್ನಡ ಭಾಷೆ, ಸಂಸ್ಕೃತಿಗಳ ಏಳ್ಗೆಗಾಗಿ, ಪ್ರಾರಂಭಿಸಿದ “ವಾಗ್ಭೂಷಣ” ಪತ್ರಿಕೆಗಾಗಿ ದುಡಿದ ಎಲ್ಲಕ್ಕಿಂತ ಮುಖ್ಯವಾಗಿ ‘ಸಿರಿಗನ್ನಡಂ ಗೆಲ್ಗೆ’ ಎಂಬ ಸಪ್ತಾಕ್ಷರ ಮಂತ್ರವನ್ನು ್ರ್ರಮಥವಾಗಿ ಉಚ್ಛರಿಸಿ ಬಳಸಿದ ಪ್ರಾತಃ ಸ್ಮರಣೀಯ ದಿ. ರಾವ ಬಹದ್ದೂರ್ ರಾ. ಹ. ದೇಶಪಾಂಡೆಯವರ ಮೊಮ್ಮಗ ಪ್ರೊ.ಕೆ.ಎಸ್. ದೇಶಪಾಂಡೆಯವರು. ಇಂತಹ ಪ್ರತಿಷ್ಠಿತ ಮನೆತನದಲ್ಲಿ 5 ಮೇ 1924ರಲ್ಲಿ ಜನಿಸಿದರು.ಇಂಗ್ಲೀಷ ಹಾಗೂ ಕನ್ನಡದಲ್ಲಿ ಎಂ.ಎ. ಪಡೆದು, 1950 ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಪ್ರಥಮದರ್ಜೆಯಲ್ಲಿ ಡಿಪ್ಲೊಮಾ ಪಡೆದರು. 1951 ರಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಸೇರಿ, ಗ್ರಂಥಪಾಲಕರಾಗಿ ಕ.ವಿ.ವಿ ಗ್ರಂಥಾಲಯವನ್ನು ಇಡೀ ಭಾರತದಲ್ಲಿಯೇ ಮಾದರಿ ಗ್ರಂಥಾಲಯವನ್ನಾಗಿ ಬೆಳೆಸಿದರು. 1962 ರಲ್ಲಿ ಕ.ವಿ.ವಿ. ಯಲ್ಲಿಗ್ರಂಥಾಲಯ ವಿಜ್ಞಾನ ವಿಭಾಗ ಪ್ರಾರಂಭಿಸಿ ಅದರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.1956ರಲ್ಲಿ ಅಮೆರಿಕನ್ ಗ್ರಂಥಾಲಯ ಸಂಘವು ಗೌರವ ಡಿಪ್ಲೊಮಾವನ್ನು ದಯಪಾಲಿಸಿತು. ಅಂದಿನ ವಿಶ್ವವಿದ್ಯಾಲಯಧನ ಸಹಾಯ ಆಯೋಗದ (ಯು.ಜಿ.ಸಿ) ಛೇರಮನ್ರಾಗಿದ್ದ ಸಿ.ಡಿ. ದೇಶಮುಖರು ದೇಶಪಾಂಡೆಯವರ ಕಾರ್ಯವೈಖರಿಯು ಇತರೆ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿಯನ್ನಾಗಿ ಅನುಸರಿಸುವಂತೆ ಆದೇಶಿಸಿದ್ದರು. ಪ್ರೊ .ದೇಶಪಾಂಡೆಯವರು ಕರ್ನಾಟಕ ವಿಶ್ವವಿದ್ಯಾಲಯದಿಂದಲೇ ನಿವೃತ್ತಿ ಹೊಂದಿದರೂ, ಇತರ ಅನೇಕ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳನ್ನು ಬೆಳೆಸಿ ಜೀವ ತುಂಬಿದವರಾಗಿದ್ದಾರೆ. ಇವರ ಪಾಂಡಿತ್ಯವನ್ನು ಗೋವಾ ಮತ್ತು ಕರ್ನಾಟಕ ಸರಕಾರ ಅನೇಕ ರೀತಿಯಲ್ಲಿ ಬಳಸಿಕೊಂಡಿವೆ. ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯ ತಿದ್ದುಪಡಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.ಇವರಿಗೆ 2013 ರಲ್ಲಿ ಕ.ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. 6 ಜನ ಪಿ.ಎಚ್.ಡಿ.ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪ್ರೊ.ಕೆ.ಎಸ್. ದೇಶಪಾಂಡೆಯವರು ಗ್ರಂಥಾಲಯಗಳ ಬೆಳವಣಿಗೆಗಾಗಿ ಸಲ್ಲಿಸಿರುವ ಅಪಾರ ಸೇವೆಯಿಂದಾಗಿ ಭಾರತದ ಉದ್ದಗಲಕ್ಕೂ ಅಸಂಖ್ಯ ಶಿಷ್ಯರು, ಅನುಯಾಯಿಗಳನ್ನು ಹೊಂದಿರುತ್ತಾರೆ. ಕರ್ನಾಟಕ ವಿದ್ಯಾವರ್ಧಕ ಸಂಘ, ಗಾಂಧಿ ಶಾಂತಿ ಪ್ರತಿಷ್ಠಾನ, ಭಾರತೀಯ ಕುಟುಂಬ ಯೋಜನಾ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಮುಂತಾದ ಸಂಘ, ಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.1993 ರಲ್ಲಿ ಲಭಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಭಾರತದಲ್ಲಿ ಗ್ರಂಥಾಲಯ ವೃತ್ತಿಯಲ್ಲಿಯೇ ಅತ್ಯುನ್ನತವಾದ ರಂಗನಾಥನ್-ಕೌಲಾ ಪ್ರಶಸ್ತಿ ಹಾಗೂ ಸ್ವರ್ಣಪದಕವನ್ನು ಪಡೆದಿರುವುದು ಗಮನಾರ್ಹ. ಇವರು ದಿನಾಂಕ 4-8-2018 ರಂದು ಸ್ವರ್ಗಸ್ಥರಾದರು. ಇವರ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು 2015ರಲ್ಲಿ ದತ್ತಿ ಸ್ಥಾಪಿಸಿ, ಪ್ರತಿವರ್ಷಇವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.