ಜ್ಞಾನವು ನಿಂತ ನೀರಾಗದೇ ಹರಿಯುವ ನೀರಂತಿರಬೇಕು : ಡಾ. ಜೋಶಿ

ಲೋಕದರ್ಶನ ವರದಿ

ಬೆಳಗಾವಿ, 1: ಜ್ಞಾನವು ನಿಂತ ನೀರಾಗದೇ ಹರಿವ ನೀರಂತಿರಬೇಕು ಇಂತಹ ಪ್ರಭುದ್ದ ಕಾರ್ಯಕ್ಕೆ ವೇದಿಕೆಗಳು ಅಧಿಕ ಸಂಖ್ಯೆಯಲ್ಲಿ ಆಯೋಜಿತಗೊಳ್ಳಬೇಕು ಎಂದು ಇಂಡಿಯನ್ ಅಸೋಶಿಯೇಶನ್ ಆಪ್ ಪಿಡಿಯಾಟ್ರಿಕ್ಸನ ಅಧ್ಯಕ್ಷ ಡಾ. ರವೀಂದ್ರ ಜೋಶಿ ಮಾತನಾಡುತ್ತಿದ್ದರು. ಅವರು ಇಂದು ಯಳ್ಲೂರ ರಸ್ತೆಯಲ್ಲಿನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 4ನೇ ವಾಷರ್ಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು. ತಂದೆ ತಾಯಿ ಮತ್ತು ಮನೆಯಲ್ಲಿ ಇತರೆ ಸದಸ್ಯರುಗಳು ಮಗುವಿನ ಪಾಲನೆ ಪೋಷನೆಯ ಬಗ್ಗೆ ಅಗತ್ಯ ಜ್ಞಾನವನ್ನು ಹೊಂದಿರುವದು ಅತ್ಯಗತ್ಯವಾಗಿದೆ. ಆದ್ದರಿಂದ ವೈದ್ಯರಾದ ನಾವು ನಮ್ಮ ಜ್ಞಾನವನ್ನು ಹಂಚಿಕೊಳ್ಳುವದರಿಂದ ಮಕ್ಕಳು ಸುಧೃಢವಾಗಿ ಬೆಳೆದು ನಾಳಿನ ಭಾರತದ ಸತ್ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದು ತಿಳುವಳಿಕೆ ನೀಡಿದರು. 

ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಡಿಯನ್ ಅಸೋಶಿಯೇಶನ್ ಆಪ್ ಪಿಡಿಯಾಟ್ರಿಕ್ಸನ ಖಜಾಂಚಿಯಾದ ಡಾ. ವಿಜಯ ಕುಲಕಣರ್ಿ  ಆಂಟಿನೆಟಲ್ ಮ್ಯಾನೇಜ್ಮೆಂಟ್ ಆಪ್ ಹೆಚ್ಐವಿ ಇನ್ಪೆಕ್ಟೆಡ್ ಮದರ್ಸ ಎಂಬ ವಿಷಯದ ಬಗ್ಗೆ ಮಾತನಾಡುತ್ತ ಇಂದು ಹೆಚ್ಐವಿ ಏಡ್ಸ್  ಸೋಂಕು ಸಾಮಾನ್ಯವಾಗಿದ್ದು ದಿನೇ ದಿನೇ ಈ ಮಾರಕ ರೋಗದ ಪ್ರಕರತೆ ಅಧಿಕವಾಗುತ್ತಿದೆ ಅದರಲ್ಲೂ  ಎದೆ ಹಾಲು ನೀಡುವ  ಸೋಂಕಿತ ತಾಯಂದಿರಿಂದ ಶಿಶುವಿಗೆ ಸೋಂಕು ಹರಡುವದನ್ನು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವ ಮೂಲಕ ತಡಹಿಡಿಯಬಹುದಾಗಿದೆ ಅಥವಾ ಅದರ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದಾಗಿದೆ  ಎಂದು ತಿಳಿಸಿದರು. ಮತ್ತು ಮುಂದಿನ ವೈದ್ಯರುಗಳಾದ ಕೇಳುಗರಿಗೆ ಅದರ ವೈದ್ಯಕೀಯ ವಿಧಾನವನ್ನು ಭೋದಿಸಿದರು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುಎಸ್ಎಮ್ ಕೆಎಲ್ಇಯ ಉಪ ಪ್ರಾಂಶುಪಾಲ ಡಾ. ಮಹಮ್ಮದ್  ಸುಹೇಮಿ ಬಿನ್ ಅಬ್ ವಹಾಬ ಮಾತನಾಡುತ್ತ  ಇಂತಹ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ಇರುವ  ಜ್ಞಾನವನ್ನು ಒರೆಗೆ ಹಚ್ಚಿ ಅದರ ಅಂತಃಶಕ್ತಿಯನ್ನು ಜಗತ್ತಿಗೆ ಸಾರುವ ವೇದಿಕೆಗಳಾಗಿವೆ ಆದ್ದರಿಂದ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗುತ್ತಿರಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಆಯೋಜನಾ ಚೇರ್ಮನ್ರಾಗಿದ್ದ ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ಪುಸ್ತಕಗಳು ನಮ್ಮ ಜ್ಞಾನವನ್ನು ಅಧಿಕಗೊಳಿಸುವ ಸರೋವರಗಳಾಗಿದ್ದರೆ ಇರುವ ಜ್ಞಾನವನ್ನು ಇನ್ನಷ್ಟು ಶ್ರೀಮಂತ ಗೊಳಿಸುವ ಕಾರ್ಯಕ್ರಮಗಳು ಅದರಲ್ಲಿ ಹೊಸತನವನ್ನು ತುಂಬಿ ಚಿಕಿತ್ಸೆಯ ವಿಧಾನಗಳನ್ನು ಪದ್ದತಿಗಳನ್ನು ರೂಢಿಗೆ ತರಬಹುದಾಗಿದೆ. ಅಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮೆದುಳಿನಿಂದ ಯೋಚಿಸಿ ಹಾಗೂ ಹೃದಯದಿಂದ ಚಿಕಿತ್ಸೆ ನೀಡಿರಿ ಎಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಯುಎಸ್ಎಮ್ ಕೆಎಲ್ಇಯ ನಿದರ್ೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ  ಇಂದಿನ ತಂತ್ರಜ್ಞಾನಯುಗದಲ್ಲಿ ಪಾಲಕರು ಅಂತಜರ್ಾಲ (ಇಂಟರ್ನೆಟ್) ಹಾಗೂ ಹೇಳಿಕೆಯ ಆಧಾರದ ಮೇಲೆ ಮಕ್ಕಳಿಗೆ ಔಷಧಿಗಳನ್ನು ನೀಡುವ ಪದ್ದತಿಯು ರೂಢಿಯಲ್ಲಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ.  ಆದ್ದರಿಂದ ಇಂತಹ ಬೇಜವಾಬ್ದಾರಿ ಕಾರ್ಯಗಳಿಗೆ ಹೋಗದೆ ವೈದ್ಯರನ್ನು ಕಾಣಿರಿ. ಅಲ್ಲದೇ ಸಕರ್ಾರವು ಮಕ್ಕಳ ಆರೋಗ್ಯ ಸುಧಾರನೆ ಹಾಗೂ ಅಭಿವೃದ್ದಿಯಲ್ಲಿ ಸಕರ್ಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೂತ್ತಿದ್ದರೂ ಸಹ ಮಕ್ಕಳು ರೋಗಗ್ರಸ್ತರಾಗುತ್ತಿರುವದು ಚಿಂತೆಯ ವಿಷಯವೇ ಸರಿ. ಆದ್ದರಿಂದ ಪಾಲಕರಲ್ಲಿ ಸಾರ್ವಜನಿಕರಲ್ಲಿರುವ ಇಂತಹ ವಿಚಾರಗಳ ಬಗ್ಗೆ ಇರುವ ಅನುಮಾನಗಳನ್ನು ದೂರಮಾಡುವದು ವೈದ್ಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ನರರೋಗ ತಜ್ಞ ಡಾ ರಾಘವೇಂದ್ರ ಅಮೋಘಿಮಠ "ಸೀಜರ ಆ್ಯಂಡ್ ಇಟ್ಸ ಎವೆಲ್ಯುವೇಷನ್ ಎಂಬ ವಿಷಯದ ಮೇಲೆ ಮಾತನಾಡಿದರು.  ಹಿರಿಯ ಶ್ವಾಸಕೋಶ ತಜ್ಞ ಡಾ. ಬಾಬಣ್ಣ ಹುಕ್ಕೇರಿ " ಕಮ್ಯುನಿಟಿ ಅಕ್ವೇಯರ್ಡ ನುಮ್ಯೋನಿಯಾ" ಎಂಬ ವಿಷಯದ ಮೇಲೆ ಬೆಳಕು ಚಿಲ್ಲಿದರು. ನಂತರ ಹಿರಿಯ ಮಕ್ಕಳ ತಜ್ಞೆ ಡಾ. ವಿಜಯಲಕ್ಷ್ಮಿ ಕುಲಗೋಡ " ಬೇಸಿಕ್ ಲೈಪ ಸಪೋರ್ಟ ಎಂಬ ವಿಷಯದ ಮಾತನಾಡಿದರು ಹಾಗೂ ಹೆಸರಾಂತ  ಮಕ್ಕಳ ತಜ್ಞ ಡಾ. ಮುರುಘೇಶ ಪಾಟೀಲ "ನಿಯೋನೆಟಲ್ ರಸುಶಿಟೇಷನ್ ಎಂಬ ವಿಷಯದ ಮೇಲೆ ವೈದ್ಯ ವಿದ್ಯಾಥರ್ಿಗಳ ಜೊತೆಗೆ ಚಚರ್ಿಸಿದರು. 

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ, ಹೆಸರಾಂತ  ಶಸ್ತ್ರಚಿಕಿತ್ಸಕ ಡಾ. ಅಶೋಕ ಪಾಂಗಿ ಹಾಗೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಕಡ್ಡಿ . ಡಾ.ಸುರೇಶ ಕಾಖಂಡಕಿ, ಡಾ.ಸೌಮ್ಯ ವೆರನೆಕರ, ಡಾ.ಅನಿತಾ ಮೋದಗೆ, ಡಾ. ಸಂತೋಷಕುಮಾರ,  ಡಾ. ಮುರುಘೇಶ ಪಾಟೀಲ ಡಾ.ಪ್ರೀತಿ ಮತ್ತು ಆಸ್ಪತ್ರೆಯ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಬಾಗವಹಿಸಿದ್ದರು ಯು ಎಸ್ ಎಮ್ ಕೆ ಎಲ್ ಇ ಸುಮಾರು 100 ಕ್ಕೂ ಅಧಿಕ ವೈದ್ಯ ವಿದ್ಯಾಥರ್ಿಗಳು ಭಾಗವಹಿಸಿದ್ದರು. 

ಕಾರ್ಯಕ್ರಮವನ್ನು ಯುಎಸ್ಎಮ್ ಕೆಎಲ್ಇಯ  ವೈದ್ಯ ವಿದ್ಯಾಥರ್ಿ ಡಾ. ಅಲಿಯಾ ಅಲಿ ನಿರೂಪಿಸಿದರು. ಡಾ.ಸೌಮ್ಯ ವೆರನೆಕರ ಸ್ವಾಗತಿಸಿದರು ಮತ್ತು ಹಿರಿಯ ವೈದ್ಯ ಡಾ. ಸುರೇಶ ಕಾಖಂಡಕಿ ವಂದಿಸಿದರು.