ಕೊಪ್ಪಳ: ಮಾವಿನಲ್ಲಿ ತೇವಾಂಶದ ಕೊರತೆ: ರೈತರಿಗೆ ಸಲಹೆ ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿ ಹೇಳಿಕೆ

ಕೊಪ್ಪಳ 20: ಕೊಪ್ಪಳ ಮುನಿರಾಬಾದ ತೋಟಗಾರಿಕೆ ಮಹಾವಿದ್ಯಾಲಯದ ಸಹವಿಸ್ತರಣಾ ನಿದರ್ೇಶಕ ಡಾ. ಲೋಕೇಶ, ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರದ ಸಸ್ಯ ಕೀಟ ಶಾಸ್ತ್ರಜ್ಞ ಬದರಿಪ್ರಸಾದ, ಸಹಾಯಕ ತೋಟಗಾರಿಕೆ ಅಧಿಕಾರಿ ಓಬಣ್ಣ ಮತ್ತು ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿ  ಇವರನ್ನೊಳಗೊಂಡ ತಂಡವು ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಿಗೆ ಇತ್ತೀಚೆಗೆ (ಮಾ. 16ರಂದು) ಭೇಟಿ ನೀಡಿ, ಮಾವು ಬೆಳೆಯನ್ನು ವೀಕ್ಷಿಸಿ, ಮಾವಿನಲ್ಲಿ ತೇವಾಂಶದ ಕೊರತೆ ಇರುವುದರಿಂದ ರೈತರಿಗೆ ಸಲಹೆಗಳನ್ನು ನೀಡಿದೆ.  

ತೇವಾಂಶ ಕೊರತೆ, ಕೀಟ ಹಾಗೂ ರೋಗಗಳ ಬಾಧೆಯಿಂದಾಗಿ ಮಾವಿನ ಬೆಳೆ ಒಣಗುತ್ತಿದ್ದು, ಜಿಲ್ಲೆಯ ಎಲ್ಲಾ ಮಾವು ಬೆಳೆಗಾರರು ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ, ಮಾವು ಬೆಳೆಯನ್ನು ಉಳಿಸಿಕೊಳ್ಳಬೇಕು ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆಂದು ತಂಡವು ತಿಳಿಸಿದ್ದು, ರೈತರು ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ.  

ಅನುಸರಿಸಬೇಕಾದ ಕ್ರಮಗಳು: 08 ರಿಂದ 10 ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ಗಿಡದ ಸುತ್ತಲೂ 05 ರಿಂದ 06 ಅಡಿ ಅಂತರದ ಮಡಿ ಮಾಡಿ ನೀರು ಹರಿಸಬೇಕು.  ಸಾಧ್ಯವಾದಷ್ಟು ಹನಿ ನೀರಾವರಿ ಮೂಲಕ ದಿನಕ್ಕೆ ಪ್ರತಿ ಗಿಡಕ್ಕೆ 16 ರಿಂದ 24 ಲೀ. ನೀರು ಹರಿಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇದು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಪ್ರತಿ ಗಿಡಕ್ಕೂ 5 ರಿಂದ 6 ಅಡಿ ಅಂತರದಲ್ಲಿ ನಾಲ್ಕೂ ದಿಕ್ಕುಗಳಲ್ಲಿ ರಂದ್ರ ಮಾಡಿದ ಮಡಿಕೆಗಳನ್ನು ಅಳವಡಿಸಿ ಅವುಗಳಲ್ಲಿ ನೀರು ತುಂಬಿಸಿಡಬೇಕು. ಮಡಿಕೆ ಖಾಲಿಯಾದಾಗ ಮತ್ತೆ ನೀರು ತುಂಬಿಸಿಡಬೇಕು. ಇದನ್ನು ಪಿಚ್ಚರ್ ಇರಿಗೇಷನ್ ವಿಧಾನ ಎನ್ನುತ್ತಾರೆ. ಇದಲ್ಲದೇ ಮಡಿ ಸುತ್ತಲೂ ಅಗೆತ ಮಾಡಿ ಸಾವಯವ ಹೊದಿಕೆಯನ್ನು ಮಾಡಬೇಕು.

ಉದಾ:-ಒಣಗಿದ ಕಸ ಕಡ್ಡಿ, ರವದಿ ಮತ್ತು ಒಣಗಿದ ತೆಂಗಿನ ಗರಿಗಳನ್ನು ಕತ್ತರಿಸಿ ಹರಡ ಬೇಕು. ಇದರಿಂದ ನೀರು ಆವಿಯಾಗುವುದು ಕಡಿಮೆಯಾಗಿ ಗಿಡದ ಬಡ್ಡಿಯ ಸುತ್ತಲೂ ತೇವಾಂಶ ಕಾಪಾಡಿದಂತಾಗುತ್ತದೆ. ಗಿಡದ ಕಾಂಡಕ್ಕೆ ನೆಲದಿಂದ ಮೂರು ಅಡಿವರೆಗೂ ಬೋಡರ್ೊ ಮೂಲಾಮು ಅಥವಾ ಸಿ.ಓ.ಸಿ ಮುಲಾಮನ್ನು (50 ಗ್ರಾಂ. ಪುಡಿಯನ್ನು 1 ಲೀ. ನೀರಿಲ್ಲಿ ಬೆರೆಸಿ ಮೂಲಾಮನ್ನು ತಯಾರಿಸಿಕೊಳ್ಳಬೇಕು) ಲೇಪಿಸಬೇಕು. ಇದಲ್ಲದೇ ಎಲೆಗಳಿಂದ ನೀರು ಭಾಷ್ಪೀಭವನ ವಾಗುವುದನ್ನು ತಡೆಗಟ್ಟಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಟಿಟ್ರಾನ್ಸಪಿರೆಂಟ್ ಎನ್ನುವ ಕೇವೋಲಿನ್, ಗ್ರೀನ್ ಮೀರಾಕುಲಾನ್ ನಂತಹ ಪದಾರ್ಥಗಳನ್ನು ಸಿಂಪಡಿಸಬೇಕು.  ಇದರ ಜೊತೆಗೆ ಪೋಷಕಾಂಶಗಳ ಕೊರತೆ ನೀಗಿಸಲು ಮಾವು ಸ್ಪೇಷಲ್ ಎನ್ನುವ ಲಘು ಪೋಷಕಾಂಶ ಮಿಶ್ರಣವನ್ನು ಸಿಂಪಡಿಸಬೇಕೆಂದು ಸಲಹೆ ನೀಡಿರುತ್ತಾರೆ. ಇದಲ್ಲದೇ ಬಿಸಿಲಿನ ತಾಪದಿಂದಾಗಿ  ಅಂಗಮಾರಿ ಅಂತಹ ರೋಗಗಳು ಕಂಡು ಬಂದಿದ್ದು ಕಾಬರ್ೆಂಡೆಜಿಮ್ ಅಥವಾ ಥಯೋಫನೈಟ್ ಮೀಥೈಲ್ ನಂತಹ ಶೀಲಿಂದ್ರ ನಾಶಕಗಳನ್ನು ಸಿಂಪಡಿಸಬೇಕು. ಹಿಟ್ಟು ತಿಗಣಿ  ಅಥವಾ ಕಾಂಡ ಕೋರಕ ದಂತಹ ಕೀಟಗಳು ಕಂಡುಬಂದಲ್ಲಿ ಕ್ಲೋರೋಪೈರಿಫಾಸ್, ನೂವಾನ್ ನಂತಹ ಕೀಟ ನಾಶಕಗಳನ್ನು ಬಳಸಸಬೇಕು ಎಂದು ಅಧಿಕಾರಿಗಳ ತಂಡವು ಸಲಹೆ ನೀಡಿದೆ.  

ಸಹಾಯಕ ತೋಟಗಾರಿಕೆ ಅಧಿಕಾರಿ ಓಬಣ್ಣ ಅವರು ಇಲಾಖೆಯಿಂದ ಲಭ್ಯವಿರುವ ಯೋಜನೆಗಳನ್ನು ಬಳಸಿಕೊಂಡು ನೀರಿನ ಸಮರ್ಪಕ ನಿರ್ವಹಣೆ ಮಾಡಿ ಬೆಳೆಗಳನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.  ರೈತರಾದ ಶಿವಣ್ಣ ಕರಡಿ, ವೇಂಕನಗೌಡ ಪೋಲೀಸ ಪಾಟೀಲ, ಫಕೀರಪ್ಪ, ರಾಮಣ್ಣ ಕಲ್ಗುಡಿ ಮುಂತಾದ ಪ್ರಗತಿಪರ ಮಾವು ಬೆಳೆಗಾರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಹೆಚ್ಚಿನ ಮಾಹಿತಿಗಾಗಿ  ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರ (ಜಿ.ಪಂ) ಕಛೇರಿಯ ಸಹಾಯಕ ಪ್ರಾಧ್ಯಾಪಕ ಡಾ. ಡಿ.ಪಿ. ಪ್ರಕಾಶ ಮೊ.ಸಂ. 8310033816, ಮುನಿರಾಬಾದ ತೋಟಗಾರಿಕೆ ಮಹಾವಿದ್ಯಾಲಯದ ಸಹ ವಿಸ್ತರಣಾ ನಿದರ್ೇಶಕ ಡಾ. ಲೋಕೇಶ ಮೊ.ಸಂ. 8123466734 ಮತ್ತು  ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಬದರಿ ಪ್ರಸಾದ ಮೊ.ಸಂ. 9900145705, ಇವರನ್ನು ಸಂಪಕರ್ಿಸಬಹುದಾಗಿದೆ.