ಗೋಕಾಕ 27: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನಸಾಮಾನ್ಯರ ಬದುಕಿಗೆ ಕಾಯಕಲ್ಪವಾಗಬಹುದಾದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಬಡ ಕುಟುಂಬದವರಿಗೆ ಉಜ್ವಲ ಯೋಜನೆಯಲ್ಲಿ ಅಡಿಗೆ ಅನೀಲ (ಗ್ಯಾಸ್ ಸಿಲಿಂಡರ್) ವಿತರಣೆಯ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದೆ. ಬಡ ಕುಟುಂಬದ ಮಹಿಳೆಯರ ಆರೋಗ್ಯದ ಪರಿಕಲ್ಪನೆಯೊಂದಿಗೆ ಜಾರಿಗೆ ತಂದಿರುವ ಈ ಕಾರ್ಯಕ್ರಮ ಗ್ರಾಮೀಣ ಭಾಗದ ಮಹಿಳೆಯರಿಗಂತೂ ಕಾಯಕಲ್ಪವಾಗಿ ಪರಿಣಮಿಸಿದೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಹೇಳಿದರು.
ಖನಗಾಂವ ಗ್ರಾಮದ ಹನಮಂತ ದೇವಸ್ಥಾನದ ಮುಂದಿನ ಆವರಣದಲ್ಲಿ ಈ ಭಾಗದ 453 ಬಡಕುಟುಂಬಗಳಿಗೆ ಗ್ಯಾಸ್ ಸಿಲಿಂಡರಗಳನ್ನು ವಿತರಿಸಿ ಮಾತನಾಡಿದ ಅವರು ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಿ ನೇರವಾಗಿ ಫಲಾನುಭವಿಗಳ ಮನೆಗೆ ಕೇಂದ್ರ ಸರಕಾರದಿಂದ ಗ್ಯಾಸ್ ಸಿಲಿಂಡರಗಳನ್ನು ಪೂರೈಸುತ್ತಿದ್ದು, ಮಧ್ಯವತರ್ಿಗಳ ಹಾವಳಿ ಕಂಡುಬಂದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ವಹಿಸಿದ್ದರು.
ಮಲ್ಲಿಕಾಜರ್ುನ ಗ್ಯಾಸ್ ಏಜೆನ್ಸಿಯ ಮಾಲೀಕ ಮಲ್ಲಿಕಾಜರ್ುನ ಚುನಮರಿ, ವಿನಯ ಚುನಮರಿ, ಎಚ್. ಪಿ. ಗ್ಯಾಸ್ ಅಧಿಕಾರಿಗಳು ಹಾಗೂ ಮುಖಂಡರುಗಳಾದ ಸುರೇಂದ್ರ ಅಕ್ಕಿ, ಬಸಪ್ಪ ವಣ್ಣೂರ, ಮಂಜು ಕಲ್ಲೋಳ್ಳಿ, ರಾಜು ಪಾಟೀಲ, ಕೆಂಪಣ್ಣಾ ಪಾಟೀಲ, ಪ್ರಕಾಶ ಭಾಗೋಜಿ, ಅಶೋಕ ಬಂಗಾರಿ, ಸಿದ್ದಪ್ಪ ಡೊಳ್ಳಪ್ಪಗೋಳ, ಬಸನಗೌಡ ನಿವರ್ಾಣಿ ಅಕ್ಕತಂಗೇರಹಾಳ, ಬಸಲಿಂಗಪ್ಪ ಸವಸುದ್ದಿ, ಶಾಂತವ್ವಾ ಸವಸುದ್ದಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.