ಡಿ.31 ರಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಬಳ್ಳಾರಿ 25: ಬಾಕಿ ವೇತನ ಪಾವತಿಸಬೇಕು, ವೇತನ ಪರಿಷ್ಕರಣೆ, ನಿವೃತ್ತ ನೌಕರರಿಗೆ ಹಣ ಬಿಡುಗಡೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಓಡಾಟ ಬಂದ್ ಆಗಲಿದೆ. ಇದೆ ವೇಳೆಯಲ್ಲಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ರಾಜ್ಯ ರಸ್ತೆ ಸಾರಿಗೆ ನಡುವೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರು ಗ್ಯಾರೆಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆಗೆ ಶೇ 25 ರಷ್ಟು ಆದಾಯ ಹೆಚ್ಚಿದೆ.
ಯೋಜನೆಯ ಹಣವನ್ನು ಸರ್ಕಾರ ಸಂಪೂರ್ಣ ಕೊಟ್ಟಿಲ್ಲ. ಕೊಟ್ಟರೆ ನೌಕರರ ಬೇಡಿಕೆ ಈಡೇರಿಸಲು, ಹೊಸ ಬಸ್ ಖರೀದಿಸಬಹುದು.ಜಂಟಿ ಕ್ರಿಯಾ ಸಮಿತಿಯಿಂದ ಈ ಹಿಂದೆ ತೀರ್ಮಾನಿಸಿದಂತೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನವೇ ಬೆಳಗಾವಿ ಚಲೋ ನಡೆಸಿ ಮುಖ್ಯಮಂತ್ರಿಯವರಿಗೆಮುಷ್ಕರದ ಬಗ್ಗೆ ಹೇಳಿದೆ.ಸಚಿವ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಅವರು ಬೆಳಗಾವಿ ಚಲೋ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಸ್ವೀಕರಿಸಿ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದರು.
ಆದರೆ ಆಗಲಿಲ್ಲ ಸರ್ಕಾರವು ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯ ಮನೋಭಾವನ್ನು ಬಿಟ್ಟು ಕೂಡಲೇ ನಮ್ಮೊಡನೆ ಚರ್ಚಿಸಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಡಿ. 31 ರಂದು ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ.ಹಿಂದಿನ ವೇತನ ಹೆಚ್ಚಳ 38 ತಿಂಗಳ ಬಾಕಿ ಉಳಿಯಲು ಸರ್ಕಾರ ಹಾಗೂ ಆಡಳಿತ ವರ್ಗದ ವಿಳಂಬ ಧೋರಣೆಯೇ ಕಾರಣವಾಗಿದ್ದು, ಸಾರಿಗೆ ನೌಕರರು ಯಾವುದೇ ರೀತಿಯಿಂದಲೂ ಹೊಣೆಗಾರರಲ್ಲ ಎಂದರು.ನಾಲ್ಕು ಸಾವಿರ ಸಿಬ್ವಂದಿ ಕೊರತೆ ಇದೆ. ಆದರೂ ನೌಕರರು ಹಾಗೇ ಕರ್ತವ್ಯ ಮಾಡುತ್ತಿದೆ. ಅದಕ್ಕಾಗಿ ಸರ್ಕಾರ ನಮ್ಮ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಆದಿಮೂರ್ತಿ, ಹನುಮಂತಪ್ಪ, ಗಾದಲಿಂಗಪ್ಪ,ಶಿವಕುಮಾರ್, ಚೆನ್ನಪ್ಪ, ಬಸವರಾಜ್ ಇತರರು ಉಪಸ್ಥಿತರಿದ್ದರು.