ಕೊಪ್ಪಳ: ಸ್ಪರ್ಧಾ ಪರೀಕ್ಷೆಯಲ್ಲಿ ಆಸಕ್ತಿ, ಕುತೂಹಲದಿಂದ ಸ್ವಾವಲಂಬಿಗಳಾಗಿ: ಹಿರಿಯ ಪತ್ರಕರ್ತ ಸವಡಿ ಹೇಳಿಕೆ

ಲೋಕದರ್ಶನ ವರದಿ

ಕೊಪ್ಪಳ 20: ವಿದ್ಯಾರ್ಥಿ ಗಳು ಮುಂದಿನ ಜೀವನ ರೂಪಿಸಿಕೊಳ್ಳಬೇಕಾದರೆ ಅರ್ಥಿಕ , ಶೈಕ್ಷಣಿಕ ಹಿನ್ನೆಲೆ ಮುಖ್ಯವಾಗಿರುತ್ತೆ, ಪರಿಸ್ಥಿತಿಗಳು ಬರುತ್ತೆ-ಹೋಗುತ್ತೆ,  ಮುಂಬರುವ ಸ್ಪರ್ಧಾ  ಪರೀಕ್ಷೆಯಲ್ಲಿ ಆಸಕ್ತಿ, ಕುತೂಹಲದಿಂದ  ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಹಿರಿಯ ಪತ್ರಕರ್ತ ಚಾಮರಾಜ್ ಸವಡಿ ಹೇಳಿದರು.

ನಗರದ ಸಕರ್ಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಮಂಗಳವಾರ "ವ್ಯಕ್ತಿತ್ವ ವಿಕಾಸನ ಮತ್ತು ಉದ್ಯೋಗ ಕ್ಷಮತೆ" (ಐ.ಕ್ಯೂ.ಎ.ಸಿ) ವತಿಯಿಂದ ಬಿ.ಎ,ಬಿ.ಕಾಂ, ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾಥರ್ಿಗಳಿಗೆ ಸ್ಫಧರ್ಾ ಪರೀಕ್ಷೆ ಪೂರ್ವಸಿದ್ದತೆ ಕುರಿತು ಏರ್ಪಡಿಸಿದ್ದ ಒಂದನೇ ಹಂತದ ತರಬೇತಿ ಕಾಯರ್ಾಗಾರದಲ್ಲಿ ಅವರು ಮಾತನಾಡಿದರು. 

ಪ್ರತಿಯೊಬ್ಬರಲ್ಲಿ ಒಂದೊಂದು ವಿಶೇಷತೆ ಇರುತ್ತೆ, ದೌರ್ಬಲ್ಯವನ್ನು ನೋಡಬೇಡಿ, ಒಬ್ಬ ವ್ಯಕ್ತಿಯ ಬಾಹ್ಯ ಮತ್ತು ಅಂತರ್ ಸೌಂದರ್ಯದಿಂದ ಅವರವರ ಸಾಮಾರ್ಥ ತಿಳಿಯುವುದಿಲ್ಲ. ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. ನಿಮ್ಮಲ್ಲಿ ಅತ್ಯುತ್ತಮ ಸಾಧನಾಶಕ್ತಿ, ವಿಶೇಷಶಕ್ತಿ, ಆತ್ಮಿಯತೆಶಕ್ತಿ, ಉತ್ಪಾದಕಶಕ್ತಿ,ಕನ್ನಡ ಸಾಹಿತ್ಯ, ಚರಿತ್ರೆ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆ ಆಳವಾದ ಜ್ಞಾನ ಅಗತ್ಯ, ನೈಜತೆ ಮತ್ತು ಜಾಗ್ರತೆಯ ಸಮಯವನ್ನು  ಕ್ರಮಬದ್ಧವಾಗಿ ಬಳಸಿಕೊಂಡಾಗ ಕಾಯರ್ಾಗಾರಗಳು ಯಶಸ್ವಿಯಾಗುತ್ತವೆ ಎಂದರು.

  ಸ್ಫಧರ್ಾ ಸ್ಫೂತರ್ಿ ಪತ್ರಿಕೆ ಹಿರಿಯ ಸಂಪಾದಕ ಐ.ಜಿ ಚೌಗಲಾ ಸ್ಫಧರ್ಾ ಪರೀಕ್ಷೆಯ ಕನ್ನಡ,ಇಂಗ್ಲೀಷ್ ಮತ್ತು ಹಿಂದಿ ಭಾಷೆ ಜೊತೆಗೆ ವಿವಿಧ ವಿಷಯದ ಕಲಿಕೆಯ ಜ್ಞಾನವನ್ನು ಆನಂದಿಸುತ್ತಾ, ಸ್ಪಷ್ಟ ಪಠ್ಯಾಕ್ರಮ ತಿಳಿವಳಿಕೆ, ಕಲಿಯುವ ಮನಸ್ಸು ಇದ್ದರೆ ಸಕರ್ಾರಿ ಉದ್ಯೋಗ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. 

ಅಧಿಕಾರ ಮತ್ತು ಸೇವೆ ಇರುತ್ತೆ ಇದೊಂದು ವೇದಿಕೆ ಎಂದು ಶ್ಲಾಘೀಸಿದರು. ಐ.ಎ.ಎಸ್, ಕೆ.ಎ.ಎಸ್.ಪಿ.ಎಸ್.ಐ, ಯು.ಪಿ.ಎಸ್.ಸಿ ಪೂರ್ವಭಾವಿ ಪರೀಕ್ಷೆ, ಬಹು ಆಯ್ಕೆ ಮತ್ತು ವಸ್ತು ನಿಷ್ಠೆ ಪ್ರಶ್ನೆ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದರು.  ಐ.ಎ.ಎಸ್, ಕೆ.ಎ.ಎಸ್, ಸ್ಟೆಡೀ ಸರ್ಕಲ್ ಸಂಸ್ಥೆಯ ಸಂಚಾಲಕ ನವೀನ್ ಗಣಿತ ವಿಷಯದ ಬಗ್ಗೆ ಮಾಹಿತಿ ನೀಡಿದರು. 

ಡಾ. ಪ್ರಾಣೇಶ ಕುಲಕಣರ್ಿ ರಾಯಚೂರಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯ ನಿರ್ಣಯ, ಸಮರ್ಪಣೆ, ತಿಮರ್ಾನ, ಸಾಧನೆಯ ಕನಸ್ಸು ಕಾಣದಿರಿ ವ್ಯಕ್ತಿತ್ವದಲ್ಲಿ ನನಸಾಗಿಸಿಕೊಳ್ಳಿ ಎಂದು ವಿದ್ಯಾಥರ್ಿಗಳಿಗೆ ಆತ್ಮಸ್ಥೈರ್ಯ, ನಂಬಿಕೆ ಬಗ್ಗೆ ತಿಳವಳಿಕೆ ನೀಡಿದರು. ಅಧ್ಯಕ್ಷತೆ ಪ್ರಾಚಾರ್ಯ ಸಿ.ಬಿ ಚಿಲ್ಕರಾಗಿ ವಹಿಸಿದ್ದರು ಮುಂದಿನ ದಿನಮಾನದಲ್ಲಿ ಕಾಯರ್ಾಗಾರಗಳು ಪ್ರಥಮ ವರ್ಷದಿಂದಲೇ ವಿದ್ಯಾಥರ್ಿನಿ-ವಿದ್ಯಾಥರ್ಿಗಳಿಗಾಗಿ ನಡೆಸಲಾಗುತ್ತದೆ ಎಂದರು. 

ವೇದಿಕೆ ಮೇಲಿರುವ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ರಾಘವೇಂದ್ರ ರೆಡ್ಡಿ ಇದ್ದರು. ಡಾ. ಪ್ರಭುರಾಜ್ ಸ್ವಾಗತಿಸಿದರು. ಮಾರುತೇಶ ಪರಿಚಯಿಸಿದರು. ಪ್ರೊ. ನಟರಾಜ ನಿರೂಪಿಸಿದರು. ಗಾಯಿತ್ರಿ ಬಾವಿಕಟ್ಟಿ ವಂದಿಸಿದರು. ವಿದ್ಯಾಥರ್ಿಗಳಿಂದ ಪ್ರಾರ್ಥನೆ ಗೀತೆ ಜರುಗಿತು, ಪ್ರೊ. ಹಸನ್ಮಿಯ್ಯ ಭಾಗ್ಯಜ್ಯೋತಿ, ಶುಭಾ, ಸಂತೋಷಕುಮಾರಿ, ದೈಹಿಕ ನಿದೆರ್ೇಶಕಿ ಶೋಭಾ ಕೆ.ಎಸ್ ಮತ್ತಿತರು ಇದ್ದರು. 300 ಕ್ಕೂ ಹೆಚ್ಚು ವಿದ್ಯಾಥರ್ಿ-ವಿದ್ಯಾಥರ್ಿನಿಯರು ಈ ಕಾಯರ್ಾಗಾರದ ಲಾಭ ಪಡೆದರು ಎಂದು ಹುಲಿಗೆಮ್ಮ ಎಂ. ಗಿಣಿಗೇರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.