ಕೊಪ್ಪಳ 03: ರಾಜ್ಯದ ಮುಖ್ಯ ಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರು ಇದೇ ಜೂನ್. 12 ಮತ್ತು 13 ರಂದು ರೈತ ಸಾಲಮನ್ನಾ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಿದ್ದು, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ವರದಿ ಸಲ್ಲಿಸುವಂತೆ ಕಲಬುರಗಿ ಪ್ರಾದೇಶಿಕ (ಹೈ-ಕ) ಆಯುಕ್ತರಾದ ಸುಬೋಧ ಯಾದವ್ರವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತ ಸಾಲಮನ್ನಾ ಹಾಗೂ ಸರಕಾರ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪ್ರಗತಿ ಪರಿಶೀಲನಾ ಸಭೆಯ ಕುರಿತು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಮಹತ್ವಕ್ಕಾಂಕ್ಷಿ ಯೋಜನೆಯಾದ ರೈತ ಸಾಲ ಮನ್ನಾ ಯೋಜನೆಯಡಿ ಸಹಕಾರ ವಲಯ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಹಾಗೂ ಇದುವರೆ ಎಷ್ಟು ಜನ ರೈತರಿಗೆ ಇದರ ಪ್ರಯೋಜನೆವಾಗಿದೆ, ಇನ್ನೂ ಬಾಕಿ ಉಳಿದಿರುವ ರೈತರ ವಿವರ ಹಾಗೂ ಇದಕ್ಕೆ ಪ್ರಮುಖ ಕಾರಣಗಳ ಕುರಿತು ಮುಖ್ಯಮಂತ್ರಿಗಳಿಂದ ಪ್ರಗತಿ ಪರೀಶಿಲನೆ ನಡೆಯಲಿದೆ. ಹಾಗೂ ರೈತ ಸಾಲಮನ್ನಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮ ಕೊಳ್ಳಲಾದ ಮಾಹಿತಿ ಹಾಗೂ ಸಾಮಾಜಿಕ ಭದ್ರತೆ ಯೋಜನೆ, ವಿವಿಧ ಪಿಂಚಣಿಗಳ ಮಂಜೂರಾತಿ, 94 ಸಿ ಮತ್ತು 94 ಸಿ ರಡಿ ಸ್ವೀಕರಿಸಲಾದ ಅರ್ಜಿ ಗಳ ವಿಲೇವರಿ, 94 ಎ ಸಾಗವಳಿ, ಕನರ್ಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 79 ಎ ಮತ್ತು 79 ಬಿ ಉಲ್ಲಂಘನೆ ಪ್ರಕರಣಗಳು, ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿ ಗಳು ಪೋಡಿ ಪ್ರಕರಣಗಳ ಪ್ರಗತಿ ವಿವರ (ಸರ್ವೇ ), ಭೂ ಸುಧಾರಣಾ ಕಾಯ್ದೆ ನಿಯಮ 109 ರಡಿಯಲ್ಲಿ ಪ್ರಕರಣ, ಕಂದಾಯ ಅದಾಲತ್, ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಜಿಲ್ಲಾವಾರು ಕೈಗೊಂಡಿರುವ ಬಗ್ಗೆ ಪ್ರಗತಿ ಪರಿಶೀಲನೆ ನಡೆಯಲಿದೆ. ಆದ್ದರಿಂದ ರೈತ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳಡಿ ಕೊಪ್ಪಳ ಜಿಲ್ಲೆಯಲ್ಲಿ ಸಾಧಿಸಿದ ಪ್ರಗತಿ ವರದಿಯನ್ನು ತಯಾರಿಸಿಕೊಳ್ಳಿ. ಅಲ್ಲದೇ ಬಾಕಿ ಉಳಿದ ಪ್ರಕರಣಗಳು ಶಿಘ್ರ ವಿಲೇವಾರಿ ಹಾಗೂ ಯೋಜನೆಗಳಡಿ ಉಳಿದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಎಂದು ಕಲಬುರಗಿ ಪ್ರಾದೇಶಿಕ (ಹೈ-ಕ) ಆಯುಕ್ತರಾದ ಸುಬೋಧ ಯಾದವ್ರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಉಪವಿಭಾಗಾಧೀಕಾರಿ ಸಿ.ಡಿ. ಗೀತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.