ಬಸೇರಾ ಯತೀಮ್ ಖಾನಾ ಉದ್ಘಾಟನೆ

ಲೋಕದರ್ಶನ ವರದಿ

ಕೊಪ್ಪಳ 08: ನಗರದ ಜೆಸ್ಕಾಂ ಕಛೇರಿ ರಸ್ತೆಯಲ್ಲಿರುವ ಖಾಸ್ಗಿ ಕಟ್ಟಡ್ಡಯೊಂದರಲ್ಲಿ ಬಡ ನಿರ್ಗತಿಕರ ಮತ್ತು ಆನಾಥ ಮಕ್ಕಳಿಗಾಗಿ ಏರ್ಪಡಿಸಿರುವ ಬಸೇರಾ ಯತೀಮ್ ಖಾನಾ ಅನಾಥಶ್ರಮದ ಉದ್ಘಾಟನೆ ಜರುಗಿತು.

ಕನರ್ಾಟಕ ಉರ್ದು  ಅಕ್ಯಾಡಮಿ ರಾಜ್ಯಧ್ಯಕ್ಷರಾದ ಮುಬೀನ್ ಮುನವ್ವರ್ ರವರು ಮತ್ತು ಹೊಸಪಟೇಟೆಯ ಸಮಾಜ ಸೇವಕ ಹಾಗೂ ಸವರ್ೊಜನ ಸುಕಿನೊ ಭವಂತು ಟ್ರಸ್ಟ್ನ ಅಧ್ಯಕ್ಷ ಕೆ.ಮಹೇಶ ಕುಮಾರವರು ಜಂಟಿಯಾಗಿ ಉದ್ಘಾಟನೆ ನೆರವೆರಿಸಿ ಅನಾಥಶ್ರಮದ ಪ್ರಾರಂಭೊತ್ಸವಕ್ಕೆ ಚಾಲನೆ ನೀಡಿದರು.

ನಂತರ ಏರ್ಪಡಿಸಿದ ಸರಳ ಸಾಂಖೆತಿಕ ಸನ್ಮಾನ ಸಮಾರಂಭ ಸ್ವಿಕರಿಸಿ ಮುಬೀನ್ ಮುನವ್ವರ್ ರವರು ಮಾತನಾಡಿ ಕನರ್ಾಟಕ ಉದರ್ು ಅಕ್ಯಾಡಮಿ ವತಿಯಿಂದ ಸಿಗಬಹುದಾದ ಸಹಾಯ ಸೌಕರ್ಯಗಳನ್ನು ವದಗಿಸಿ ಕೊಡುವ ಭರವಸೆ ನೀಡಿದ ಅವರು ಆದಷ್ಟು ಬೇಗ ಅನಾಥಾಶ್ರಮವನ್ನು ಸ್ವಂತ ಕಟ್ಟಡ್ಡದಲ್ಲಿ ಕಾಯರ್ಾರಾಂಭಿಸಿಲು. ಕೊಪ್ಪಳದ ಜನಪ್ರತಿನಿಧಿಗಳ ಸಹಯೋಗದಲ್ಲಿ ಬಸೇರಾ ಸಂಸ್ಥೆ ಪದಾಧಿಕಾರಿಗಳು ಶ್ರಮಿಸಲಿ ಎಂದ ಅವರು ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯವ್ಯಶಕವಾಗಿದೆ ಎಂದರು.

ಹೊಸಪಟೇಟೆಯ ಸಮಾಜ ಸೇವಕ ಹಾಗೂ ಸವರ್ೊಜನ ಸುಕಿನೊ ಭವಂತು ಟ್ರಸ್ಟ್ನ ಅಧ್ಯಕ್ಷ ಕೆ.ಮಹೇಶ ಕುಮಾರ ಮಾತನಾಡಿ ಅನಾಥಾಶ್ರಮ ಕಾರ್ಯ ಅನಾಥ ಮಕ್ಕಳ ಪಾಲಿಗೆ ಸಂಜಿವಿನಯಾಗಿದೆ. ಇಂತಹ ಕಾರ್ಯಕ್ಕೆ ಸಹಕಾರ ನೀಡಲು ಸದಾ ಸಿದ್ದನಿರುವದಾಗಿ ಹೇಳಿದ ಅವರು ಸಂಸ್ಥೆಯ ಮು8ಖ್ಯಸ್ಥ ಎಂ.ಡಿ.ಯುಸುಫ್ ಖಾನ್ ನೇತೃತ್ವದ ಬಳಗದ ಕಾರ್ಯಕ್ಕೆ ಶ್ಲ್ಯಾಘಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಂ ಸಾದಿಕ ಅಲಿ, ಟ್ರಸ್ಟನ್ ಸದಸ್ಯ ಶಬ್ಬೀರ್, ತಾಜುದ್ದಿನ್, ಶರ್ಮಸ್ ಅಲಿ, ಮೊಯಿನುದ್ದಿನ್ ನಿಯಾಜಿ ಸೇರಿದಂತೆ ಬಸೇರಾ ಯತೀಮ್ ಖಾನಾದ ಮೆಲ್ವೀಚಾರಕಿ ಸಾಬೀರಾ ಬೇಗಂ ಸೇರಿದಂತೆ ಅನಾಥಶ್ರಮದ ಮಕ್ಕಳ ಪಾಲ್ಗೊಂಡಿದ್ದರು.