ಕೊಪ್ಪಳ: ಬಯಲು ಬಹಿರ್ದೆಸೆಗೆ ಮುಕ್ತ ಜಿಲ್ಲೆಗೆ ಮಕ್ಕಳಿಂದ ಜಾಗೃತಿ

ಲೋಕದರ್ಶನ ವರದಿ 

ಕೊಪ್ಪಳ 7: ಭಾಗ್ಯನಗರದ 17ನೇ ವಾರ್ಡನ್  ಧನ್ವಂತರಿ ಕಾಲೋನಿಯಲ್ಲಿ ನಕ್ಷತ್ರ ಸ್ವಸಹಾಯ ಸಂಘದ ವತಿಯಿಂದ ರವಿವಾರ ಬೆಳ್ಳಂಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದವರಿಗೆ ಮಕ್ಕಳು ಬಯಲು ಬಹಿರ್ದೆಸೆ ಮುಕ್ತ ಕುರಿತು ಜಾಗೃತಿ ಮೂಡಿಸಿದರು.  ನಕ್ಷತ್ರ ಸ್ವಸಹಾಯ ಸಂಘದ ಮಕ್ಕಳು ಮತ್ತು ಮಹಿಳೆಯರು ಬಯಲು ಬಹಿರ್ದೆಸೆ ಗೆ ಹೋಗುತ್ತಿದ್ದವರಿಗೆ ಬಯಲು ಶೌಚಾಲಯದಿಂದ ರೋಗರುಜಿನಗಳು ಉಂಟಾಗುತ್ತವೆ ಹೀಗಾಗಿ ಕೂಡಲೇ ನಿಮಗೆ ಶೌಚಾಲಯ ಇಲ್ಲದಿದ್ದರೇ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಶೌಚಾಲಯ ಕಟ್ಟಸಿ ಕೊಡುವರು ದಯಮಾಡಿ ಬಯಲು ಬಹಿರ್ದೆಸೆ ನಿಲ್ಲಿಸಿ ಎಮದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಕ್ಕಳಾದ ಅರ್ಪಿತಾ  ಎಸ್.ಎನ್, ಅಭಿಷೇಕ್ ಎಸ್.ಎನ್, ಸಹನಾ, ಸಿಂಚನಾ ಉಜ್ವಲ್ ಜ್ಯೋತಿ, ಸಮಾನ್ವಿ ಪ್ರಜ್ವಲ್ ಜ್ಯೋತಿ, ಸಮೃದ್ಧ ಜಾಣದ, ಶ್ರೇಯಾ, ನಕ್ಷತ್ರ ಸ್ವಸಹಾಯ ಸಂಘದ ಲಲಿತಾ ಅಳವಂಡಿ,ಸುಜಾತ ಪ್ರಜ್ವಲ್, ವೀಣಾ ನಾಯಕ್, ರಾಖಿ ಜಾಣದ, ಶಂಕ್ರಮ್ಮ ಸಿಂಗಾಡಿ, ಪದ್ಮಾವತಿ ನುಗಡೋಣಿ,ಸಿಂಧೂಲ್ ಉಜ್ವಲ್,ರೇಖಾ ಮಡಿವಾಳರು,ಮುಖಂಡರಾದ ಕನಕಮೂತರ್ಿ ಚಲವಾದಿ,ಸೋಮಲಿಂಗಪ್ಪ ಮೆಣಸಿನಕಾಯಿ, ಮಹೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.