ಲೋಕದರ್ಶನ ವರದಿ
ಕೊಪ್ಪಳ 13: ಹಿರಿಯ ಪತ್ರಕರ್ತರಾದ ಕೆ.ರಾಮಕೃಷ್ಣ ಹಾಗೂ ಮುದುಗಲ್ನ ಪತ್ರಕರ್ತರಾದ ಆದೇಶ ವಾಲ್ಮೀಕಿ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರದಂದು ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಅಗಲಿದ ಹಿರಿಯ ಪತ್ರಕರ್ತರಾದ ಕೆ.ರಾಮಕೃಷ್ಣ ಹಾಗೂ ಮುದುಗಲ್ನ ಪತ್ರಕರ್ತರಾದ ಆದೇಶ ವಾಲ್ಮೀಕಿ ನಿಧನಕ್ಕೆ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಅಪರ್ಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾದಿಕ್ ಅಲಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್.ಗೋನಾಳ, ರಾಜ್ಯ ನಾಮಕರಣ ಸದಸ್ಯ ಹರೀಶ್ ಎಸ್.ಎಚ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಎನ್.ಎಂ.ದೊಡ್ಡಮನಿ ಸಭೆಯನ್ನುದ್ದೇಶಿಸಿ ಮಾತನಾಡಿ ಹಿರಿಯ ಪತ್ರಕರ್ತರಾದ ಕೆ.ರಾಮಕೃಷ್ಣ ಅವರ ಸೇವಾ ಪ್ರಬುದ್ಧತೆ ಹಾಗೂ ಅವರ ವೃತ್ತಿ ಬದುಕು ನಮ್ಮೆಲ್ಲರಿಗೂ ಮಾದರಿ ಹಾಗೂ ಮುದುಗಲ್ ಪತ್ರಕರ್ತರಾದ ಆದೇಶ ವಾಲ್ಮೀಕಿ ಅಪಘಾತದಲ್ಲಿ ನಿಧನರಾಗಿರುವುದು ತುಂಬಲಾರದ ನಷ್ಟ ಉಂಟು ಮಾಡಿದೆ ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಪತ್ರಕರ್ತರಾದ ಶಿವರಾಜ್ ನುಗಡೋಣಿ, ಮೌಲಾಹುಸೇನ್ ಬುಲ್ಡಿಯಾರ್, ಖಲೀಲ್ ಅಹ್ಮದ್ ಹುಡೇವು, ಎಚ್.ವ್ಹಿ.ರಾಜಭಕ್ಷಿ, ರವಿಚಂದ್ರ ಬಡಿಗೇರ ಉಪಸ್ಥಿತರಿದ್ದರು.