ಕೊಪ್ಪಳ : ಹಸಿರು ಕ್ರಾಂತಿಯ ಹರಿಕಾರನಿಗೆ ಪುಣ್ಯ ಸ್ಮರಣೋತ್ಸವ

ಲೋಕದರ್ಶನ ವರದಿ

ಕೊಪ್ಪಳ 7: ನಗರದ ಜೆಪಿ ಮಾಕರ್ೆಟ್ ಹತ್ತಿರ ಇರುವ ಬಾಬು ಜಗಜೀವನ ರಾಮ್ರವರ ಪುತ್ತಳಿಕೆಗೆ ಪುಷ್ಪಾರ್ಚಣೆಮಾಡಿ ಪುಣ್ಯ ಸ್ಮರಣೋತ್ಸವ ಆಚರಿಸಲಾಯಿತು.

ನಗರದ ದಲಿತ ಸಂಘಟನೆಗಳ ಮುಖಂಡರು ವಿವಿಧ ಪ್ರಗತಿಪರ ಮುಖಂಡರು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನರಾಮರವರ 33ನೇ ಪುಣ್ಯಸ್ಮರಣೋತ್ಸವವನ್ನು ಮೌನಾಚರಣೆಯ ಮುಖಾಂತರ ಆಚರಿಸಲಾಯಿತು. ಈ ಸಮಯದಲ್ಲಿ ನಗರಸಭೆ ಸದಸ್ಯರಾದ ರಮೇಶ ಗಿಣಿಗೇರಿ, ದಲಿತ ಸಂಘಟನೆಯ ಒಕ್ಕೂಟದ ಹೈದ್ರಾಬಾದ ಕನರ್ಾಟಕ ಅಧ್ಯಕ್ಷ ಚನ್ನಬಸಪ್ಪ ಹೆಚ್ ಹೊಳೆಯಪ್ಪನವರ, ಸಂಘಟನೆಯ ಮುಖಂಡರಾದ ಮೈಲಪ್ಪ ಬಿಸರಳ್ಳಿ, ಬಾಬು ಜಗಜೀವನರಾವ ಸಂಘಟನೆಯ ಅಧ್ಯಕ್ಷ ಗವಿಸಿದ್ದಪ್ಪ ಗಿಣಿಗೇರಿ, ್ಲ ದ.ಸ.ಒ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಾರ್ಕಂಡಪ್ಪ ಹಲಿಗಿ, ಮೋಚಿ ಅಭಿವೃದ್ದಿ ನಿಗಮ ಮಂಡಳಿಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಂಜುನಾಥ ಕೋಳೂರು, ಸಮಾಜದ ಮುಖಂಡರಾದ ದೇವರಾಜ ಕಿನ್ನಾಳ, ಶಿವಪ್ಪ ಗಿಣಿಗೇರಿ, ರಂಗನಾಯಕ ರಾಠೋಡ, ಕುಮಾರ ನಾಯಕ, ಗವಿಸಿದ್ದಪ್ಪ ಕುಣಿಕೇರಿ, ಗಾಳೆಪ್ಪ ಹಳ್ಳಿಕೇರಿ ಹಾಗೂ ಇತರರು ಇದ್ದರು ಎಂದು ಮಾರ್ಕಂಡೆಪ್ಪ ಡಿ ಹಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.