ಎಲ್ಲರೂ ನ್ಯಾಯ ಪದ್ಧತಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ: ಶ್ರೀನಿವಾಸ

ಕೊಪ್ಪಳ 23: ಎಲ್ಲರೂ ನ್ಯಾಯ ಪದ್ಧತಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.  

ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸರಕಾರಿ ಪ್ರೌಡ ಶಾಲೆ ಹ್ಯಾಟಿ ಇವರ ಸಹಯೋಗದಲ್ಲಿ "ಸಾಮಾಜಿಕ ನ್ಯಾಯ ದಿನ" ಆಚರಣೆಯ ಅಂಗವಾಗಿ ಇತ್ತಿಚ್ಚಿಗೆ (ಫೆ. 20) ಹ್ಯಾಟಿ ಗ್ರಾಮದಲ್ಲಿ ಆಯೋಜಿಸಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ನಮ್ಮಲ್ಲಿ ಕಿಳಿನ ಭಾವನೆ ಯಾವತ್ತು ಇರಬಾರದು.  ನಾವು ಈ ಸಾಮಾಜಿಕ ನ್ಯಾಯ ಪದ್ಧತಿಯಲ್ಲಿ ಎಲ್ಲಾರೂ ಜೀವಿಸುವ ಜೀವಿಗಳು ಮತ್ತು ಕಾನೂನು ದೃಷ್ಠಿಯಲ್ಲಿ ಸಿಗಬೇಕಾದಂತಹ ಹಕ್ಕುಗಳನ್ನು ಪ್ರತಿಯೊಬ್ಬ ಪ್ರಜೆಯೂ ಪಡೆಯಬೇಕಾಗಿದೆ.  ಹೆಣ್ಣು ಗಂಡು ಎಂದು ಬೇದ ಭಾವ ಮಾಡದೇ ಎಲ್ಲರೂ ಸಮಾನರಾಗಿ ಬಾಳಬೇಕು.  ಎಷ್ಟೋ ಜನರು ಇವತ್ತಿನ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಇಲ್ಲದೆ ಬದುಕುತ್ತಿದ್ದಾರೆ.  ಬಡವರಿಗೆ ಸರಕಾರ ಹಲವಾರು ಯೋಜನೆಯಲ್ಲಿ ಮನೆಗಳನ್ನು ಒದಗಿಸುತ್ತಿದೆ.  ಅದನ್ನು ನ್ಯಾಯಯುತವಾಗಿ ಪಡೆದುಕೊಳ್ಳವುದು ನಮ್ಮ ಹಕ್ಕು.  ಸಮಾಜದಲ್ಲಿ ವಾಸಿಸುವ ನಾವು ಮೊದಲು ನ್ಯಾಯ ಪದ್ಧತಿಗಳನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಅಳವಡಿಸಿಕೊಂಡು ಕಾರ್ಯಚರಣೆಯಲ್ಲಿನ ನಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ ಅವರು ಹೇಳಿದರು.  ಕೊಪ್ಪಳ ವಕೀಲರಾದ ಶರಣಪ್ಪ ನಿಲೋಗಲ್ ಮಾತನಾಡಿ, ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಯು ತನ್ನದೆ ಆದ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದಾರೆ ಎಂದರು.  

ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಅವರು ಮಾತನಾಡಿ, ಪೋಕ್ಸೋ ಕಾಯ್ದೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿ, 1992ನೇ ಡಿಸಂಬರ್. 11 ರಂದು ಮಕ್ಕಳ ಹಕ್ಕುಗಳ ರಕ್ಷಣೆಗೆ ಒಡಂಬಡಿಕೆಯಾದ ನಂತರ ನಮ್ಮ ಭಾರತದಲ್ಲಿ  ಪ್ರತಿಯೊಂದು ಮಗುವಿಗೆ ಜೀವಿಸುವ ಹಾಗೂ ಶೈಕ್ಷಣಿಕ ಹಕ್ಕುಗಳು ಪ್ರಾರಂಭಿಸಿವೆ.  ಇದರಿಂದ ಪ್ರಗತಿ ಹೊಂದುತ್ತಿರುವ ನಮ್ಮ ದೇಶದ ಭವಿಷ್ಯ ಉಜ್ವಲವಾಗುವದರಲ್ಲಿ ಸಂಶಯವಿಲ್ಲ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹ್ಯಾಟಿ ಸರಕಾರಿ ಪ್ರೌಡ ಶಾಲೆ ಮುಖ್ಯೊಪಾಧ್ಯಾಯರಾದ ಶರಣಪ್ಪ ಮಣ್ಣೂರು ಅವರು ವಹಿಸಿದ್ದರು.  ಮಕ್ಕಳ ಸಹಾಯವಾಣಿ ಶರಣಪ್ಪ ಸೇರಿದಂತೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಶಿಕ್ಷಣ ಇಲಾಖೆಯ ಬಿಆರ್ಸಿ, ಸಿಆರ್ಪಿ ಹಾಗೂ ಶಾಲಾ ಸಹ ಶಿಕ್ಷಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.