ಸರ್ಕಾರಿ ಶಾಲಾ ಮಕ್ಕಳಿಗೆ ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡವುದು ಸೂಕ್ತ: ಕುಮಾರ್ ಕೆ ಎಫ್

It is advisable to provide quality education to government school children using technology: Kumar

ಸರ್ಕಾರಿ ಶಾಲಾ ಮಕ್ಕಳಿಗೆ ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡವುದು ಸೂಕ್ತ: ಕುಮಾರ್ ಕೆ ಎಫ್ 

ಧಾರವಾಡ 04: ‘ಸರ್ಕಾರಿ ಶಾಲಾ ಮಕ್ಕಳಿಗೆ ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡವುದು ಸೂಕ್ತವಾಗಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಹೇಳಿದರು. 

ಶಾಲಾ ಶಿಕ್ಷಣ ಇಲಾಖೆ, ಶಿಕ್ಷಣ ಫೌಂಡೇಶನ್, ಹಾಗೂ ಮೈಕ್ರೋಸಾಫ್ಟ್‌ ರಿಸರ್ಚ್‌ ಇಂಡಿಯಾ ಅವರ ಸಹಭಾಗಿತ್ವದಲ್ಲಿ, ಧಾರವಾಡ ಗ್ರಾಮೀಣದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಅಥವಾ ಕೃತಕ ಬುದ್ಧಿಮತ್ತೆ) ಆಧಾರಿತ ಶಿಕ್ಷಾ ಕೋ ಪೈಲೆಟ್ ತರಬೇತಿ ಕಾರ್ಯಕ್ರಮವನ್ನು ಡಯಟ್ ಧಾರವಾಡದಲ್ಲಿ ಉದ್ಘಾಟಿಸಿ ಮಾತನಾಡುತ್ತಾ ಯೋಜನೆಯು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಸಮಗ್ರ, ವೈಯಕ್ತಿಕಗೊಳಿಸಿದ ಬೋಧನಾ ಸಂಪನ್ಮೂಲಗಳನ್ನು ರಚಿಸಲು ಶಿಕ್ಷಕರನ್ನು ಸಶಕ್ತಗೊಳಿಸಲು ಮತ್ತು ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು ಸಂದರ್ಭದ ಆಧಾರದ ಮೇಲೆ ಕಲಿಕೆಯ ಅನುಭವಗಳನ್ನು ಸೃಷ್ಟಿಸುವ ಗುರಿಯನ್ನು ಈ ತರಬೇತಿ ಹೊಂದಿದೆ ಎಂದರು. ಶಿಕ್ಷಕರಿಗೆ 21ನೇ ಶತಮಾನಕ್ಕೆ ಬೇಕಾದ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು ಮತ್ತು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಿದರು. 

ಶಿಕ್ಷಣ ಫೌಂಡೇಶನ್ ಂಋ ಮಾಸ್ಟರ್ ಟ್ರೇನರ್  ಶ್ರೀಶೈಲ ಅಥಣಿ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ, ಂಋ ಆಧಾರಿತ ಪಾಠ ಯೋಜನೆಯ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿದೆ ಎಂದರು ಹಾಗೂ  ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. 

ಶಿಕ್ಷಣ ಪೌಂಡೇಶನ್ ಬೆಳಗಾವಿ ಭಾಗದ ಸುರೇಶ ಗುಡದಾರ ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಿದರು.  ಮತ್ತು ಶಿಕ್ಷಣ ಪೌಂಡೇಶನ್ ಹಿನ್ನೆಲೆಯನ್ನು ತಿಳಿಸಿದರು. ಧಾರವಾಡ ಗ್ರಾಮೀಣ ಬಿಆರಪಿ ಎಸ್ ವಿ ಸಂತಿ, ಆಯ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಉಪಸ್ಥಿತರಿದ್ದರು. 

‘ಸರ್ಕಾರಿ ಶಾಲಾ ಮಕ್ಕಳಿಗೆ ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡವುದು ಸೂಕ್ತವಾಗಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಹೇಳಿದರು.ಶಿಕ್ಷಣ ಪೌಂಡೇಶನ್ ಬೆಳಗಾವಿ ಭಾಗದ ಸುರೇಶ ಗುಡದಾರ ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಿದರು.  ಮತ್ತು ಶಿಕ್ಷಣ ಪೌಂಡೇಶನ್ ಹಿನ್ನೆಲೆಯನ್ನು ತಿಳಿಸಿದರು. ಶಿಕ್ಷಣ ಫೌಂಡೇಶನ್ ಂಋ ಮಾಸ್ಟರ್ ಟ್ರೇನರ್  ಶ್ರೀಶೈಲ ಅಥಣಿ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ಧಾರವಾಡ ಗ್ರಾಮೀಣ ಬಿಆರಪಿ ಎಸ್ ವಿ ಸಂತಿ, ಆಯ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಉಪಸ್ಥಿತರಿದ್ದರು.