ಕೊಪ್ಪಳ : ಶಿಕ್ಷಣ, ಆರೋಗ್ಯ ಅತ್ಯಂತ ಮುಖ್ಯ ವಿಷಯಗಳಾಗಬೇಕು: ಸಂಸದೀಯ ಕಾರ್ಯದರ್ಶಿ ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 09: ನಮ್ಮ ಆರೋಗ್ಯ ಮತ್ತು ಮಕ್ಕಳ ಶಿಕ್ಷಣವೇ ಅತ್ಯಂತ ಮುಖ್ಯ ವಿಷಯಗಳಾಗಬೇಕು, ಉಳಿದವುಗಳ ಬಗ್ಗೆ ನಂತರ ಯೋಚಿಸಬೇಕು, ಉತ್ತಮ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ಒತ್ತಾಸೆ ವ್ಯಕ್ತಪಡಿಸಿದರು.

ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಿರೇಸಿಂದೋಗಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಇಂದು ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕೊಪ್ಪಳ ಜಿಲ್ಲೆಯ ಅಂತರ್ಜಲ ಕುಸಿಯುತ್ತಿದೆ. ಇಂದು ಮಳೆ ನೀರು ನಿಲ್ಲಿಸುವ ಕೆಲಸ ತೀವ್ರ ಸ್ವರೂಪದಲ್ಲಿ ಆಗಬೇಕಿದೆ. ಕೊಪ್ಪಳ ಹಿರೇಹಳ್ಳದ ಸುಮಾರು 25 ಕಿಮೀ. ಸ್ವಚ್ಛತಾ ಕಾರ್ಯವನ್ನು ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಮುದಾಯದ ಜನರು, ಜನಪ್ರತಿನಿಧಿಗಳ ಸಹಯೋಗದಲ್ಲಿ ಸುಮಾರು 300 ಕೋಟಿ ರುಪಾಯಿ ಕಾಮಗಾರಿಯನ್ನು ಕಡಿಮೆ ಅವಧಿಯಲ್ಲಿ ಮುಕ್ತಾಯ ಮಾಡಿದ್ದು. ಮಳೆ ನೀರು ಇಂಗಿಸುವ ಮತ್ತು ನಿಲ್ಲಿಸುವ ಕೆಲಸ ಮಾಡಲಾಗುತ್ತಿದೆ. ಅದಕ್ಕೆ ಸರಕಾರವು ಸಹ 33 ಕೋಟಿ ರುಪಾಯಿ ಅನುದಾನದಲ್ಲಿ ಹಳ್ಳದ ಉದ್ದಕ್ಕೂ ಚೆಕ್ ಡ್ಯಾಂ ನಿಮರ್ಾಣ ಕಾರ್ಯ ಆರಂಭವಾಗಿದೆ. ತಮ್ಮ ಸರಕಾರ ಮತ್ತು ಹಿಂದಿನ ಸರಕಾರ ಅನೇಕ ಉಪಯುಕ್ತ ಕಾರ್ಯಕ್ರಮ ಮಾಡಿದೆ. 

ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದ ಎಲ್ಲಾ ಕಾರ್ಯಕ್ರಮ ನೀಡಿ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ಬಾಲ್ಯ ವಿವಾಹವನ್ನು ತಡೆಯಲು ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಸರಕಾರ ಈ ವರ್ಷ ಆಂಗ್ಲ ಶಾಲೆಯನ್ನು ಆರಂಭಿಸಿ ಉಚಿತವಾಗಿ ಬಡ ಮಕ್ಕಳಿಗೂ ಆಂಗ್ಲ ಶಿಕ್ಷಣ ಕೊಡಿಸುತ್ತಿದೆ, ಇವುಗಳ ಉಪಯೋಗ ಪಡೆಯಬೇಕು, ಹೆಣ್ಣು ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣರುವದರಿಂದ ಶಿಕ್ಷಣದಿಂದ ಹಿಂದೆ ಸರಿಯಬಾರದು ಎಂದರು.

ರೈತರು ತೀವ್ರ ಬರ ಎದುರಿಸಲು ಸರಕಾರ ಅನೇಕ ಯೋಜನೆಗಳ ಮೂಲಕ ಜನರಿಗೆ ಸಹಾಯ ಮಾಡಿದೆ, ವುಗಳ ಉಪಯೋಗ ಪಡೆಯಬೇಕು, ಸಾವಿರ ಬೆಡ್ ಆಸ್ಪತ್ರೆ ಮೂಲಕ ಆರೋಗ್ಯ ರಕ್ಷಣೆ ಕೆಲಸ ಮಾಡಿದೆ. 371ಜೆ ಯೋಜನೆಯಲ್ಲಿ ಪ್ರತಿ ವರ್ಷ ಹೈಕ ಭಾಗಕ್ಕೆ ಸರಕಾರ 1500 ಕೋಟಿ ಖಚರ್ು ಮಾಡುತ್ತದೆ. ಅದರಂತೆ ಹಲಗೇರಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿಮರ್ಾಣ ಕಾರ್ಯ 96 ಲಕ್ಷ, ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡಕ್ಕೆ 10.60 ಲಕ್ಷ, ಸರಕಾರಿ ಪ್ರೌಢ ಶಾಲೆ ಕೊಠಡಿ ನಿಮರ್ಾಣಕ್ಕೆ 15 ಲಕ್ಷ ಹಾಗೂ ಗ್ರಾಮದ ಸಿಸಿ ರಸ್ತೆ ಮತ್ತು ಚರಂಡಿ ನಿಮರ್ಾಣಕ್ಕೆ 20 ಲಕ್ಷಣಗಳನ್ನು ಒದಗಿಸಿದ್ದು. ಭೂಮಿ ಪೂಜಾ ಕಾರ್ಯ ನೆರವೇರಿಸಿದರು. ಹಲಗೇರಿಯಲ್ಲಿ ಗ್ರಾಮಸ್ಥರೇ ನಿಂತು ಕೆರೆ ಅಭಿವೃದ್ಧಿ ಮಾಡುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅದಕ್ಕೆ ಬೇಕಾದ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.

ಇದಕ್ಕೂ ಪೂರ್ವ ದದೇಗಲ್ ಗ್ರಾಮದಲ್ಲಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ 20 ಲಕ್ಷ ವೆಚ್ಚದ ಹಿರೇಸಿಂದೋಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ 2 ಕೊಠಡಿಗಳಿಗೆ, ಆಂಗ್ಲ ಪಬ್ಲಿಕ್ ಶಾಲೆಯ ಪ್ರಾರಂಭೋತ್ಸವ ನೆರವೇರಿಸಿದರು.

ಕಾಟ್ರಳ್ಳಿ, ಕೋಳೂರು ಮತ್ತು ಚಿಕ್ಕಸಿಂದೋಗಿಯಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿದರು. ಗುನ್ನಳ್ಳಿಯ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಹೊರತಟ್ನಾಳ ಗ್ರಾಮದ 15 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಮತ್ತು ಮಂಗಲಾಪೂರ ಗ್ರಾಮದ 22 ಲಕ್ಷದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯ ಎಸ್. ಬಿ. ನಾಗರಳ್ಳಿ, ತಾಲೂಕ ಪಂಚಾಯತ ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಸದಸ್ಯ ಹನುಮರಡ್ಡಿ ಹಂಗನಕಟ್ಟಿ, ಹನುಮಂತ ಹಳ್ಳಿಕೇರಿ, ಮುಖಂಡರಾದ ಶಂಕ್ರಪ್ಪ ಅಂಗಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ದೇವಪ್ಪ ಓಜಿನಹಳ್ಳಿ, ಪಟ್ಟಣ ಪಂಚಾಯತ ಸದಸ್ಯ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ್, ಮುಖಂಡರಾದ ಗೋವಿಂದಪ್ಪ ಬಂಡಿ, ಓಂಕಾರಪ್ಪ ಹೊಸಳ್ಳಿ, ಶಿವಣ್ಣ, ಯಂಕನಗೌಡ ಹೊರತಟ್ನಾಳ, ರಾಜೇಸಾಬ್ ಕರಡಿ, ಬಸವರಾಜ ಬೋವಿ, ದೌಲತ್ಸಾಬ್, ಉಮೇಶ ಅಬ್ಬಿಗೇರಿ, ಅಶೋಕ ಅಬ್ಬಿಗೇರಿ, ಬಷೀರ್ ಕೊಪ್ಪಳ ಇತರರು ಇದ್ದರು. ಇದೇ ವೇಳೆ ವಿವಿಧ ಗ್ರಾಮದ ಅನೇಕರು, ಸಂಘಟನೆಯ ಮುಖಂಡರು ಮತ್ತು ಕಾಲೇಜು ಶಾಲಾ ಮುಖ್ಯಸ್ಥರು ಶಾಸಕರಿಗೆ ವಿವಿಧ ಬೇಡಿಕೆಯ ಮನವಿ ಸಲ್ಲಿಸಿದರು.