ಲೋಕದರ್ಶನ ವರದಿ
ಗದಗ 18: ಇಂದಿನ ಸ್ಪಧರ್ಾತ್ಮಕ, ಜಾಗತೀಕರಣದ ಯುಗದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಕಲೆ, ವಾಣಿಜ್ಯ, ವಿಜ್ಞಾನ ವಿದ್ಯಾಥರ್ಿಗಳೆಲ್ಲರ ಸದ್ಭಳಕೆಯಿಂದ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರೊ..ಎಸ್.ವಿ. ಸಂಕನೂರ ಹೇಳಿದರು.
ನಗರದ ತಮ್ಮ ನಿವಾಸದ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕವಿವಿಗೆ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾಥರ್ಿನಿಯರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅವರು ಭವಿಷ್ಯದಲ್ಲಿ ಕೈಗೊಳ್ಳಬಹುದಾದ ನಿಧರ್ಾರ, ಅವರ ಕನಸು, ಗುರಿಗಳ ಕುರಿತು ಮಾತನಾಡಿದರು.
ಭಾರತ ದೇಶವನ್ನು ಆಳುವವರು ರಾಜಕಾರಣಿಗಳಲ್ಲ. ಕೇವಲ ಅಧಿಕಾರಿಶಾಹಿಗಳು, ರಾಜಕಾರಣಿಗಳು ಮಂತ್ರಿ, ಸಿಎಂ, ಪಿಎಂ ಸೇರಿದಂತೆ ಎಷ್ಟೇ ದೊಡ್ಡ ಹುದ್ದೆಗೇರಿದರೂ ಸಹ ಅವರು ಜನರ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೇ ಮನವಿ ಮಾಡಿಕೊಳ್ಳಬೇಕು. ಆದ್ದರಿಂದ ರ್ಯಾಂಕ್ ವಿಜೇತ ವಿದ್ಯಾಥರ್ಿಗಳೂ ಸೇರಿದಂತೆ ಪದವಿ ಪಾಸಾಗಿರುವ ಎಲ್ಲ ವಿದ್ಯಾಥರ್ಿಗಳ ಗುರಿ ಐಎಎಸ್, ಐಪಿಎಸ್, ಐಎಫ್ಎಸ್ ಪರೀಕ್ಷೆಗಳತ್ತ ಇರಲಿ ಎಂದು ಹೇಳಿದರು.
ಶಿಕ್ಷಕರು, ಪಾಲಕರು ತಮ್ಮ ಮಕ್ಕಳನ್ನು ಕೇವಲ ಸರಕಾರಿ ಉದ್ಯೋಗಕ್ಕಾಗಿ ಓದಿಸದೇ, ಅವರನ್ನು ಸಮಾಜಕ್ಕೆ ಒಳ್ಳೆಯ ಕೊಡುಗೆಗಳಾಗಿ ರೂಪಿಸಬೇಕು. ಉನ್ನತ ಶಿಕ್ಷಣ ಪಡೆದು ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸಿ ಹಿರಿಯ ಅಧಿಕಾರಿಗಳಾಗಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ರ್ಯಾಂಕ್ ಪಡೆದ ವಿದ್ಯಾಥರ್ಿನಿಯರಾದ ಅಕ್ಷತಾ ಕೆ. ಬಿಎಸ್ಸಿ (ಶೇ.94-69) 2ನೇ ರ್ಯಾಂಕ್, ತಬಸುಮ ಎಸ್. ಇನಾಮದಾರ ಬಿಎಸ್ಸಿ (ಶೇ.94.56) 3ನೇ ರ್ಯಾಂಕ್, ರಷ್ಮಿ ಕೇಸರಿ ಬಿಎಸ್ಸಿ (ಶೇ.93.25) 8ನೇ ರ್ಯಾಂಕ್, ವಿಜೇತಾ ಹುಣಸಿಮರದ ಬಿಕಾಂ (ಶೇ.95) 6ನೇ ರ್ಯಾಂಕ್, ಅನುಶಾ ಎಸ್. ಪಾಟೀಲ ಬಿಸಿಎ 2ನೇ ರ್ಯಾಂಕ್ ಹಾಗೂ ಎಎಸ್ಎಸ್ ಕಾಮರ್ಸ ಕಾಲೇಜ್ನ ಕುಮಾರಿ ಮಧು ವಿಜಯ ಕಬಾಡಿ ಬಿಕಾಂ (ಶೇ.96.62) 2ನೇ ರ್ಯಾಂಕ್ ಪಡೆದ ವಿದ್ಯಾಥರ್ಿಗಳನ್ನು ವಿಧಾನ ಪರಿಷತ್ ಸದಸ್ಯರಾದ ಪ್ರೊ..ಎಸ್.ವಿ. ಸಂಕನೂರ ಸನ್ಮಾನಿಸಿ ಗೌರವಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಟಿ ಕಾಲೇಜ್ ಪ್ರಾಚಾರ್ಯರಾದ ಸಿ.ಲಿಂಗಾರೆಡ್ಡಿ ಮಾತನಾಡಿ, ಪಿಯುಸಿ ಬಳಿಕ ವಿಜ್ಞಾನ ವಿಷಯ ಓದಿ ಇಂಜಿನೀಯರ್, ಡಾಕ್ಟರ್ ಹಾಗೂ ಕಂಪ್ಯೂಟರ್ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಹೋದರೆ, ಶಿಕ್ಷಕರರಾಗುವವರು ಯಾರು? ಮುಂದಿನ ಪೀಳಿಗೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವವರು ಯಾರು ಎಂದು ಪ್ರಶ್ನಿಶಿಸಿದರು.
ಶಿಕ್ಷಕರ ಮಾರ್ಗದರ್ಶನ, ಪಾಲಕರ ಜವಾಬ್ದಾರಿ ಇಂದು ರ್ಯಾಂಕ್ ವಿಜೇತ ವಿದ್ಯಾಥರ್ಿಗಳಲ್ಲಿ ಕಾಣುತ್ತಿದೆ. ಕೆಎಲ್ಇ ಸಂಸ್ಥೆಯ ಜೆಟಿ ಕಾಲೇಜ್ಗೆ ಈ ಬಾರಿ ಐದು ರ್ಯಾಂಕ್ ಬಂದಿರುವುದು ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೇರಿಸಿದೆ. ಸಾಧಕ ವಿದ್ಯಾಥರ್ಿಗಳು ಹಾಗೂ ಮಾರ್ಗದರ್ಶನ ನೀಡಿದ ಉಪನ್ಯಾಸಕರು ಹಾಗೂ ಪಾಲಕರಿಗೆ ಪ್ರಾಚಾರ್ಯ ಸಿ.ಲಿಂಗಾರೆಡ್ಡಿ ಅವರು ಶುಭಾಶಯ ಕೋರಿದರು.
ಎಎಸ್ಎಸ್ ಕಾಮರ್ಸ ಕಾಲೇಜ್ನ ಪ್ರಾಚಾರ್ಯ ಡಾ.ಎಂ.ಎಲ್.ಗುಳೇದಗುಡ್ಡ, ಪ್ರಾಚಾರ್ಯ ನರಗುಂದ, ಎಂ.ಸಿ. ಕಟ್ಟಿಮನಿ ಸೇರಿದಂತೆ ಪಾಲಕರು, ರ್ಯಾಂಕ್ ವಿಜೇತ ವಿದ್ಯಾಥರ್ಿನಿಯರು ಮಾತನಾಡಿ, ತಮ್ಮ ಅನುಭವಗಳನ್ನು ಹಂಚಿಕೊಂಡರು.
ಉಪನ್ಯಾಸಕರಾದ ಡಾ.ಡಿ.ಬಿ. ಡಾವಣಗೇರಿ, ಎ.ಜೆ. ಹಿರೇಮಠ, ಬೆಂಗಳೂರು, ಕಾಜಗಾರ, ರಾಠೋಡ, ಹಕಾರಿ, ಹಾದಿಮನಿ ಹಾಗೂ ಕನರ್ಾಟಕ ರಾಜ್ಯ ಪದವಿಪೂರ್ವ ನೌಕರರ ಸಂಘ, ವಿಪ ಸದಸ್ಯ ಎಸ್.ವಿ. ಸಂಕನೂರ ಅಭಿಮಾನಿ ಬಳದವರು ಉಪಸ್ಥಿತರಿದ್ದರು. ಎ.ಎಂ. ಅಂಗಡಿ ಸ್ವಾಗತಿಸಿದರು. ಎನ್.ವಿ. ಜೋಶಿ ವಂದಿಸಿದರು.