ಕೊಪ್ಪಳ : ಮೋದಿ ಮತ್ತೇ ಪ್ರಧಾನಿಯಾಗಲು ನನಗೆ ಆಶೀರ್ವಾದ ಮಾಡಿದ್ದಾರೆ: ಕರಡಿ

ಲೋಕದರ್ಶನ ವರದಿ

ಕೊಪ್ಪಳ 02: ಲೋಕಸಭೆ ಕ್ಷೇತ್ರದ ಜನತೆ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ನನಗೆ ಆಶೀರ್ವಾದ   ಮಾಡಿದ್ದಾರೆ ಗೆಲುವು ನಿಶ್ಚಿತ ಎಂದು ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸಂಗಣ್ಣ ಕರಡಿ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಬುಧುವಾರ ನಗರದ ಶಿವಶಾಂತವೀರ ಮಂಗಲಭವನದಲ್ಲಿ ಜಿಲ್ಲಾ ಬಿಜೆಪಿ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯ ಅವಲೋಕನ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿ ಮತ್ತೊಮ್ಮೆ ಮೋದಿ,ಸಂಗಣ್ಣ ಎಂದು ನಮಗೆ ಜನ ಮತನೀಡಿದ್ದಾರೆ,ಚುನಾವಣೆಯ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು. 

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ 2014 ರ ಚುನಾವಣೆಯ ಫಲಿತಾಂಶದಂತೆ 2019ರಲ್ಲಿ ಕಾಯುತ್ತಿದ್ದೇವೆ ಆತ್ಮವಿಶ್ವಾಸದಿಂದ, ಗೆಲ್ಲುವಿನ ಭರವಸೆ ರಾಜ್ಯದಲ್ಲಿ ಹಾಗೂ ಈ ಕ್ಷೇತ್ರದಲ್ಲಿ ಕಾಯುತ್ತಿದ್ದೇವೆ ಕಾಂಗ್ರೆಸ್ ನವರು ಹಣ ಹಂಚಿರಬಹುದು ಆದರೆ ಬಿಜೆಪಿ ಸಂಘಟನೆಯ ಶಕ್ತಿ ಮತ್ತು ಜನತೆ ಆಶೀರ್ವಾದದ ಮುಂದೆ ಕಾಂಗ್ರೆಸ್ನ ಹಣಬಲ ನಡೆಯುವದಿಲ್ಲ, ಮೋದಿಯವರ ಆಡಳಿತವನ್ನು ದೇಶದ ಜನ ಮಚ್ಚಿಕೊಂಡಿದ್ದು, ಜನರ ಮನಸ್ಸನ್ನು ಗೆದ್ದಿದ್ದಾರೆ, ಭಾರತ ಜಗತ್ತಿನಲ್ಲಿ ಬಲಿಷ್ಠವಾದ ರಾಷ್ಟ್ರವಾಗಲಿದೆ, ದೇಶದ ನೂರಮೂವತ್ತು ಕೋಟಿ ಜನರಿಗೆ ಮೋದಿ ಸರ್ಕಾರದ  ಮೇಲೆ ಭರವಸೆ ಬಂದಿದೆ, ಈ ಚುನಾವಣೆಯಲ್ಲಿ ಗೆಲ್ಲುವ ಯಶಸ್ಸು ನಂಬುಗೆಯಲ್ಲಿದ್ದೇವೆ, ಮೇ 23 ರಂದು ನೂರಾರು ಕ್ಕೆ ನೂರರಷ್ಟು ಈ ಕ್ಷೇತ್ರದಿಂದ ಗೆದ್ದೆ ಗೆಲ್ಲುತ್ತೇವೆ ಆ ಆತ್ಮವಿಶ್ಬಾಸ ನಮ್ಮಲ್ಲಿದೆ ಎಂದರು.

ಬಿಜೆಪಿ ಮುಖಂಡ ತಿಪ್ಪೇರುದ್ರಯ್ಯಸ್ವಾಮಿಯವರು ಮಾತನಾಡಿ ಕಾಂಗ್ರೆಸ್, ಜೆಡಿಎಸ್ನವರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಸ್ವತಃ ಅವರ ಕಾರ್ಯಕರ್ತರೆ ಸಿಂಧನೂರ ಭಾಗದಲ್ಲಿ ಹೇಳುತ್ತಾರೆ,  ಯಲುಬುರ್ಗಾದಲ್ಲಿ  ಹದಿನೈದು ಸಾವಿರ, ಗಂಗಾವತಿಯಲ್ಲಿ ಮುಸ್ಲಿಂರು ನೋಟಾ ಮತ್ತು ಬಿಜೆಪಿಗೆ ಮತಹಾಕಿದ್ದಾರೆ, ಕರಡಿ ಗುಡ್ಡಕ್ಕೆ ಹೋಗಲ್ಲ ಮತ್ತೆ ಕೊಪ್ಪಳದ ಗವಿಯಲ್ಲಿ ಇರುತ್ತಾರೆ,ಗಂಗಾವತಿ, ಕನಕಗಿರಿ, ಮಸ್ಕಿ, ಸಿರುಗುಪ್ಪಾ, ಯಲಬುಗರ್ಾದಲ್ಲಿ ಬಿಜೆಪಿ ಹೆಚ್ಚು ಮತಗಳು ಲಭಿಸುತ್ತವೆ ಹಾಗೂ  ಕೊಪ್ಪಳ, ಗಂಗಾವತಿ, ಸಿಂಧನೂರ, ಸಮಬಲದ ಸ್ಪಧರ್ೆ ಇದೆ ಎಂದರು.ವಿಧಾನಪರಿಷತ್ ಮಾಜಿ ಸದಸ್ಯ ಮೃತಂಜಯ್ಯ ಜಿನಗಾ ಮಾತನಾಡಿ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಹೆಚ್ಚು ಶ್ರಮವಹಿಸಿ ದುಡಿದಿದ್ದಾರೆ, ಅವರ ಶ್ರಮ ಸಾರ್ಥಕವಾಗುವ ವಿಶ್ವಾಸವಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ವಹಿಸಿದ್ದರು. ಮಾಜಿ ಶಾಸಕ ಕೆ.ಶರಣಪ್ಪ, ಮುಖಂಡರಾದ ಸಿ.ವಿ.ಚಂದ್ರಶೇಖರ, ಅಮರೇಶ ಕರಡಿ, ಚಂದ್ರಶೇಖರ ಕವಲೂರು, ಹೆಚ್ ಗಿರಿಗೌಡ, ರಾಜು ಬಾಕಳೆ, ಹೇಮಲತಾ, ಮಧುರಾ ಕರುಣಂ ಪ್ರಾಣೇಶ ಮಾದಿನೂರು, ನವೀನ್ ಗುಳಗಣ್ಣವರ, ಈಶಪ್ಪ ಮಾದಿನೂರ, ಚಂದ್ರು ಹಲಗೇರಿ, ಪಕ್ಷದ ಸಂಚಾಲಕರು, ಪ್ರಭಾರಿಗಳು, ಉಪಸ್ಥಿತರಿದ್ದರು.