ರೇಷ್ಮೆ ಕೃಷಿಕ ಫಲಾನುಭವಿಗಳಿಗೆ ಸಹಾಯಧನ ಆದೇಶ ಪತ್ರ ವಿತರಣೆ
ಹಾವೇರಿ 29: ರೇಷ್ಮೆ ಇಲಾಖೆಯಿಂದ ಪ್ರಸಕ್ತ 2024-25 ನೇ ಸಾಲಿನ ಕೇಂದ್ರ ಪುರಸ್ಕೃತ ಸಿಲ್ಕ್ ಸಮಗ್ರ ಯೋಜನೆಯಡಿ ಬ್ಯಾಡಗಿ ತಾಲೂಕಿನ ಸಾಮಾನ್ಯ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ರೇಷ್ಮೆ ಕೃಷಿಕ ಫಲಾನುಭವಿಗಳಿಗೆ ಸಹಾಯಧನ ಮಂಜೂರಾತಿ ಆದೇಶ ಪ್ರತಿಗಳನ್ನು ಬ್ಯಾಡಗಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬಸವರಾಜ ನೀಲಪ್ಪ ಶಿವಣ್ಣನವರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕೆ ಸಿ ಸಿ ಬ್ಯಾಂಕ್ ನಿರ್ದೇಶಕ ಚನ್ನಬಸಣ್ಣ ಹುಲ್ಲತ್ತಿ, ದಾನಪ್ಪ ಚೂರಿ, ಈರಣ್ಣ ಬಣಕಾರ, ಲಿಂಗರಾಜ ಕುಮ್ಮೂರು, ದುರ್ಗೇಶ ಗೊಣೆಮ್ಮನವರ, ಡಾ.ಹಿರೇಮಠ, ಬಡೇಸಾಬ್ ನದಾಪ್ ಹಾಗೂ ಬ್ಯಾಡಗಿ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಭಾರತಿ ಡಿ ನಾಯ್ಕ ಮತ್ತು ರೇಷ್ಮೆ ನೀರೀಕ್ಷಕ ನೀತೀಶ್ ವಿ ತೋಡ್ಕರ್ ಉಪಸ್ಥಿತರಿದ್ದರು.