ಕೊಪ್ಪಳ 03: ಅಪೌಷ್ಠಿಕತೆ, ಅತಿಸಾರಭೇದಿ ಕಾಯಿಲೆ ತಡೆಗಟ್ಟಿ ಮಕ್ಕಳನ್ನು ರಕ್ಷಿಸಿ ಆರೋಗ್ಯವಂತ ಸಮಾಜ ನಿಮರ್ಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೊಪ್ಪಳ ನಗರ ಸಭೆ ಸದಸ್ಯರು ಅಮಜದ ಪಟೇಲ್ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ನಗರ ಸಭೆ ಕಾರ್ಯಾಲಯ ಇವರ ಸಹಯೋಗದಲ್ಲಿ ಇಂದು (ಜೂನ್. 03) ನಗರದ 03ನೇ ವಾಡರ್ಿನ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ತೀವ್ರತರ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡ ಈ ಅತಿಸಾರಭೇದಿ ನಿಯಂತ್ರಣ ಕಾರ್ಯಕ್ರಮ ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ನಗರ ಪ್ರದೇಶದ ಕೊಳಚೆ ಪ್ರದೇಶದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕೊರತೆಯಿಂದ ಮಕ್ಕಳಿಗೆ ಖಾಯಿಲೆ ಬರುತ್ತವೆ. ಅಂತಹ ಖಾಯಿಲೆಗಳಲ್ಲಿ ಅತಿಸಾರಭೇದಿ ಖಾಯಿಲೆ ಕೂಡ ಒಂದಾಗಿದೆ. ಮಕ್ಕಳು ಈ ಖಾಯಿಲೆಯಿಂದ ಹೊರಗೆ ಬರಬೇಕಾದರೆ ತಾಯಿಂದರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕತರ್ೆಯರು ಈ ಖಾಯಿಲೆಯ ಬಗ್ಗೆ ತಿಳಿದಿಕೊಳ್ಳುವುದು ಅವಶ್ಯವಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆ ಇಂದು ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. 05 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಖಾಯಿಲೆ ಬರುವುದು ಸಹಜ. ಇಂತಹ ಖಾಯಿಲೆಯುಳ್ಳ ಮಕ್ಕಳಿಗೆ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಸಹಾಯಕರು ತಮ್ಮ ಮನೆಗೆ ಬೇಟಿ ನೀಡಿ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ನೀಡುತ್ತಾರೆ. ಕಾರ್ಯಕತರ್ೆಯರು ಮನೆ ಬೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಂತೆ ಹಾಗೂ ಅಪೌಷ್ಠಿಕತೆ, ಅತಿಸಾರಭೇದಿ ಖಾಯಿಲೆ ತಡಿಗಟ್ಟಿ ಮಕ್ಕಳನ್ನು ರಕ್ಷಿಸುವಂತೆ ಕೊಪ್ಪಳ ನಗರ ಸಭೆ ಸದಸ್ಯರು ಅಮಜದ ಪಟೇಲ್ ಹೇಳಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗರಾಜ ಅವರು ಮಾತನಾಡಿ, ದೇಶದಲ್ಲಿ 05 ವರ್ಷದೊಳಗಿನ ಮಕ್ಕಳ ಮರಣಕ್ಕೆ ಅತಿಸಾರಭೇದಿಯು ಕಾರಣವಾಗಿದೆ. ಪಾಲಕರು ಮನೆಯಲ್ಲಿ ಸ್ವಚ್ಛತೆ ಕಾಪಾಡದೇ ಇದ್ದಾಗ, ಕಲುಷಿತ ನೀರು ಸೇವನೆಯಿಂದ ಈ ಖಾಯಿಲೆ ಉಂಟಾಗುತ್ತದೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಕಲುಷಿತ ನೀರು ಸೇವನೆಯಿಂದ ಉಂಟಾಗುವ ಈ ಖಾಯಿಲೆಯನ್ನು ತಡೆಗಟ್ಟಲು ನಮ್ಮ ಸಿಬ್ಬಂದಿಗಳು ಮನೆ ಮನೆ ಬೇಟಿ ನೀಡಿ ಭೇದಿಯಿಂದ ನರಳುವ ಮಕ್ಕಳಿಗೆ ಓ.ಆರ್.ಎಸ್ & ಜಿಂಕ್ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡುವರು. ''ತೀವ್ರತರ ಅತಿಸಾರಭೇದಿಯಿಂದ ಶೂನ್ಯ ಮಕ್ಕಳ ಮರಣ'' ಎಂಬ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ನಡೆಯುತ್ತದೆ. ಈ ಖಾಯಿಲೆಯಿಂದ ಮಗುವಿನ ಮಲದ ರೂಪದಲ್ಲಿ ನೀರಿನಂತೆ ಮೇಲಿಂದ ಮೇಲೆ ಆಗುವುದು, ಕಿರಿ ಕಿರಿ ಉಂಟು ಮಾಡುವುದು, ಪ್ರಜ್ಞೆ ತಪ್ಪುವುದು, ಬಾಯಾರಿಕೆ ಯಾಗುವುದು, ಮಗುವಿನ ಕಣ್ಣುಗಳು ಒಳಗೆ ಹೋದಂತೆ ಕಾಣುವುದು, ಮಗುವಿನ ಹೊಟ್ಟೆಯ ಚರ್ಮವನ್ನು ಎಳೆದು ಬಿಟ್ಟಾಗ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರುವುದು ಇಂತಹ ಲಕ್ಷಣ ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಬೇಟಿ ನೀಡಬೇಕು. ಮತ್ತು ಓ.ಆರ್.ಎಸ್ ದ್ರಾವಣ ನೀಡಿ ಚಿಕಿತ್ಸೆ ಕೊಡಿಸಬೇಕು. ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಜೂನ್. 03 ರಿಂದ 17 ರವರೆಗೆ ನಡೆಯಲಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ ಈಗ ಮಳೆಗಾಲ ಪ್ರಾರಂಭವಾಗಿರುವದುರಿಂದ ನೀರಿನ ತೊಂದರೆ ಉಂಟಾಗಿ ಕಲುಷಿತ ನೀರು ಸೇವನೆಯಿಂದ ಈ ಅತಿಸಾರಭೇದಿ ಉಂಟಾಗುತ್ತದೆ. ಆದ್ದರಿಂದ ತಾಯಿಂದಿರು ಮನೆಯಲ್ಲಿ ಮತ್ತು ಅದರ ಸುತ್ತ ಮುತ್ತಲೂ ಸ್ವಚ್ಛತೆ ಕಾಪಾಡಬೇಕು. ಮಕ್ಕಳನ್ನು ಬಯಲಿನಲ್ಲಿ ಮಲ ವಿಸರ್ಜನೆ ಮಾಡದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಆಹಾರ ಕೊಡುವ ಮುನ್ನ ಹಾಗೂ ಮಕ್ಕಳ ಶೌಚಾಲಯ ಸ್ವಚ್ಛಗೊಳಿಸಿದ ನಂತರ ಕೈಗಳಿಗೆ ಸೋಪು ಹಚ್ಚಿ ತೊಳೆದುಕೊಳ್ಳಬೇಕು. ಈ ಖಾಯಿಲೆ ಉಂಟದಾಗ ತಪ್ಪದೇ ಓ.ಆರ್.ಎಸ್ ದ್ರಾವಣ ಮತ್ತು 14 ದಿನಗಳವರೆಗೆ ಜಿಂಕ್ ಮಾತ್ರೆಗಳನ್ನು ನೀಡಿ ರಕ್ಷಸಿಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಎಸ್. ಯರಗಲ್ಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ., ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ ಸೇರಿದಂತರೆ ಮೃತ್ಯಂಜಯ್ಯ, ಶರತಕುಮಾರ ಕೆ.ಎನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಕಿ.ಆ.ಸ.ಮ ವಂದನಾ, ಲಲಿತಾ, ಇಲಾಖೆಯ ಸಿಬ್ಬಂದಿಗಳು, ಆಶಾ ಮೇಲ್ವಿಚಾರಕರು, ತಾಯಿಂದಿರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗಭರ್ಿಣಿಯರು, ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಓ.ಆರ್.ಎಸ್ ದ್ರಾವಣ ತಯಾರಿಸುವ ಬಗ್ಗೆ ಪ್ರಾತ್ಯಕ್ಷತೆ ತೋರಿಸಲಾಯಿತು.