ಬಾಲಕಿಯರ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ
ಜಮಖಂಡಿ 06: ಜಿಲ್ಲಾ ಉಸ್ತುವರಿ ಸಚಿವ ಆರ್,ಬಿ,ತಿಮ್ಮಾಪೂರ ಮುಂದೆ ಹಾಲಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಭಾಷಣ ಸಮಯದಲ್ಲಿ ಜಟ್ಟಾಪಟ್ಟಿ ನಡೆಯಿತು. ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ (ಪ.ಜಾ) ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು. ಕೊಣ್ಣುರ ಮಡ್ಡಿಪ್ಲಾಟ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲದೆ. ವಂಚಿತರಾಗಿದ್ದರು. ಅಲ್ಲಿರುವ ಜನರಿಗೆ ವಿದ್ಯುತ್ಯಿಲ್ಲದೆ ಇದ್ದರು. ಸಾಕಷ್ಟು ಬಾರಿ ಜನಪ್ರತಿನಿಧಿಗಳ ಹತ್ತಿರ ಹೋಗಿ ಮನವಿ ಮಾಡಿದರು. ಆದರೆ ಅವರ ಯಾವುದೆ ಕೆಲಸ ಕಾರ್ಯಗಳು ಆಗಲ್ಲಿಲ್ಲ. ಮರಳಿ ನನ್ನ ಬಳಿ ಬಂದು ತಮ್ಮ ಅಳಲನ್ನು ತೊಡಿಕೊಂಡರು. ನಾನು ಗ್ರಾಮಕ್ಕೆ ಆಗಮಿಸಿ. ಸಭೆಯನ್ನು ಮಾಡಿ. ಅಲ್ಲಿರುವ ಪಿಡಿಒ ಹಾಗೂ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಅಲ್ಲಿನ ಸಮಸ್ಯೆಯನ್ನು ಬಗ್ಗೆ ಹರಿಸುವ ಕೆಲಸ ಮಾಡಿದ್ದೇನೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿ ತಮ್ಮ ಭಾಷಣಕ್ಕೆ ವಿರಾಮ ಹೇಳಿದರು. ವೇದಿಕೆಯಲ್ಲಿ ಕುಳಿತಿದ್ದ ಹಾಲಿ ಶಾಸಕ ಜಗದೀಶ ಗುಡಗುಂಟಿ ಮತ್ತೇ ಎದ್ದು ಹೋಗಿ ಮೈಕ್ ಹಿಡಿದು. ನಾನು ಬ್ಯಾನರ್ಗಳಲ್ಲಿ ಪೋಜು ಕೊಡುವ ವ್ಯಕ್ತಿ ಅಲ್ಲ. ನಾನು ಅಭಿವೃದ್ಧಿ ಮಾಡುವವನ್ನು. ಅವರು ಸುಳ್ಳು ಹೇಳುತ್ತಿದ್ದಾರೆ. ನಾನು ನನ್ನ ಸ್ವಂತ ಹಣ 8 ಲಕ್ಷ ರೂ,ಗಳನ್ನು ಖರ್ಚು ಮಾಡಿ ವಿದ್ಯುತ್ ಕೊಡಿಸಿದ್ದೇನೆ. ಕೇಳಿ ಜನರನ್ನು ಎಂದು ಜೊರ ಧ್ವನಿಯಲ್ಲಿ ಹೇಳಿದರು. ಅಷ್ಟರಲ್ಲಿ ಕೆಲವರು ಹೌದು ಎನ್ನುತ್ತಿದ್ದರು. ಕೆಲವರು ತಮ್ಮ ಬೇಕಾದವರಿಗೆ ಅಷ್ಟೇ ಕೊಡಿಸಿದ್ದಾರೆ ಎಂದು ಜನರು ಕೂಗಾಟ-ಜಿರಾಟ ನಡೆಸಿದರು. ವೇದಿಕೆಯಲ್ಲಿ ಹಾಲಿ ಶಾಸಕ ಜಗದೀಶ ಗುಡಗುಂಟಿ ಬೆಂಬಲಿಗರು ಸಾಥ ನೀಡುತ್ತಿದ್ದರು. ವೇದಿಕೆಯಲ್ಲಿ ಕುಳಿತಿದ್ದ ಸಚಿವ ತಿಮ್ಮಾಪೂರ ತಕ್ಷಣ ಎದ್ದು. ಮೈಕ್ ಹಿಡಿದ್ದು. ಸುಮ್ಮನೆ ಇರ್ಪ. ಯಾಕೆ ಚಿರಾಡುತ್ತಿದ್ದಿರಿ. ಸುಮ್ಮಯಿರಿ ಎಂದು ಸಮಾಧಾನ ಪಡಿಸುತ್ತಿದ್ದರು. ಮಾಜಿ ಶಾಸಕನ ಬೆಂಬಲಿಗರು ಹಾಗೂ ಹಾಲಿ ಶಾಸಕನ ಬೆಂಬಲಿಗರು ಕೂಗಾಟ, ಚಿರಾಟ ಮಾಡುತ್ತಿದ್ದಂತೆ ಮಧ್ಯ ಪೋಲಿಸರು ಪ್ರವೇಶಿಸಿದರು. ಸಚಿವರು ಎಲ್ಲರನ್ನು ಸಮಾಧಾನ ಪಡಿಸಿದರು. ಸಚಿವ ಆರ್,ಬಿ,ತಿಮ್ಮಾಪೂರ ಮಾತನಾಡಿ, ನಿಮ್ಮ, ನಿಮ್ಮ ವ್ಯಯಕ್ತಿ ಜಗಳವನ್ನು ವೇದಿಕೆಯಲ್ಲಿ ಹಂಚಿಕೊಳ್ಳಬಾರದು. ನೀವುಗಳು ಜನರ ಪರವಾಗಿ ಕೆಲಸ ಮಾಡಬೇಕು ಹೊರತು. ನನ್ನ ಅವಧಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ನೀನು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಬಾರದು. ಅದು ಚುನಾವಣೆ ಸಮಯದಲ್ಲಿ ಹೇಳಿಕೊಳ್ಳಬೇಕು.ಇದು ಸರಕಾರದ ಕೆಲಸವಾಗಿದೆ. ವಸತಿ ಶಾಲೆಗೆ ಮಾಜಿ ಸಚಿವ ಕಾರಜೋಳ, ಮಾಜಿ ಶಾಸಕ ನ್ಯಾಮಗೌಡ ಅಡಿಗಲ್ಲು ಮಾಡಿದರು. ಉದ್ಘಾಟನೆ ತಿಮ್ಮಾಪೂರ ಮತ್ತು ಶಾಸಕ ಗುಡಗುಂಟಿ ಮಾಡಿದರು. ಜನಪ್ರತಿನಿಧಿಗಳು ನಾವು ನಾನು ಕಟ್ಟಿಸಿದೆ ಎಂದು ಹೇಳಿಕೊಳ್ಳಬಾರದು. ಅದು ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಇದು ಸರಕಾರ ಇಂತಹ ದೊಡ್ಡ ಬಿಲ್ಡಿಂಗ್ ಕಟ್ಟಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಮಾಡಬೇಕು ಎಂದರು.