ಭಾರತೀಯರು ಕಥನ ಸಂಸ್ಕೃತಿಯ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಂಡವರು : ಡಾ. ಚಂದ್ರಶೇಖರ ಕಂಬಾರ

ಲೋಕದರ್ಶನ ವರದಿ

ಗೋಕಾಕ, 4: ನಗರದರೋಟರಿರಕ್ತ ಭಂಡಾರ ಸಭಾಭವನದಲ್ಲಿದಿ: 04-11-2018 ರಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಹಾಗೂ ಭಾವಸಂಗಮ, ಗೋಕಾಕ ಇವರ ಸಹಯೋಗದಲ್ಲಿ ಆಯೋಜಿಸಿದ ಬಸವರಾಜಕಟ್ಟೀಮನಿ ಕಾದಂಬರಿ, ಕಥೆ, ಪತ್ರಿಕೋಧ್ಯಮಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯುವ ಸಾಹಿತ್ಯ ಪುರಸ್ಕಾರ ನೆರವೇರಿಸಲಾಯಿತು. 

ಇಂಗ್ಲೀಷನ ವ್ಯಾಮೋಹದಿಂದ ಸೃಜನಶೀಲತೆ ಹಾಳಾಗುತ್ತದೆ. ಭಾರತೀಯರುಕಥೆ ಹೇಳುವ ಸಂಸ್ಕೃತಿಯನ್ನು ಬೆಳೆಸಿಕೊಂಡವರು. ಒಂದೇ ಕಥೆಯನ್ನು ಭಾರತೀಯ ಮಕ್ಕಳು ಹತ್ತು ಬಗೆಯಲ್ಲಿ ಹೇಳಿದರೆ ಇಂಗ್ಲೀಷನಲ್ಲಿ ಕಥೆ ಹೇಳುವ ಮಕ್ಕಳು ಕಂಠಪಾಠ ಮಾಡಿಕೊಂಡುಒಂದೇ ಬಗೆಯಲ್ಲಿ ಹೇಳುವುದರಿಂದ ಅವರಲ್ಲಿ ಸೃಜನಶೀಲತೆ ಕಾಣುವುದಿಲ್ಲ ಆದ್ದರಿಂದ ನಾವು ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದಿರುವ ಕಥನಕ ೌಶಲ್ಯವನ್ನು ಜತನವಾಗಿ ಇಟ್ಟುಕೊಳ್ಳುವ ಅಗತ್ಯತೆಇದೆನಮ್ಮ ಭಾರತದ ಸಾಹಿತ್ಯದ ಮುಖ್ಯ ಪ್ರಕಾರಕಥನ ನಮ್ಮಕಥನದ ಮೂಲಕವೇ ರಾಮಾಯಣ, ಮಹಾಭಾರತ ಕಟ್ಟಿದ್ದೇವೆ. ಎಂದು ಡಾ. ಚಂದ್ರಶೇಖರಕಂಬಾರ ಅವರು ಅಭಿಪ್ರಾಯಪಟ್ಟರು. ಅವರು ಬಸವರಾಜಕಟ್ಟೀಮನಿ ಪ್ರತಿಷ್ಠಾನ ಆಯೋಜಿಸಿದ 2015, 2016, 2017 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಕಾದಂಬರಿ ವಿಭಾಗದ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. 

ನಮ್ಮ ಭಾರತದ ಸಾಹಿತ್ಯದ ಮುಖ್ಯ ಪ್ರಕಾರಕಥನ ನಮ್ಮಕಥನದ ಮೂಲಕವೇ ರಾಮಾಯಣ, ಮಹಾಭಾರತ ಕಟ್ಟಿದ್ದೇವೆ. ಇಂಗ್ಲೀಷಿನ  ಮೂಲಕ ಮಕ್ಕಳ ಸೃಜನಶೀಲತೆಯನ್ನು ನಾವು ನಾಶಮಾಡುತ್ತಿದ್ದೇವೆ. ಕಟ್ಟೀಮನಿಯವರು ಪ್ರಜಾಪ್ರಭುತ್ವ, ಸಮಾನತೆ, ಹೊಸ ಕಲ್ಪನೆಗಳನ್ನು ಪರಿಚಯಿಸಿದರು. ಕಟ್ಟೀಮನಿಯವರ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವುದು ಆಗಿಲ್ಲ ತೆಂಗಿನ ಗಿಡಕ್ಕೆ ನುಸಿಯಾದರೆ ಔಷದಿ ಕಂಡಿಹಿಡಿಯಲಿಕ್ಕೆ ಆಗಿಲ್ಲ ಎಂದು ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಕಟ್ಟೀಮನಿ ಅವರ ಪ್ರೋತ್ಸಾಹ ಬಹಳ ದೊಡ್ಡದು, ನನ್ನ ಮೊದಲ ಕವನ ಸಂಕಲನ ಪ್ರಕಟಿಸಲು 30 ರೂ ನೀಡಿದನ್ನು ಕಂಬಾರ ಅವರು ಈ ಸಂಧರ್ಭದಲ್ಲಿ ಸ್ಮರಿಸಿದರು. ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ನಾಗನೂರು ಮಠದಡಾ. ಸಿದ್ದರಾಮ ಸ್ವಾಮೀಜಿ ತಮ್ಮ ಆಶಿರ್ವಚನದಲ್ಲಿ  ಸಂಸ್ಕೃತದಲ್ಲಿ ಮೂಢನಂಬಿಕೆ ಇದೆ ಎಂದು ಇಂಗ್ಲೀಷರು ನಂಬಿಸಿದರೂಇಂಗ್ಲೀಷ ಸಾಹಿತ್ಯವನ್ನು ನಾವು ಅನುಕರಿಸಿದ್ದೇವೆ ಎಂದು ಅಭಿಪ್ರಾಯಪಟ್ಟರು. 

ಬಸವರಾಜ ಕಟ್ಟೀಮನಿಯವರು ಯುವಸ್ವಾಮೀಜಿಗಳ ಮನಸ್ಸಿನ ತುಮುಲಗಳ ಕುರಿತು ಕೇಳಿ ವಿವರ ಪಡೆಯಬಯಸಿದ್ದನ್ನು ಸ್ವಾಮೀಜಿ ಸ್ಮರಿಸಿದರು. ವಿಕ್ರಮ ವಿಸಾಜಿ ಅಭಿನಂದನಾ ಪರ ಮಾತುಗಳನ್ನಾಡಿದರು. ದುಷ್ಯಂತ ನಾಡಗೌಡ ಬಹುಮಾನಿತ ಕೃತಿಗಳನ್ನು ಪರಿಚಯಿಸಿದರು. ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಅವರಿಗೆ ಕಥನ ಪ್ರಶಸ್ತಿ, ಡಾ. ಜಗದೀಶ ಕೊಪ್ಪ ಅವರಿಗೆ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೀಪ್ತಿ ಭದ್ರಾವತಿ, ಟಿ. ಎಸ್. ಗೊರವರ, ದಯಾನಂದ, ಫಕೀರ(ಶ್ರೀಧರ ಬನವಾಸಿ) ಅವರಿಗೆಯುವ ಬರಹಗಾರ ಪ್ರಶಸ್ತಿ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಮಲ್ಲಿಕಾಜರ್ುನ ಹಿರೇಮಠ ಅವರು ವಹಿಸಿ ಪ್ರತಿಷ್ಠಾನದ ಈವರೆಗಿನ ಸಾಧನೆಗಳನ್ನು ವಿವರಿಸಿ, ಕಟ್ಟೀಮನಿ ಶತಮಾನೋತ್ಸವದ ರೂಪುರೇಷಗಳನ್ನು ತಿಳಿಸಿದರು.  ಪ್ರತಿಷ್ಠಾನದ ಸದಸ್ಯ ಕಾರ್ಯದಶರ್ಿಗಳಾದ ಶ್ರೀಶೈಲ್ ಕರಿಶಂಕರಿ ಅವರು ಸ್ವಾಗತಿಸಿದರು. ಚಂದ್ರಶೇಖರ ಅಕ್ಕಿಯವರು ಪ್ರಾಸ್ತಾವೀಕ ಮಾತನಾಡಿದರು. ಪ್ರತಿಷ್ಠಾನದ ಸದಸ್ಯರಾದ ಬಾಳಾಸಾಹೇಬ ಲೋಕಾಪೂರ, ರಾಮಕೃಷ್ಣ  ಮರಾಠೆ, ಶಿವಕುಮಾರ ಕಟ್ಟೀಮನಿ ಪ್ರಶಸ್ತಿ ವಿಜೇತರ ಮಾನಪತ್ರಗಳನ್ನು ಓದಿದರು ಭಾವಸಂಗಮದ ಅದ್ಯಕ್ಷರಾದ ಮಾಹಾಂತೇಶ ತಾವಂಸಿ ಅವರು ವೇದಿಕೆಮೇಲೆ ಉಪಸ್ಥಿತರಿದ್ದರು. ನಿರೂಪಣೆಯನ್ನು ಪ್ರತಿಷ್ಠಾನದ ಸದಸ್ಯರಾದ ಶಿರಿಷ ಜೋಷಿ ಹಾಗೂ ಶೈಲಾ ಕೊಕ್ಕರಿಅವರು ಮಾಡಿದರು. ಜಿ. ವಿ. ಮಳಗಿ ಅವರು  ವಂದಿಸಿದರು. ಕಾರ್ಯಕ್ರಮದಲ್ಲಿ ಸರಜೂಕಾಟ್ಕರ, ರಾಘವೇಂದ್ರ ಪಾಟೀಲ, ಬಾಳಗೌಡ ಪಾಟೀಲ, ಸಿ. ಕೆ ನಾವಲಗಿ, ವಸಂತಕುಲಕಣರ್ಿ, ರಜನಿ ಜಿರಗ್ಯಾಳ, ಸುರೇಶ ಹನಗಂಡಿ, ಸುರೇಶ ಮುದ್ದಾರ, ರಾಯನಗೌಡ ಪಾಟೀಲ, ಕಟ್ಟೀಮನಿ ಕುಟುಂಬ ವರ್ಗದವರು ಉಪಸ್ಥಿತರಿದ್ದರು.