ದಾಂಡೇಲಿ 06: ನಗರದ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜನಸಾಮಾನ್ಯರು ಹಬ್ಬದ ವಸ್ತುಗಳ ಖರೀದಿಗೆ ಸಂತಸದಿಂದ ಮಾರುಕಟ್ಟೆಗೆ ಧಾವಿಸುತ್ತಿರುವುದು ಸವರ್ೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಮುಖ್ಯವಾಗಿ ಹೂವು ಹಾಗೂ ಹಣ್ಣುಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದು ಗ್ರಾಹಕರು ಬೆಲೆ ತುಸು ಹೆಚ್ಚಾದರು ಸಹ ಸಂತಸದಿಂದ ಖರೀದಿಗೆ ಮುಂದಾಗುತ್ತಿರುವುದು ವ್ಯಾಪಾರಸ್ಥರಲ್ಲಿ ಸಂತಸ ಮೂಡುವಂತೆ ಮಾಡಿದೆ.
ಚೆಂಡು ಹೂವು, ಸೆವಂತಿ ಹೂವು, ಕಮಲದ ಹೂವು, ಚೆಂಡು ಹೂವಿನ ಗಿಡ, ಬಾಳೆ ಸಸಿಗಳು, ಕಬ್ಬು ಮುಂತಾದವುಗಳ ಖರೀದಿಗೆ ಗ್ರಾಹಕರು ಸಂತಸದಿಂದ ಮುಗಿಬಿಳುತ್ತಿದ್ದಾರೆ. ಜೊತೆಯಲ್ಲಿ ವಿವಿಧ ರೀತಿಯ ಬಣ್ಣ ಬಣ್ಣದ ಆಕಾಶ ದೀಪಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದು ಮಾರುಕಟ್ಟೆಯ ಸೊಬಗು ಹೆಚ್ಚಿಸುವಂತೆ ಮಾಡಿದೆ. ಮನೆಗೆ ಬಂದ ಅತಿಥಿಗಳೊಂದಿಗೆ ಬಟ್ಟೆ ಖರೀದಿಗೂ ಹಾಗೂ ದಿನಸಿ ವಸ್ತುಗಳ ಖರೀದಿಗೂ ಗ್ರಾಹಕರು ಮಾರುಕಟ್ಟೆಗೆ ಆಗಮಿಸುತ್ತಿರುವುದರಿಂದ ಮಾರುಕಟ್ಟೆಯು ಜನನಿ ಬಿಡ ಪ್ರದೇಶವಾಗಿ ಗೋಚರಿಸುತ್ತಿದ್ದು ಹಳ್ಳಿಯಿಂದ ಬಂದು ವ್ಯಾಪಾರ ಮಾಡುವ ವ್ಯಾಪಾರಸ್ಥರು ಸಹ ಸಂತಸ ಗೊಳ್ಳುವಂತೆ ಮಾಡಿದೆ.
ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುವ ಬೆಳಕಿನ ಹಬ್ಬ ದೀಪಾವಳಿಗೆ ನಗರದ ಮಾರುಕಟ್ಟೆಗೆ ಹೆಂಗಳೆಯರು ಸಹ ವಿವಿಧ ಆಲಂಕಾರಿಕ ವಸ್ತುಗಳನ್ನು ಖರೀದಿಗೆ ಮುಂದಾಗುತ್ತಿದ್ದಾರೆ.
ಜೊತೆಯಲ್ಲಿ ಬಂದ ಪುಟ್ಟ ಪುಟ್ಟ ಮಕ್ಕಳಿಗಾಗಿ ಪಟಾಕಿಗಳನ್ನು ಖರೀದಿಸುತ್ತಿರುವುದರಿಂದ ಅಲಂಕಾರಿಕ ಹಾಗೂ ಪಟಾಕಿಗಳ ವ್ಯಾಪಾರಸ್ಥರು ಸಹ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯಂದು ತುಸು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿರುವುದಂತು ಸತ್ಯ.