ಲೋಕದರ್ಶನ ವರದಿ
ಗಜೇಂದ್ರಗಡ 07: ಪ್ರಾಚೀನ ಕಾಲದಿಂದಲೂ ಭಾರತವು ಆಧ್ಯಾತ್ಮದಲ್ಲಿ ಪ್ರಭುದ್ಧವು, ಶ್ರೀಮಂತ ಆಗಿದೆ ಅನೇಕ ಋಷಿ ಪುಂಗವರು ತಮ್ಮ ಯೋಗ, ಧ್ಯಾನ, ಜಪ ತಪಗಳಿಂದ ಈ ಭೂಮಿಯನ್ನು ಪೂಣ್ಯ ಭೂಮಿಯನ್ನಾಗಿಸಿದ್ದಾರೆ ಎಂದು ಸವರ್ೋದಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ ಕೆ ಮಾದಿ ಹೇಳಿದರು.
ಅವರು ಹತ್ತಿರದ ಗುಳಗುಳಿ ಗ್ರಾಮದಲ್ಲಿ ಜರುಗಿದ ಪಪೂ ಲಿಂಗಾನಂದ ಋಷಿಗಳ ಪೂಣ್ಯಾರಾಧನೆ ಸಂದರ್ಭದಲ್ಲಿ ಸನ್ಮಾನವನ್ನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನ ವಹಿಸಿದ್ದ ಗುಳಗುಳಿ ಯೋಗಾಶ್ರಮದ ಋಷಿಕುಮಾರ ಮಹಾಸ್ವಾಮಿಗಳು ಈ ಮಥ್ರ್ಯವನ್ನು ಸ್ವರ್ಗವನ್ನಾಗಿ ಪರಿವತರ್ಿಸಿದ ಕೀತರ್ಿ ಲಿಂಗಾನಂದ ಮಹಾಋಷಿಗಳಿಗು ಹಾಗೂ ದೇವಮ್ಮ ತಾಯಿಯವರಿಗು ಸಲ್ಲುತ್ತದೆ ಎಂದರು.ಮೂತ್ರ ಪಿಂಡದ ದೇಹವನ್ನು ಮಂತ್ರ ಪಿಂಡವನ್ನಾಗಿಸಿ ಪಿಂಡಾಂಡ ಮತ್ತು ಬ್ರಹ್ಮಾಂಡದ ಮಧ್ಯೆ ಅದ್ವೈತತೆಯ ಆಗರತೆಯನ್ನು ಬೀತ್ತಿ ಜೀವ ಬ್ರಹ್ಮರ ಏಕತಾನತೆಯನ್ನ ನುಡಿಸಿದ ಋಷಿ ಪುಂಗವರ ಸಾಧನೆ ಶ್ರಮ ಅನನ್ಯ ಎಂದು ಅವರ ಪೂಣ್ಯಾರಾಧನೆಯ ಸಮಯದಲ್ಲಿ ಮೇಲಕು ಹಾಕಿದರು.
ಧರ್ಮ ಸಭೆಯಲ್ಲಿ ಪೂಜ್ಯ ಶ್ರೀಗಳಾದ ದೇವಾನಂದ ಮಹಾಸ್ವಾಮಿಗಳು ಬಸವಪೂರ ಇಜೆ, ರಾಜಾನಂದ ತಾತನವರು ವಡ್ಡರಕಲ್ಲ, ಲಿಂಗಪ್ಪಜ್ಜನವರು ಬ್ರಹ್ಮ ಯೋಗಾಶ್ರಮ ಮುಳಗುಂದ ಸಂಗಪ್ಪಜ್ಜ ಸ್ವಾಮಿಗಳು ಯೋಗಾಶ್ರಮ ಗುಳಗುಳಿ ಶಿವಶರಣೆ ಕಮಲಮ್ಮ ತಾಯಿಯವರು ಉಪಸ್ಥಿತರಿದ್ದು ಆಶ್ರೀವರ್ಚನ ನೀಡಿದರು.
ಗುಳಗುಳಿ ಗ್ರಾಮದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾಥರ್ಿಗಳಿಗೆ ಪ್ರೋತ್ಸಾಯದಾಕ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಕೊನೆಯಲ್ಲಿ ಶರಣು ಸಮರ್ಪಣೆ ಸಲ್ಲಿಸಿ ಭೀಮೇಶ ರೋಣದ ಕಾರ್ಯಕ್ರಮ ನಿರೂಪಿಸಿದರು.
ಈ ಪೂಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಪರಶುರಾಮ ಹೇಗ್ಗಣವರ, ಶಿವಲೀಲಾ ಬಾಗಲಿ, ಈರಮ್ಮ ವಸ್ತರದ, ಅಭಿಷೇಕ ಮಾ ಕಮ್ಮಾರ, ನಾಗಮ್ಮ ಮ ರೋಣದ, ರೇಣುಕಾ ಬ ಮುರಳಿ, ಕುಬೇರಪ್ಪ ಮುತಾರಿ, ಹನುಮಂತಪ್ಪ ಮುಳ್ಳುರು, ಬಸಪ್ಪ ಮುರುಳಿ, ಯಮನೂರಪ್ಪ ತಳವಾರ, ಮಲ್ಲಪ್ಪ ಉಪ್ಪಾರ, ದೇವಪ್ಪ ಹಾದಿಮನಿ, ನಿಗಂಪ್ಪ ಗೋರವರ, ಮುತ್ತಪ್ಪ ಹೇಗ್ಗಣ್ಣವರ, ದೋಡ್ಡಪ್ಪ ಹೇಗ್ಗಣ್ಣವರ, ರಾಮಪ್ಪ ಬಾರಕೇರ, ಚುರ್ಚಪ್ಪ ಅಲ್ಲೂರ, ಕಾಜೇಸಾಬ ಹಾಳಕೇರಿ, ದೇವಪ್ಪ ವಾಲಿಕಾರ, ಮಾಳಪ್ಪ ತಳ್ಳಿಕೇರಿ, ವಿರೇಶ ಹಾದಿಮನಿ, ಶಿವು ವಾಳದ, ಮಲ್ಲೇಶ ಉಪ್ಪಾರ, ಫಕಿರೇಶ ಉಪ್ಪಾರ ಊರಿನ ಸಮಸ್ತ ನಾಗರಿಕರು ಹಾಗೂ ಅಕ್ಕನಬಳಗ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರು ಉಪಸ್ಥಿತರಿದ್ದರು.