ಜಾತ್ರಾ ಮಹೋತ್ಸವ ಸಾಮರಸ್ಯದ ಸಂಕೇತವಾಗಿದ್ದು, ಶಾಂತಿಯುತವಾಗಿ ಜಾತ್ರೆ ಆಚರಿಸಲು ಅಧಿಕಾರಿಗಳ ಜೊತೆ ಜನರು ಸಹಕಾರ ನೀಡಬೇಕು : ಕೋಳಿವಾಡ

Jatra Mahotsava is a symbol of harmony, people should cooperate with the authorities to celebrate t

ಜಾತ್ರಾ ಮಹೋತ್ಸವ ಸಾಮರಸ್ಯದ ಸಂಕೇತವಾಗಿದ್ದು, ಶಾಂತಿಯುತವಾಗಿ ಜಾತ್ರೆ ಆಚರಿಸಲು ಅಧಿಕಾರಿಗಳ ಜೊತೆ ಜನರು ಸಹಕಾರ ನೀಡಬೇಕು : ಕೋಳಿವಾಡ 

ರಾಣಿಬೆನ್ನೂರ 12:  ಜಾತ್ರಾ ಮಹೋತ್ಸವ ಸಾಮರಸ್ಯದ ಸಂಕೇತವಾಗಿದ್ದು, ಶಾಂತಿಯುತವಾಗಿ ಜಾತ್ರೆ ಆಚರಿಸಲು ಅಧಿಕಾರಿಗಳ ಜೊತೆ ಜನರು ಸಹಕಾರ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

   ನಗರದ ಶಹರ ಠಾಣೆಯ ಆವರಣದಲ್ಲಿ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗಂಗಾಜಲ ಹಾಗೂ ತುಂಗಾಜಲ ಚೌಡೇಶ್ವರಿ ದೇವಿ, ಮಾಯಮ್ಮ ದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,  

    ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ದೇವಿಯ ಮೆರವಣಿಗೆ ಸೇರಿದಂತೆ ಜಾತ್ರಾ ದಿನದಂದು ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಗ್ರಾಮದೇವತೆ ಜಾತ್ರೆ ಅಚ್ಚುಕಟ್ಟಾಗಿ ಆಚರಣೆಗೆ ಜನರು ಹಾಗೂ ಜಾತ್ರಾ ಸಮಿತಿ ಸಹಕಾರ ಅತೀ ಮುಖ್ಯವಾಗಿದೆ. ಜಾತ್ರೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಾಲೂಕಾಡಳಿತ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು ಎಂದರು.   ಎಸಿ ಚನ್ನಬಸಪ್ಪ ಮಾತನಾಡಿ, ಜಾತ್ರೆಯಲ್ಲಿ ವಾಹನದ ಪಾಕಿಂರ್ಗ್ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಗೆ 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಿಸಿ ಕ್ಯಾಮರ್ ಅಳವಡಿಕೆ ಕ್ರಮವಹಿಸಲಾಗುವುದು ಎಂದರು.  ತಹಶೀಲ್ದಾರ ಆರ್‌.ಎಚ್‌.ಭಾಗವಾನ್ ಮಾತನಾಡಿ, ಜಾತ್ರೆಗಳಲ್ಲಿ ಯಾವುದೇ ರೀತಿ ಲೋಪದೋಷಗಳ ಆಗದಂತೆ ಜಾತ್ರಾ ಸಮಿತಿ ಸಹಕಾರ ಮುಖ್ಯವಾಗಿದೆ. ಈಗಾಗಲೇ ಸುಪ್ರಿಕೋರ್ಟ್‌ ಆದೇಶದಿಂದ ಪ್ರಾಣಿ ಬಲಿ ತಡೆಗಟ್ಟಲು ಜನರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಈ ಕುರಿತು ಈಗಾಗಲೇ ನಗರಸಭೆಯಿಂದ ಜನರಿಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಜಾತ್ರೆಯಲ್ಲಿ ಅಳವಡಿಸಲಾಗಿದೆ. ಜಾತ್ರೆ ಮೆರವಣಿಗೆ ಸೇರಿದಂತೆ ಜಾತ್ರೆಯ ದಿನದಂದು ಕೆಲವೊಂದು ಗಲಾಟೆ, ಕಳ್ಳತನ ತಡೆಗಟ್ಟಲು ಪೊಲೀಸ್ ಇಲಾಖೆ ಜೊತೆಗೂಡಿ ವಿಶೇಷ ತಂಡ ನಿಯೋಜನೆ ಮಾಡಲಾಗಿದೆ. ಯಾವುದೇ ಘಟನೆ ನಡೆದ್ದಾರೆ ಕೂಡಲೇ ಸಹಾಯ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದರು.     ತುಂಗಾಜಲ ಚೌಡೇಶ್ವರಿ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಮಾತನಾಡಿ, ಜಾತ್ರೆಯಲ್ಲಿ ಕಳ್ಳತನ, ಚೈನ್ ಕಳ್ಳತನವಾಗುತ್ತದೆ. ಇದನ್ನು ತಡೆಗಟ್ಟಲು ಪೊಲೀಸರು ಸೂಕ್ತ ಕ್ರಮವಹಿಸಬೇಕು. ಆ.13ರಂದು 4ದೇವತೆಗಳ ಉತ್ಸವ ಮೆರವಣಿಗೆ ನಡೆಯಲಿದೆ. ಆದ್ದರಿಂದ ಸಂಜೆ ಮೆರವಣಿಗೆ ಬಂದೋಬಸ್ತ್‌ಗೆ ಹೆಚ್ಚಿನ ಸಿಬ್ಬಂದಿ ನೀಡಬೇಕು. ಜಾತ್ರೆಯಲ್ಲಿ ಪೊಲೀಸರು ಜಾಸ್ತಿ ಓಡಾಡುವುದು ಮುಖ್ಯವಾಗಿದೆ. ಮಹಿಳೆಯರು ಹೆಚ್ವಿನ ಸಂಖ್ಯೆಯಲ್ಲಿ ಬರುವುದರಿಂದ ಜಾತ್ರೆ ಉದ್ದಕ್ಕೂ ಪೊಲೀಸರು ಅಲ್ಲಾಲ್ಲಿ ಇದ್ದಾರೆ ಅನುಕೂಲವಾಗಲಿದೆ. ಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಳ್ಳತನ, ಗಲಾಟೆಗಳು ಆಗಿವೆ. ಅದ್ದರಿಂದ. ಜಾತ್ರೆ ಅಂಗಡಿಗಳಲ್ಲಿ ಪೊಲೀಸ್ ಬಂದೋಬಸ್ತ ಜಾಸ್ತಿ ಮಾಡಬೇಕು ಎಂದರು. 

    ನಗರಸಭೆ ಪೌರಾಯುಕ್ತ ಪಕ್ಕೀರ​‍್ಪ ಇಂಗಳಗಿ ಮಾತನಾಡಿ, ಜಾತ್ರೆ ಸಲುವಾಗಿ ಬೀದಿ ದೀಪಗಳು, ಸ್ವಚ್ಚತೆ ಆಧ್ಯತೆ ನೀಡಲಾಗಿದೆ. ಈಗಾಗಲೇ ವಿವಿಧ ತಂಡಗಳನ್ನು ರಚನೆ ಮಾಡಿ ನಗರ ಸ್ವಚ್ಚತೆ ಮಾಡಲಾಗಿದೆ. ಎಂದರು.    ಡಿವೈಎಸ್‌ಪಿ ಡಾ.ಗೀರೀಶ ಭೋಜಣ್ಣನವರ, ಟಿಎಚ್‌ಓ ರಾಜೇಶ್ವರಿ ಬೆನ್ನೂರು, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ನಾಗರಾಜ ಪವಾರ, ಮುಖಂಡರಾದ ರಾಯಣ್ಣ ಮಾಕನೂರ, ಕಿರಣ ಗುಳೇದ, ಶೇರುಖಾನ್ ಕಾಬೂಲಿ ವಿವಿಧ ಜಾತ್ರಾ ಕಮೀಟಿ ಸದಸ್ಯರು ಇದ್ದರು.ಫೋಟೊ:12ಆರ್‌ಎನ್‌ಆರ್10ರಾಣಿಬೆನ್ನೂರ: ನಗರದ ಶಹರ ಠಾಣೆಯ ಆವರಣದಲ್ಲಿ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು.