ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

Invitation of Works for State Level Sahrdaya Kavya Award

ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ 

ಬೆಳಗಾವಿ 30 : ಜಿಲ್ಲೆಯ ಸಹೃದಯ ಸಾಹಿತ್ಯ ಪ್ರತಿಷ್ಠಾನವು 2024 ರಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲನಗಳಿಗೆ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರಿಂದ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಕಾವ್ಯ ಪ್ರಶಸ್ತಿಯು ರೂ. 5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, 2024 ರ ಜನೇವರಿಯಿಂದ ಡಿಸೆಂಬರ್ ವರೆಗೆ ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವ ತಮ್ಮ ಕವನ ಹಾಗೂ ಗಜಲ್ ಸಂಕಲನಗಳ ಮೂರು ಪ್ರತಿಗಳನ್ನು ಮಾರ್ಚ್‌ 10 ರೊಳಗಾಗಿ ತಲುಪುವಂತೆ ಕಳುಹಿಸಬೇಕು. ನಂತರ ಬಂದ ಕೃತಿ ಪರಿಗಣಿಸಲಾಗುವುದಿಲ್ಲ. ತಮ್ಮ ಕೃತಿಗಳ ಲಕೋಟೆ ಮೇಲೆ ‘ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ-2024’ ಎಂಬುದನ್ನು ನಮೂದಿಸಬೇಕು. ಈಗಾಗಲೇ ಪ್ರತಿಷ್ಠಾನದಿಂದ ಬಹುಮಾನ ಪಡೆದ ಲೇಖಕರು ಕೃತಿಗಳನ್ನು ಕಳಿಸುವಂತಿಲ್ಲವೆಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ತಿಳಿಸಿದ್ದಾರೆ.  

ಆಸಕ್ತ ಲೇಖಕರು ತಮ್ಮ ಕೃತಿಗಳನ್ನು ನಾಗೇಶ್ ಜೆ. ನಾಯಕ ಅಧ್ಯಕ್ಷರು, ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ‘ಅವ್ವ’ ಶಿವಬಸವ ನಗರ, ರಾಮಾಪೂರ ಸೈಟ್, ಸವದತ್ತಿ-591126 ಬೆಳಗಾವಿ ಜಿಲ್ಲೆ. ಮೊ. 9900817716 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರತಿಷ್ಠಾನದ ಕಾರ್ಯದರ್ಶಿ ರಮೇಶ್ ತಳವಾರ (9945042737) ಅವರನ್ನು ಸಂಪರ್ಕಿಸಬಹುದು.