ರೈಲ್ವೆ ಟಿಕೆಟ್ ಕಲೆಕ್ಟರ್ ಅಮಾನತ್ತುಗೊಳಿಸಲು ಕರವೇ ಪ್ರತಿಭಟಿಸಿ ಮನವಿ

Karave protests, requests suspension of railway ticket collector

ಲೋಕದರ್ಶನ ವರದಿ 

ರೈಲ್ವೆ ಟಿಕೆಟ್ ಕಲೆಕ್ಟರ್ ಅಮಾನತ್ತುಗೊಳಿಸಲು ಕರವೇ ಪ್ರತಿಭಟಿಸಿ ಮನವಿ  

ಕೊಪ್ಪಳ 26: ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದಕ್ಕೆ ಕನ್ನಡಿಗ ಮಹ್ಮದ ಬಾಷಾ ಅತ್ತಾರ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ್ದು ನಿಜವಾಗಲೂ ಖಂಡನೀಯವೆಂದು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಹೇಳಿದರು. 

ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾಘಟಕದಿಂದ ಶನಿವಾರದಂದು ರೈಲು ನಿಲ್ದಾಣದ ಮುಂದೆ ಪ್ರತಿಭಟಿಸಿ ಪ್ರಧಾನ ವ್ಯವಸ್ಥಾಪಕರು, ನೈಋತ್ಯರೇಲ್ವೆ ಹುಬ್ಬಳ್ಳಿ ಇವರಿಗೆ ಕೊಪ್ಪಳ ಸ್ಟೇಷನ್ ವ್ಯವಸ್ಥಾಪಕರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದರು. ಏಪ್ರೀಲ್ 24 ರಂದುಕೊಪ್ಪಳ ತಾಲೂಕಿನ ಭಾಗ್ಯನಗರ ನಿವಾಸಿಯಾದಕನ್ನಡಿಗ ಮಹ್ಮದ ಬಾಷಾ ಅತ್ತಾರಇವರು ಹಂಪಿ ಎಕ್ಸಪ್ರೆಸ್‌ರೈಲಿನಲ್ಲಿ ಎಸ್3 ಬೋಗಿಯ ಆರ್‌.ಎ.ಸಿ 71ಆಸನದಲ್ಲಿಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಬೆಂಗಳೂರು ರೈಲು ನಿಲ್ದಾಣ ನಂತರದಲ್ಲಿ ಬಂದಂತಹಟಿಕೆಟ್‌ಕಲೆಕ್ಟರ್ ಹಿಂದಿ ಬಾಷೆಯಲ್ಲಿ ಸಂಬೋಧಿಸುವಾಗಕನ್ನಡದಲ್ಲಿ ಮಾತನಾಡಿಎಂದು ಮನವಿ ಮಾಡಿದಕ್ಕೆಇವರ ಮೇಲೆ ಹಲ್ಲೆ ಮಾಡಿಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ್ದುಬೇಸರದ ಸಂಗತಿ. 

ಕಳೆದ ನಾಲ್ಕೈದು ದಿನಗಳ ಹಿಂದೆರಾಜ್ಯದರಾಜಧಾನಿ ಬೆಂಗಳೂರಿನಲ್ಲಿ ವಾಯುಪಡೆಯಅಧಿಕಾರಿಯೊಬ್ಬರುಕನ್ನಡಿಗ ಸೇಲ್ಸ್‌ಮಾನ್ ಮೇಲೆ ಹಾಡುಹಗಲೇ ಏಕಾಏಕಿ ಹಲ್ಲೆಗೈದುದೌರ್ಜನ್ಯವೆಸಗಿದ ಪ್ರಕರಣ ಮಾಸುವ ಮೊದಲೇ ಈ ಪ್ರಕರಣ ಬೆಳಕಿಗೆ ಬಂದಿದ್ದುಖೇಧಕರ.ರೈಲು ಪ್ರಯಾಣದಲ್ಲಿ ಸೌಜನ್ಯದಿಂದ ವರ್ತಿಸಿ ಪ್ರಯಾಣಿಕರಿಗೆ ಸುರಕ್ಷತೆಕಲ್ಪಿಸುವ ಅಧಿಕಾರಿಗಳೆ ದೌರ್ಜನ್ಯವೆಸಗಿದರೆ, ದೇಶದ ಪ್ರತಿಷ್ಟಿತರೇಲ್ವೆಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗುತ್ತದೆ. ರಾಜ್ಯದ ಆಡಳಿತ ಹಾಗೂ ಮಾತೃ ಭಾಷೆಯಾದಕನ್ನಡಲ್ಲಿ ಮಾತನಾಡಿಎಂದದ್ದಕ್ಕೆ ಹಲ್ಲೆ ಮಾಡಿದೌಜ್ಯನ್ಯವೆಸಗಿದರೆ, ನಾವು ಕರ್ನಾಟಕದಲ್ಲಿ ಬದುಕುತ್ತಿದ್ದೇವೆಯೇ? ಎಂಬ ಪ್ರಶ್ನೆ ನಮ್ಮನ್ನುಕಾಡುತ್ತದೆ.ಆದ್ದರಿಂದ ಪದೇ ಪದೇಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಿ ಕನ್ನಡದಲ್ಲಿ ಮಾತನಾಡಿಎಂಬುದಕ್ಕೆಕನ್ನಡಿಗ ಮಹ್ಮದ ಬಾಷಾ ಅತ್ತಾರಇವರಿಗೆ ಹಲ್ಲೆ ಮಾಡಿಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದಉತ್ತರ ಭಾರತದಟಿಕೆಟ್‌ಕಲೆಕ್ಟರ್‌ಅವರ ಮೇಲೆ ಸೂಕ್ತ ಕ್ರಮಕೈಗೊಂಡುಕರ್ತವ್ಯದಿಂದಅಮಾನತ್ತು ಮಾಡಬೇಕುಎಂದರು. 

ಪ್ರತಿಭಟನೆಯಲ್ಲಿಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾಗೌರವಾಧ್ಯಕ್ಷ ಶರಣಪ್ಪಚಂದನಕಟ್ಟಿ, ಸಂಜಯಖಟವಟೆ, ಜಿಲ್ಲಾ ಸಾಮಾಜಿಕಜಾಲತಾಣ ಸಂಚಾಲಕ ಸಿದ್ದು ಶಶಿಮಠ, ಕೊಪ್ಪಳ ನಗರಾಧ್ಯಕ್ಷ ಪ್ರಫುಲ್ ಪಾಟೀಲ, ಭಾಗ್ಯನಗರಅಧ್ಯಕ್ಷ ವಿರೇಶ ಮುಂಡಾಸದ, ಮುಖಂಡರಾದ ನೂರಪಾಶಾಕವಲೂರು, ಸಂಜೀವಸಿಂಗ್ ಹಜಾರೆ, ಮಹೇಶ್ವರ ಶಾಸ್ತ್ರಿ, ಹನುಮಂತ ತಳಕಲ್, ಚಂದ್ರು ಬಜಂತ್ರಿ, ಕಿರಣ ಮೇಟಿ, ಆಸೀಪ್ ಮೇಸ್ತ್ರಿ, ಹಾಗೂ ಇನ್ನೂಅನೇಕರು ಭಾಗವಹಿಸಿದ್ದರು. 


ಬಾಕ್ಸ್‌: ರೈಲು ಪ್ರಯಾಣದಲ್ಲಿ ಸೌಜನ್ಯದಿಂದ ವರ್ತಿಸಿ ಪ್ರಯಾಣಿಕರಿಗೆ ಸುರಕ್ಷತೆಕಲ್ಪಿಸುವ ಅಧಿಕಾರಿಗಳೆ ದೌರ್ಜನ್ಯವೆಸಗಿದರೆ, ದೇಶದ ಪ್ರತಿಷ್ಟಿತರೇಲ್ವೆಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗುತ್ತದೆ. ಕನ್ನಡದಲ್ಲಿ ಮಾತನಾಡಿಎಂಬುದಕ್ಕೆಕನ್ನಡಿಗ ಮಹ್ಮದ ಬಾಷಾ ಅತ್ತಾರ ಮೇಲೆ ಹಲ್ಲೆ ಮಾಡಿಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದಉತ್ತರ ಭಾರತದಟಿಕೆಟ್‌ಕಲೆಕ್ಟರ್‌ಅವರ ಮೇಲೆ ಸೂಕ್ತ ಕ್ರಮಕೈಗೊಂಡುಕರ್ತವ್ಯದಿಂದಅಮಾನತ್ತು ಮಾಡಬೇಕು