ಲೋಕದರ್ಶನ ವರದಿ
ಕೊಪ್ಪಳ 02: ನಗರಸಭೆಗೆ ಅನೇಕ ರೀತಿಯಲ್ಲಿ ಮನವಿ ಸಲ್ಲಿಸಲಾಯಿತು, ಜಿಲ್ಲಾಧಿಕಾರಿಗಳ ಮೂಲಕ ಹೇಳಿಸಿಯೂ ಆಯಿತು ಆದರೂ ಇಲ್ಲಿನ ಸಿಬ್ಬಂದಿಗೆ ಕೆಲಸ ಮಾಡುವ ಮನಸೇ ಇಲ್ಲವಾದ್ದರಿಂದ ಹೋರಾಟಗಾರ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಸಾರ್ವಜನಿಕರು ಶೌಚಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಕೊಪ್ಪಳ ನಗರಸಭೆಗೆ ಧೂಳು ಮುಕ್ತ, ಕಸ ವಿಲೇವಾರಿ, ಘನತ್ಯಾಜ್ಯ ವಿಲೇವಾರಿ, ಶೌಚಾಲಯ ಮತ್ತು ಮೂತ್ರಾಲಯ ಸಮಸ್ಯೆ, ರಾಜ ಕಾಲುವೆ, ಜೆಪಿ ತರಕಾರಿ ಮಾರುಕಟ್ಟೆ, ಅರ್ಧಂಬರ್ಧ ಕೆಲಸ ಹಾಗೂ ಸಿಬ್ಬಂದಿಯ ಭ್ರಷ್ಟಾಚಾರ ಮಿತಿಮೀರಿದೆ. ಈ ಕುರಿತು ಪ್ರತಿಭಟನೆ ನಡೆಸಿದರು. ಡಿಸಿ ಕಛೇರಿಯಿಂದ ಹಿಡಿದು ಮಳೆಮಲ್ಲೇಶ್ವರ ರಸ್ತೆವರೆಗೆ, ಸಾಲಾರಜಂಗ್ ರಸ್ತೆ, ಹಸನ್ ರಸ್ತೆ, ಸಿಂಪಿಲಿಂಗಣ್ಣ ರಸ್ತೆ, ಗವಿಮಠ ರಸ್ತೆ ಯಾವ ರಸ್ತೆಯಲ್ಲೂ ಸಾರ್ವಜನಿಕ ಮೂತ್ರಾಲಯಗಳ ಸಮಸ್ಯೆ ಇದೆ. ಸಾರ್ವಜನಿಕ ಶೌಚಾಲಯಗಳಂತೂ ಇಲ್ಲವೇ ಇಲ್ಲ. ಮೂಲ ಸೌಕರ್ಯ ಕೊಡಲು ನಗರಸಭೆ ಸಿಬ್ಬಂದಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಲಕ್ಷಾಂತರ ರುಪಾಯಿ ಹಣ ಖಚರ್ು ಮಾಡಿ ಸ್ಟೀಲ್ ಶೌಚಾಲಯ ತಂದಿದ್ದು, ಹತ್ತಾರು ತಿಂಗಳಾದರೂ ಅವುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಅನು ಮಾಡಿಕೊಡದೇ ಹಾಳು ಮಾಡಲಾಗಿದೆ. ಸಾರ್ವಜನಿಕರ ಆರೋಗ್ಯದೊಂದಿಗೆ ನಗರಸಭೆ ಆಟವಾಡುತ್ತಿದೆ. ಅವರಿಗೆ ಯಾವುದರ ಪರಿವೇ ಇಲ್ಲ. ಜನರು ಮೂತ್ರಾಲಯಗಳ ಸಮಸ್ಯೆಯಿಂದಾಗಿ ಮೂತ್ರಪಿಂಡ ರೋಗಕ್ಕೆ ತುತ್ತಾಗುತ್ತಿದ್ದಾರೆ. ನಗರದಲ್ಲಿ ಮನೆಯ ವಯಕ್ತಿಕ ಶೌಚಾಲಯ ಹಾಗೂ ನಗರಸಭೆಯ ಅನೇಕ ಸಾರ್ವಜನಿಕ ಶೌಚಾಲಯಗಳ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದು, ಇದೂವರೆಗೂ ಒಂದೇ ಒಂದು ಪ್ರಕರಣದಲ್ಲಿ ದಂಡ ಹಾಕಿದ ಅಥವಾ ಕೇಸ್ ಮಾಡಿದ ಉದಾಹರಣೆಗಳಿಲ್ಲ. ನಗರಸಭೆ ಈ ರೀತಿಯಾಗಿ ಇರುವ ಶೌಚಾಲಯಗಳ ಸವರ್ೆ ಕೂಡಾ ಮಾಡಿಲ್ಲ. ನಗರಸಭೆಗೆ ಕಾನೂನು ಪಾಲನೆಗಿಂತ ರಾಜಕಾರಣ ಮುಖ್ಯವಾಗಿದೆ. ಇಲ್ಲಿನ ಸಿಬ್ಬಂದಿಗೆ ಜಿಡ್ಡುಹಡಿದಿದೆ ಅವರು ದಶಕದಿಂದ ಇಲ್ಲಿಯೇ ಜಾಂಡಾ ಹೊಡೆದುಕೊಂಡು ಕುಂತಿದ್ದು, ಮೂರು ವರ್ಷ ದಾಟಿದ ಎಲ್ಲರನ್ನು ಸಚಿವರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು ದೂರದ ಊರಿಗೆ ವಗರ್ಾವಣೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ತುತರ್ಾಗಿ ಜನರಿಗೆ ಶೌಚಾಲಯ ಮತ್ತು ಮೂತ್ರಾಲಯ ಮಾಡಿಕೊಡುವಂತೆ ಒತ್ತಾಯಿಸಿ, ನಗರಸಭೆ ಮತ್ತು ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಗಾಳೆಪ್ಪ ಕಡೆಮನಿ, ಹನುಮಂತ ನಾಯಕ ಡಂಬ್ರಳ್ಳಿ, ಮೋಹನ್ ಮ್ಯಾಗೇರಿ, ವೆಂಕಟೇಶ ನಾಯಕ್, ಕುಮಾರ್ ಆರ್. ಎಂ., ಆನಂದ ಕೊಪ್ಪಳ, ಮಂಜುನಾಥ ಭಾಗ್ಯನಗರ ಇತರರು ಇದ್ದರು.