ಕೊಪ್ಪಳ : ಬರಪೀಡಿತ ವಿವಿಧ ಪ್ರದೇಶಗಳಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ

ಲೋಕದರ್ಶನ ವರದಿ

ಕೊಪ್ಪಳ 08: ಬರಪೀಡಿತ ಜಿಲ್ಲೆಗಳ ಪ್ರವಾಸದಲ್ಲಿರುವ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಕೊಪ್ಪಳ ಜಿಲ್ಲೆಯ ಹಿರೇಹಳ್ಳ, ಕೂಕನಪಳ್ಳಿ, ಹಿರೇವಂಕಲಕುಂಟ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರದ ಪರಿಸ್ಥಿತಿಯನ್ನು ಗಮನಿಸಿದರು. 

ಬರಪೀಡಿತ ಪ್ರದೇಶಗಳಿಗೆ ಬಿಎಸ್ವೈ ಕೊಪ್ಪಳದ ಪ್ರವಾಸಿ ಮಂದಿರದಿಂದ ಬೆಳಗ್ಗೆ ಆರಂಭದಲ್ಲಿ ಕೊಪ್ಪಳ ಹೊರವಲಯದಲ್ಲಿನ ಹಿರೇಹಳ್ಳ ಪ್ರದೇಶಕ್ಕೆ ಭೇಟಿ ನೀಡಿದ ಬಿಎಸ್ವೈ, ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಿರೇಹಳ್ಳ ಸ್ವಚ್ಛಗೊಳಿಸಿದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. 

ಸ್ವಾಮೀಜಿ ಮಾಡಿರುವ ಈ ಕಾರ್ಯಕ್ಕೆ ರಾಜ್ಯದ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು. ಆ ಬಳಿಕ ಮಾತನಾಡಿದ ಅವರು, ಸ್ವಾಮೀಜಿಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಮಾರು 24 ಕಿ.ಮೀ. ಹಿರೇಹಳ್ಳ ಸ್ವಚ್ಛಗೊಳಿಸಿದ್ದಾರೆ. ಹಿರೇಹಳ್ಳದಲ್ಲಿ ನೀರು ನಿಲ್ಲಿಸುವ ಯೋಜನೆ ರೂಪಿಸಿದ್ದಾರೆ. ಅಂತಹ ಮಹಾನ್ ಕಾರ್ಯ ಮಾಡಿರುವ ಗವಿವ್ಮಠದ ಶ್ರೀಗಳು ಪ್ರಶಂಸನಾರ್ಹರು ಎಂದು ಬಣ್ಣಿಸಿದರು. ಇನ್ನು ಪ್ರಸ್ತುತ ರಾಜ್ಯದ ಸಮ್ಮಿಶ್ರ ಸಕರ್ಾರ ನೀರಾವರಿ ಯೋಜನೆಗಳನ್ನು ಕಡೆಗಣಿಸಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ,ಲಕ್ಷ್ಮಣ ಸವದಿ, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ್ ದಡೇಸೂಗೂರು, ಬಿಜೆಪಿ ಮುಖಂಡರಾದ ಸಿ.ವಿ.ಚಂದ್ರಶೇಖರ, ಕರಿಯಪ್ಪ ಮೇಟಿ, ತೋಟಪ್ಪ ಕಾಮನೂರು, ಬಸವರಾಜ್ ಭೋವಿ ಸ್ಭೆರಿದಂತೆ ಮತ್ತೀತರರು ಉಪಸ್ಥಿತರಿದ್ದರು.