ಲೋಕದರ್ಶನ ವರದಿ
ಕೊಪ್ಪಳ 19: ಮತದಾನ ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅದನ್ನು ತಪ್ಪದೇ ಚಲಾಯಿಸಿ ನಮ್ಮ ದೇಶದ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು, ಮತ ಹಾಕುವುದರ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು, ಈ ದೀಶೆಯಲ್ಲಿ ನಮ್ಮ ಮುಸ್ಲಿಂ ಸಮೂದಾಯ ಹಿಂದುಳಿಂಬಾರದು, ಎಲ್ಲರಂತೆ ನೀವು ಸಹ ಹೆಚ್ಚಿನ ಸಂಖ್ಯೆಯಲ್ಲಿ ತದಾನ ಮಾಡಿ ಜಾತ್ಯತೀತ ಶಕ್ತಿಗಳಿಗೆ ಬೆಂಬಲಿಸಬೇಕು ಎಂದು ವಿಧಾನ ಪರೀಷತ್ನ ಸದಸ್ಯ ಅಬ್ದುಲ್ ಜಬ್ಬಾರ ಡಾವಣಗೇರಿ ಹೇಳಿದರು.
ಈ ಕುರಿತು ಹೇಳಿಕೆ ನೀಡಿದ ಅವರು ಗುರುವಾರದಂದು ಜರುಗಿದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಜರುಗಿದ್ದು, ಅದರಲ್ಲಿ ಮುಸ್ಲಿಂ ಜಮಾಜದ ಮತದಾರರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಬೇಕಾಗಿತ್ತು, ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ನೀಡಿದರು ಸಹ ಸಾರ್ವಜನಿಕರು ಕೇಲವೊಂದು ಕ್ಷೇತ್ರದಲ್ಲಿ ನಿರುತ್ಸಾಹ ತೊರಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಇನ್ನುಳಿದಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ದಿ: 23 ರಂದು ಮತದಾನ ಜರುಗಲಿದ್ದು ಶೇ. 100 ಕ್ಕೆ 100 ರಷ್ಟು ಮತದಾನ ಜರುಗಲು ಸರ್ವ ಜನರು ಶ್ರಮಿಸಬೇಕು ತಮ್ಮ ಹಕ್ಕು ಚಲಾಯಿಸಿ ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದರು.
ಈಗಾಗಲೆ ನಮ್ ದೇಶದಲ್ಲಿ ಕೋಮುವಾದಿ ಶಕ್ತಿಗಳು ಪ್ರಜಾಪ್ರಭುತ್ವದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಈಡಿ ವಿಶ್ವಕ್ಕೆ ಮಾದರಿಯಾಗಿರುವ ಭಾರತ ಡಾ. ಬಿ.ಆರ್. ಅಂಬೆಡ್ಕರ ಬರೆದಿರುವ ಸಂವಿಧಾನ ಬದಲಾಯಿಸುವದಾಗಿ ಕೆಲ ದುಷ್ಟ ಶಕ್ತಿಗಳು ಬಹಿರಂಗ ಹೇಳಿಕೆ ನೀಡುತ್ತಿದ್ಧಾರೆ, ಇಂತಹ ಕೋಮುವಾದಿ ಶಕ್ತಿಗಳನ್ನು ದೂರ ಇಟ್ಟು ನಮ್ಮ ದೇಶದ ಸಂವಿಧಾನದ ಉಳಿವಿಗಾಗಿ ಮತ್ತು ನಮ್ಮ ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಶಕ್ತಿಗಳಿಗೆ ಬೆಂಬಲಿಸಬೇಕು, ಒಂದು ವೇಳೆ ಶೋಷಿತರು ಮತ್ತು ಮುಸ್ಲಿಂರು ನಿರ್ಲಕ್ಷಿಸಿದರೆ ಕೋಮುವಾದಿ ಶಕ್ತಿ ಮುಂದೆ ಚುನಾವಣೆಗೆ ನಮ್ಮ ಹಕ್ಕು ಕಿತ್ತು ಕೊಳ್ಳುವ ಹುನ್ನಾರ ನೆಡಸಿದ್ದಾರೆ.
ಇದನ್ನು ತಪ್ಪಿಸಲು ತಪ್ಪದೇ ಮತದಾನ ಮಾಡಿ ಮತ್ತು ಜಾತ್ಯತೀತ ಶಕ್ತಿಗಳಿಗೆ ಬೆಂಬಲಿಸಬೇಕು ಈ ದೀಶೆಯಲ್ಲಿ ನಾಡಿನ ಜನಸಾಮಾನ್ಯರು ಮತ್ತು ಅಲ್ಪ ಸಂಖ್ಯಾತ ಸಮೂದಾಯದ ಮುಸ್ಲಿಂರು ಮತ್ತು ದಲಿತ ಸಮೂದಾಯದವರು ಅತ್ಯಂತ ಕಾಳಜಿಯಿಂದ ನಮ್ಮ ದೇಶದ ಸಂವಿಧಾನ ನೀಡಿರುವ ಮತದಾನದ ಹಕ್ಕು ಚಲಾಯಿಸಿ ಅಧೀಕ ಸಂಖ್ಯೆಯಲ್ಲಿ ಮತದಾನ ಮಾಡಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಬೆಂಬಲಸಬೇಕೆಂದು ವಿಧಾನ ಪರೀಷತ್ನ ಸದಸ್ಯ ಅಬ್ದುಲ್ ಜಬ್ಬಾರ ಡಾವಣಗೇರಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ವಕ್ಫ್ ಬೋಡರ್್ ರಾಜ್ಯ ಸದಸ್ಯ ಕೆ. ಅನ್ವರ ಬಾಷಾ, ಡಾವಣಗೇರ ಜಿಲ್ಲ ವಕ್ಫ ಬೋಡರ್್ ಅಧ್ಯಕ್ಷ ಎಂ.ಡಿ. ಸೀರಾಜ ಮತ್ತು ಕೊಪ್ಪಳದ ಅಲ್ಪ ಸಂಖ್ಯಾತ ಮುಖಂಡ ಹಾಗೂ ನಗರಸಭೆಯ ಹಿರಿಯ ಸದಸ್ಯ ಅಮ್ಜದ್ ಪಟೇಲ್ ಉಪಸ್ಥಿತರಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯತರ್ೀ ಕೆ. ರಾಜಶೇಖರ ಹಿಟ್ನಾಳ್ ಪರ ಮತಯಾಚಿಸಿದರು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.