ಕೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ: ಶಾಸಕ ಡಾ. ಚಂದ್ರು ಲಮಾಣಿ

Ketra will strive for all-round development: MLA Dr. Chandru Lamani

ಕೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ: ಶಾಸಕ ಡಾ. ಚಂದ್ರು ಲಮಾಣಿ

ಶಿರಹಟ್ಟಿ 21 : ತಾಲೂಕಿನ ತೊಳಲಿ ಗ್ರಾಮದಲ್ಲಿ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಕೇಂದ್ರ ಸರಕಾರದಿಂದ ಅನುದಾನದಡಿಯಲ್ಲಿ ಅಂದಾಜು 6 ಕೋಟಿ ರೂಗಳ ಮೊತ್ತದ ಭೂಮಿ ಪೂಜೆಯನ್ನು ಶಾಸಕ ಡಾ. ಚಂದ್ರು ಲಮಾಣಿ ನೆರವೇರಿಸಿದರು.ನಂತರ ಅವರು ಮಾತನಾಡುತ್ತಾ, ಮತಕ್ಷೇತ್ರದ ಅಭಿವೃದ್ದಿಗಾಗಿ ಅನುದಾನದ ಕೊರತೆ ಇದ್ದು, ಸರಕಾರ ಅಗತ್ಯವಾಗಿರುವ ರಸ್ತೆಗಳ ಸುಧಾರಣೆಗೆ ಅನುದಾನ ಒದಗಿಸುವುದು ಅಗತ್ಯವಿದೆ. ಮತಕ್ಷೇತ್ರದ ರಸ್ತೆಗಳು ಸಂಪೂರ್ಣವಾಗಿ  ಹದಗೆಟ್ಟಿದ್ದು, ಸರಕಾರದ ಮಟ್ಟದಲ್ಲಿ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆ ಎಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಹೆಬ್ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಫಕ್ಕಿರ​‍್ಪ ನರಸಮ್ಮನವರ, ಉಪಾಧ್ಯಕ್ಷ ಸಂಗಣ್ಣ ಮೆಣಸಿನಕಾಯಿ, ಶಿವನಗೌಡ ಕಂಠಿಗೌಡರ, ಚನ್ನವೀರಗೌಡ ಪಾಟೀಲ್, ದೇವಕ್ಕ ಹಿರೇಮಠ, ನೇಮಚಂದ್ರ ಡೊಳ್ಳಿನ, ನಿಂಗಪ್ಪ ನಾಯಕ, ಮಹೇಶಗೌಡ ತೆಗ್ಗಿನಮನಿ, ಸಿ.ಆರ್‌. ಪಾಟೀಲ್, ಶಾಂತನಗೌಡ ಪಾಟೀಲ್, ಪ್ರಭುಗೌಡ ಪಾಟೀಲ್, ವೀರೇಶ ತಂಗೋಡ, ಶರಣಪ್ಪ ಬಾರಕೇರ, ಮಹೇಶ ಅಂಗಡಿ, ಪ್ರಶಾಂತ ಹೊಸಮನಿ, ವಿಶ್ವನಾಥ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.