ಸಾರಿಗೆ ಆಶಾಕಿರಣ ನೇತ್ರ ತಪಾಸಣಾ ಯೋಜನೆಯ ಉದ್ಠಾಟನೆ

Inauguration of Transport Ashakirana Eye Inspection Scheme

ಸಾರಿಗೆ ಆಶಾಕಿರಣ  ನೇತ್ರ ತಪಾಸಣಾ ಯೋಜನೆಯ ಉದ್ಠಾಟನೆ  

ಗದಗ  7:  ವಾ.ಕ.ರ.ಸಾ.ಸಂಸ್ಥೆ0ು ನಗರ ಸಾರಿಗೆ ಘಟಕ ಹುಬ್ಬಳ್ಳಿ0ುಲ್ಲಿ   ಸೋಮವಾರ ಸಂಸ್ಥೆ0ು ನೌಕರರಿಗಾಗಿ  ಸಾರಿಗೆ ಆಶಾಕಿರಣ   ನೇತ್ರ ತಪಾಸಣಾ 0ೋಜನೆ0ು ಉದ್ಘಾಟನಾ ಕಾ0ುರ್ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

 ಸಮಾರಂಭದ ಉದ್ಘಾಟನೆ ಹಾಗೂ ಎಸಬಿಐ  ಬ್ಯಾಂಕ್ ನಿಂದ ಒಂದು ಕೋಟಿ ಪರಿಹಾರ ವಿಮೆ ಜಾರಿ 0ೋಜನೆ0ುನ್ನು ಸಂಸ್ಥೆ0ು ಅಧ್ಯಕ್ಷರು ಹಾಗೂ ಕಾಗವಾಡ ಶಾಸಕರಾದ   ಭರಮಗೌಡ (ರಾಜು) ಅ.ಕಾಗೆ ಅವರು  ನೆರವೇರಿಸಿ ಮಾತನಾಡಿ ಎಸ್‌ಬಿಐ ಬ್ಯಾಂಕ್ ನಿಂದ ಒಂದು ಕೋಟಿ ಅಪಘಾತ ಪರಿಹಾರ ವಿಮೆ ಜಾರಿ0ಾಗಿದೆ. ಹೆಚ್ಚು ಶ್ರಮ ಪಡುವ ಸಾರಿಗೆ ನೌಕರರು ಅನೀರೀಕ್ಷಿತವಾಗಿ ನಿಧನರಾದಲ್ಲಿ, ಅವರುಗಳ ಅವಲಂಬಿತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಬಾರದು ಎಂಬ ಸದುದ್ದೇಶದಿಂದ ಮತ್ತು ನೌಕರರ ಅವಲಂಬಿತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಈ 0ೋಜನೆ0ುನ್ನು ತರಲಾಗಿದೆ ಎಂದರು. 

 ಇದೇ ಸಂದರ್ಭದಲ್ಲಿ ಸಂಸ್ಥೆ0ುಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಕುಟುಂಬ ಕಲ್ಯಾಣ ನಿಧಿ ಹಾಗೂ ಅಪಘಾತ ಪರಿಹಾರ ನಿಧಿ ಚೆಕ್ ಗಳನ್ನು ವಿತರಿಸಿದರು.ಡಾ. ಮೋಹನ ಪಾಟೀಲ, ರೀಜನಲ್ ಮ್ಯಾನೇಜರ್ ರವರು ಮಾತನಾಡಿ ಎಸ್‌ಬಿಐ ಬ್ಯಾಂಕಿನ ಈ 0ೋಜನೆ0ು ಮೂಲಕ  ಸಂಸ್ಥೆ0ು ನೌಕರರಿಗೆ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.  

 ಡಾ.ನಿರಂಜನ್ ಜೋಶಿ, ರವರು, ಮಾತನಾಡಿ ವಾ0ುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ0ು ಸಿಬ್ಬಂದಿಗಳಿಗೆ ಎಂ.ಎಂ. ಜೋಶಿ ಮತ್ತು ಅಗ್ರವಾಲ ಕಣ್ಣಿನ ಆಸ್ಪತ್ರೆಗಳ  ಸಹ0ೋಗದೊಂದಿಗೆ ಉಚಿತ ತಪಾಸಣೆ ಮತ್ತು ಕನ್ನಡಕವನ್ನು ವಿತರಿಸುವ 0ೋಜನೆ ಇದಾಗಿದೆ ಎಂದು ಹೇಳಿದರು. 

ಎಂ.ಎಂ.ಜೋಶಿ, ಕಣ್ಣಿನ ಆಸ್ಪತ್ರೆ ನಿರ್ದೇಶಕರಾದ ಡಾ. ಎಸ್‌.ಎಂ.ಜೋಶಿ  ಅವರು ಮಾತನಾಡಿ, ನೇತ್ರ ತಪಾಸಣೆ ತುಂಬಾ ಮುಖ್ಯವಾದದ್ದು,  ಭಾರತ ದೇಶದಲ್ಲಿ ಸುಮಾರು ಆರು ಕೋಟಿ ಜನ ಅನಗತ್ಯ ಅಂಧರಿದ್ದಾರೆ, ವಾ0ುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ0ುಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ದಿನ ನಿತ್ಯ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತವನ್ನು ತಪ್ಪಿಸಲು ನೇತ್ರ ತಪಾಸಣೆ ತುಂಬಾ ಮುಖ್ಯವಾಗಿದೆ ಮತ್ತು ಸಂಸ್ಥೆ0ು ನೌಕರರಲ್ಲದೇ ಅವರ ಅವಲಂಭಿತರರಿಗೂ ಕೂಡಾ ಈ ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದರು. ಮತ್ತು  ಇದರ ಸದುಪ0ೋಗ ಪಡೆದುಕೊಳ್ಳುವಂತೆ ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ  ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಅವರು   ಮಾತನಾಡಿ  2025ರಲ್ಲಿ ಸಂಸ್ಥೆ0ು ನೌಕರರ ಅನುಕೂಲಕ್ಕಾಗಿ ಹಲವು 0ೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.  ಅದರಲ್ಲಿ ಮೊದಲನೆ0ುದಾಗಿ ಎಸ್‌ಬಿಐ ಬ್ಯಾಂಕಿನಿಂದ ಒಂದು ಕೋಟಿ ಅಪಘಾತ ಪರಿಹಾರ ವಿಮೆ ಜಾರಿ0ಾಗಿದೆ. ಸಂಸ್ಥೆ0ು ನೌಕರರ ಅನುಕೂಲಕ್ಕಾಗಿ ತಮ್ಮ ಸಮಸ್ಯೆಗಳ ಕುರಿತು ಕಛೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ವಾ0ುವ್ಯ ಸ್ನೇಹಿ   ಆ್ಯಪ್‌ನ್ನು  ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಸಿಬ್ಬಂದಿಗಳು ಪಿಎಫ್  ಮಾಹಿತಿ  ಇ- ಅರ್ಜಿ ಸಲ್ಲಿಕೆ,  ಸಾರಿಗೆ ಸ್ಪಂದನ ದಡಿ ದೂರು/ಮನವಿ ಸಲ್ಲಿಕೆ ಮುಂತಾದ ಸೌಲಭ್ಯಗಳಿದ್ದು   ಸದುಪ0ೋಗಪಡಿಸಿಕೊಳ್ಳುವಂತೆ ತಿಳಿಸಿದರು.  

ಸಮಾರಂಭದಲ್ಲಿ ಇಲಾಖಾ ಮುಖ್ಯಸ್ಥರಾದ ವಿಜ0ುಶ್ರೀ ನರಗುಂದ, ಗಣೇಶ ರಾಠೋಡ, ಬಿ.ಬೋರ0್ಯು, ಜಗದಂಬಾ  ಕೋಪರ್ಡೆ, ಜಿ.ಶ್ರೀನಾಥ ಹಾಗೂ ಅಧಿಕಾರಿಗಳಾದ ಎಂ.ಬಿ.ಕಪಲಿ, ರವಿ ಅಂಚಿಗಾವಿ, ಪಿ.ಆರ್‌.ಕಿರಣಗಿ, ಶಿವಾನಂದ ನಾಗಾವಿ, ವಿಭಾಗೀ0ು ನಿ0ುಂತ್ರಣಾಧಿಕಾರಿ  ಎಂ.ಸಿದ್ಧಲಿಂಗೇಶ, ಎಚ್‌.ರಾಮನಗೌಡರ, ಕಾರ್ಮಿಕ ಮುಖಂಡರುಗಳಾದ ಆರ್‌.ಎಫ್‌.ಕವಳಿಕಾಯಿ, ಗಂಗಾಧರ ಕಮಲದಿನ್ನಿ ಮತ್ತು ಸಂಸ್ಥೆ0ು ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ.ನಾ0ುಕ ರವರು ಸ್ವಾಗತಿಸಿದರು, ಸುನಿಲ ಪತ್ರಿ.ರವರು ಕಾ0ುರ್ಕ್ರಮ ನಿರೂಪಿಸಿ ವಂದಿಸಿದರು.