ಲೋಕದರ್ಶನ ವರದಿ
ಧಾರವಾಡ25: ಭಕ್ತರ ಮನ ಪರಿವರ್ತನೆ ಮಾಡುವ ಸದ್ವಿಚಾರ, ಕರುಣೆ, ಪರಿಣತೆ, ಸುಜ್ಞಾನ, ಸದ್ಗುಣ ಇದ್ದವರು ಜಾತಿಗಿಂತ ನೀತಿಗಿಂತ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ ಎಂದು ಡಾ.ಬಸವಲಿಂಗ ಸೊಪ್ಪಿಮಠ ಹೇಳಿದರು.
ಬಸವ ಸಮಿತಿ ಭವನದಲ್ಲಿ ಬಸವಕೇಂದ್ರ ಆಯೋಜಿಸಿದ್ದ ಅರವಿನ ಅಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಾದಿ ಶರಣರ ವಚನ ಹಾಗೂ ಅವರ ತತ್ವ ಸಿದ್ದಾಂತಗಳ ಪಾಲನೆ ಮಾಡಿದ ಮಠಾಧೀಶರು ಅನೇಕ ಮಹಾತ್ಮರಿಗೆ ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ಮಠಾಧೀಶರು ಗುಡಿ ಗುಂಡಾರ ಕಟ್ಟಿ ಶೋಷಣೆ ಮಾಡುವವರಲ್ಲ ಬದಲಾಗಿ ಹಸಿದವನಿಗೆ ಉಣಬಡಿಸಿ ಆತನಿಗೆ ಅಕ್ಷರದ ಜೊತೆಗೆ ಜ್ಞಾನ ನೀಡುವವರು.
ಬಸವಣ್ಣನವರ ಕಾಯಕ ದಾಸೋಹದ ತತ್ವದ ಮೇರೆಗೆ ಜ್ಞಾನ ಹಾಗೂ ಅನ್ನ ದಾಸೋಹ ನಡೆಸಿ ಕೋಟ್ಯಾಂತರ ಮಕ್ಕಳಿಗೆ ಅಕ್ಷರ ಅಭ್ಯಾಸಕ್ಕೆ ಸಹಕಾರ ನೀಡಿದ ತುಮಕೂರು ಸಿದ್ದಗಂಗ ಮಠದ ಶ್ರೀ ಡಾ ಶಿವಕುಮಾರ ಸ್ವಾಮಿಜಿ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು.
ಡಾ.ಎಸ್.ಎಸ್.ಪಟಗುಂದಿ ಮಾತನಾಡಿ, ಅಂತರಂಗದ ಅಷ್ಟಾವರಣಗಳನ್ನು ಬಹಿರಂಗದಲ್ಲಿಯೂ ಅಳವಡಿಸಿಕೊಳ್ಳಬೇಕು, ಸಾಧನೆಯಲ್ಲಿ ಸಾಮರಸ್ಯ ಪಡೆಯುವುದಕ್ಕೆ ಭಕ್ತರಿಗೆ ಅಷ್ಟಾವರಣ ಅರಿವು ಅವಶ್ಯ. ಭಕ್ತರ ಶರೀರದಲ್ಲಿ ಸೂಪ್ತವಾದ ಜ್ಯೋತಿಯನ್ನು ಜಾಗೃತಗೊಳಿಸಿ ಸಹಜ ರೀತಿಯಲ್ಲಿ ನೈಸಗರ್ಿಕ, ವೈಚಾರಿಕತೆಯ ಅನುಭಾವವು ವಚನ ಮೂಲಕ ಮನದಾಳದಲ್ಲಿ ತುಂಬಿಸುತ್ತಾನೆ.
ಅನುಭಾವವು ಯಾವುದೇ ಜಾತಿ ಮತಗಳಿಗೆ ಸಂಬಂಧಿಸಿದಲ್ಲ ಅದು ಅಖಂಡ ಮಾನವ ಜನಾಂಗದ ಸಕಲ ಜೀವಾತ್ಮರ ಲೇಸಿಗಾಗಿ ಉದಯವಾಗಿದೆ ಎಂದರು.
ಬಸವಕೇಂದ್ರ ಅಧ್ಯಕ್ಷ ಶಿವಣ್ಣ ಶರಣ್ಣನವರ ಅಧ್ಯಕ್ಷತೆವಹಿಸಿದ್ದರು. ಡಾ.ಶಂಭುಲಿಂಗ ಹೆಗಡಾಳ, ಉಮೇಶ ಕಟಗಿ, ನಟರಾಜ ಮೂರಶಿಳ್ಳಿ, ಶಿವಶರಣ ಕಲಬಶೆಟ್ಟರ, ಡಾ.ಶಿವಶಂಕರ ಪೋಳ, ಅನಸೂಯಾ ಪಾಟೀಲ, ಉಪಸ್ಥಿತರಿದ್ದರು. ಭಾಗ್ಯವತಿ ನಡಕಟ್ಟಿ ವಚನ ಸಂಗೀತ ನಡೆಸಿಕೊಟ್ಟರು. ಎಸ್.ಜಿ.ಮುಳಕೂರ ನಿರೂಪಿಸಿದರು. ಪ್ರೊ.ಮಲ್ಲಿಕಾಜರ್ುನ ಬಾಗೇವಾಡಿ ಸ್ವಾಗತಿಸಿದರು. ಶಿವಯೋಗಿ ಹನಮಪ್ಪನವರ ವಂದಿಸಿದರು.