ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಸಂಸ್ಥೆ-200 ಶಿಬಿರಗಳ ಆಯೋಜನೆ

International Service Organization Rotary Organization-Organization of 200 camps

ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಸಂಸ್ಥೆ-200 ಶಿಬಿರಗಳ ಆಯೋಜನೆ

ಗದಗ 20: ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಸಂಸ್ಥೆಯಾಗಿದ್ದು, ಅದರ ಅಡಿಯಲ್ಲಿ ಒಟ್ಟು  125 ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಗದಗ ವತಿಯಿಂದ 200 ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದು,ನಮ್ಮ ವೃತ್ತಿಯ ಜೊತೆಗೆ ರೋಟರಿ ಸಂಸ್ಥೆಯಲ್ಲಿ ಹವ್ಯಾಸಿ ಕಾರ್ಯಗಳನ್ನ ಮಾಡುತ್ತಾ ಬಂದಿರುವುದಾಗಿ ಡಾ.ಎಸ್ ಡಿ ಸಜ್ಜನರ ತಿಳಿಸಿದರು.              ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಚಿತ ಕಣ್ಣಿನ ತಪಾಸಣೆ ಶಸ್ತ್ರ ಚಿಕಿತ್ಸೆ  ಮಾಡಲಾಗುವುದು,ಅನೇಕ ವೈದ್ಯರ ತಂಡದ ಸಹಕಾರದಿಂದ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ನೀಡಲು ಮುಂದಾಗಿದ್ದು, ಒಂದು ಕ್ಯಾಂಪ್ ನಲ್ಲಿ 15 ಜನರಿಗೆ ಚಿಕಿತ್ಸೆಗೆ ಅವಕಾಶ ಇದ್ದು, ರೊಟರಿ ಸಂಸ್ಥೆಗೆ ಹೆಮ್ಮೆ.ರೋಟರಿ ಸಂಸ್ಥೆ ಗದಗ, ರೋಟರಿ ಕ್ಲಬ್ ವೆಲ್ಪೆರ್ ಸೊಸೈಟಿ ಗದಗ-ಬೆಟಗೇರಿ ವತಿಯಿಂದ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಶಿಬಿರವನ್ನು ಜಗದ್ಗುರು ತೋಂಟದಾರ್ಯ ಮಠದ ಪಿಠಾಧಿಪತಿ ಪರಮ-ಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಜಿಗಳು ಉದ್ಘಾಟಿಸಲಿದ್ದಾರೆ ಅಂತ ಖ್ಯಾತ ವೈದ್ಯ ಡಾ. ಶೇಖರ್ ಸಜ್ಜನ್ ಮಾಹಿತಿ ನೀಡಿದರು.   

   ರೊಟರಿ ಸಂಸ್ಥೆ, ರೋಟರಿ ಕ್ಲಬ್ ವೆಲ್ಪೆರ್ ಸೊಸೈಟಿ ಕಳೆದ 20ವರ್ಷದಿಂದ ವಿಶೇಷ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ. ಕಳೆದ 20ವರ್ಷಗಳಲ್ಲಿ ಸುಮಾರು 3800ಕ್ಕೂ ಹೆಚ್ಚು ಉಚಿತ ಶಸ್ತ್ರ ಚಿಕಿತ್ಸೆಗಳನ್ನ ಮಾಡಲಾಗಿದೆ.ಜಗತ್ತಿನ 125ದೇಶಗಳಲ್ಲಿ ರೋಟರಿ ಸಂಸ್ಥೆ ಸಮಾಜ ಸೇವೆ ಮಾಡುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಹಿರಿಯರು, ಮಕ್ಕಳು, ಮಹಿಳೆಯರಿಗೆ ಪ್ರತ್ಯೆಕ ಸಂಸ್ಥೆ ನಿರ್ಮಿಸುವ ಮೂಲಕ ಸಮಾಜದಲ್ಲಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿ ಮನೆ ಮಾತಾಗಿ ತನ್ನ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ ಎಂದರು.       

      ಈ ವೇಳೆ  ಡಾ. ಶ್ರೀಧರ್ ಸುಲ್ತಾನಪೂರ ಮಾತನಾಡಿ 1945 ರಲ್ಲಿ ರೋಟರಿ ಸಂಸ್ಥೆಯು ಪ್ರಾರಂಭವಾಗಿ 16 ಲಕ್ಷಕ್ಕೂ ಅಧಿಕ ಹಣದ ಉಪಕರಣಗಳು ಇದ್ದು,ಅನೇಕ ವೈದ್ಯರ ಸಹಕಾರದಿಂದ ಉಚಿತ ನೇತ್ರ ತಪಾಸಣೆ  ಪರೀಕ್ಷಿಸಿದ ನಂತರ ಶಸ್ತ್ರ ಚಿಕಿತ್ಸೆಗೆ ಅರ್ಹ ಇರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ಮೇಲೆ ಕನ್ನಡಕದೊಂದಿಗೆ ಅವರನ್ನು ಬಿಳ್ಕೊಡುತ್ತೇವೆ. ಯಾವುದೇ ತಾರತಮ್ಯವಿಲ್ಲದೇ ಎಲ್ಲ ರೋಗಿಗಳನ್ನು ನೋಡಿಕೊಳ್ಳಲಾಗುವುದು. ದಾನಿಗಳ ಸಹಾಯದಿಂದ ನಮ್ಮ ಸಂಸ್ಥೆ ಉತ್ತಮ ಸೇವೆ ಮಾಡುತ್ತಾ ಸಾಗುತ್ತಿದೆ ಎಂದರು.       ಈ ಸಂದರ್ಭದಲ್ಲಿ ಡಾ. ಆರ್‌. ಬಿ ಉಪ್ಪಿನ್, ಸಂತೋಷ ಅಕ್ಕಿ, ಸಿ. ಪಿ ಹುಣಸಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.