ಕೊಪ್ಪಳ: ಚುನಾವಣಾ ವೆಚ್ಚ ವೀಕ್ಷಕರಿಂದ ವಿವಿಧ ತಂಡಗಳೊಂದಿಗೆ ಸಭೆ, ಮುಕ್ತ, ಪಾರದರ್ಶಕ ಚುನಾವಣೆಗೆ ಸಂಪೂರ್ಣ ಸಹಕಾರ: ಜಯರಾಮ್

ಕೊಪ್ಪಳ 28: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್. 23 ರಂದು ಮತದಾನ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ತಂಡಗಳು ಸನ್ನಂದವಾಗಿರಬೇಕು ಎಂದು ವೆಚ್ಚ ವೀಕ್ಷಕರಾದ ಎಂ. ಜಯರಾಮ್ ತಿಳಿಸಿದರು. 

ಅವರು (ಮಾ. 28) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಟಿ, ವಿಎಸ್ಟಿ ಹಾಗೂ ವೆಚ್ಚ ವೀಕ್ಷಣಾ ತಂಡಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಚುನಾವಣಾ ವೆಚ್ಚವನ್ನು ಎಲ್ಲಾ ಹಂತದಲ್ಲಿಯೂ ಸಹ ಕರಾರುವಕ್ಕಾಗಿ ಪರಿಶೀಲನೆ ನಡೆಸಬೇಕು. ಸಭೆ, ಸಮಾರಂಭ, ರ್ಯಾಲಿಗಳು ನಡೆಯುವ ವೇಳೆ ವಿಡಿಯೋ ಸರ್ವಲೆನ್ಸ್ ತಂಡವು ಬಹಳ ಚುರುಕಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಎಲ್ಲಾ ತಂಡಗಳು ಯಾವುದೇ ಭಯವಿಲ್ಲದೆ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು. ಚುನಾವಣಾ ವೆಚ್ಚ ವೀಕ್ಷಕನಾಗಿ ಸಂಪೂರ್ಣ ಸಹಕಾರ ನೀಡಲಿದ್ದು, ತಮ್ಮ ಯಾವುದೇ ಅನುಮಾನಗಳು ಹಾಗೂ ಮಾಹಿತಿ ಅಗತ್ಯವಿದ್ದಲ್ಲಿ ನೇರವಾಗಿ ಸಂಪಕರ್ಿಸಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿ, ಚುನಾವಣಾ ಅಂಗವಾಗಿ ಚೆಕ್ಪೋಸ್ಟ್, ವೆಚ್ಚ ವೀಕ್ಷಣಾ ತಂಡ, ವಿಎಸ್ಟಿ, ವಿವಿಟಿ ತಂಡಗಳನ್ನು ನೇಮಕ ಮಾಡಿದ್ದು ಎಲ್ಲಾ ತಂಡಗಳು ಸಹ ಈಗಾಗಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಚುನಾವಣಾ ಸಿದ್ಧತೆಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. 

ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಕ್ಷಪಾಲ ಕ್ಷೀರಸಾಗರ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಹಾಗೂ ವೆಚ್ಚ ವೀಕ್ಷಣಾ ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ, ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಉಪಸ್ಥಿತರಿದ್ದರು.