ಲೋಕದರ್ಶನ ವರದಿ
ಕೊಪ್ಪಳ 22: ಮನುಷ್ಯ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅದರಿಂದ ಪಡೆದ ಅನುಭವ ಮುಖ್ಯ ಅನುಭಾವ ಗೋಷ್ಠಿಗಳು ಮನುಷ್ಯನ ಕೆಲಸ ಮತ್ತು ಸೇವೆ ಸಮಾಜಕ್ಕೆ ತೋರಿಸುತ್ತದೆ. ಇದಕ್ಕೆ ಬೆಲೆಕಟ್ಟಾಗಲ್ಲ, ಪದವಿಗಿಂತ ಮನುಷ್ಯನ ಅನುಭವ ಮಿಗಿಲಾದದ್ದು. ಈ ದಿಶೆಯಲ್ಲಿ ಹಿರಿಯ ಜೀವಿ ಶರಣಬಸವರಾಜ ಬಿಸರಳ್ಳಿ ರವರ ಸೇವೆ ಅನನ್ಯವಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜ. ಮ.ನಿಪ್ರ. ಗುರು ಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.
ಅವರು ಗುರುವಾರ ದಂದು ಹುಬ್ಬಳ್ಳಿಯ ಚವ್ಹಾಣ ಗ್ರೀನ್ ಗಾರ್ಡನ್ ದಲ್ಲಿ ಹದ್ಲಿ ಲಿಂ. ವೀರಬಸಪ್ಪ, ಬಸಪ್ಪ ಬಿಸರಳ್ಳಿ ಕೊಪ್ಪಳ ಸ್ಮರಣಾರ್ಥವಾಗಿ ಗುರು ಬಸವ ಮೆಮರೋಯಿಲ್ ಟ್ರಸ್ಟ್ ಹುಬ್ಬಳ್ಳಿ ಮತ್ತು ಕೊಪ್ಪಳ ವತಿಯಿಂದ ಏರ್ಪಡಿಸಿದ ಮಹಾತಪಸ್ವಿ ಲಿಂ. ಗುರು ಬಸಪ್ಪ ಅಜ್ಜನವರ 81 ನೇ ಪುಣ್ಯ ತಿಥಿ ಆಚರಣೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ಭಾಷಣದಲ್ಲಿ ಮಾತನಾಡಿ, ಆಚಾರಗಳಿಲ್ಲದೆ ಅರಿವು ಇಲ್ಲ, ಆಚಾರಕ್ಕೆ ಕೊರತೆವಿಲ್ಲ, ಅನುಭಾವ ಗೋಷ್ಠಿಗಳಿಗೆ ಬೆಲೆಕಟ್ಟಾಗಲ್ಲ, ಬಿಸರಳ್ಳಿ ಕುಟುಂಬದ ಸೇವೆ ಅವಿಸ್ಮರಣಿಯವಾಗಿದೆ ಎಂದು ಹೇಳಿದರು.
ಗುರು ಬಸವ ಪ್ರಶಸ್ತಿ ಸ್ವೀಕರಿಸಿ ಜಮಖಂಡಿ ತಾಲೂಕಿನ ಹೊನ್ನರು ಬಸವ ಜ್ಞಾನ ಗುರುಕುಲ ಸಾಂಸ್ಕೃತಿಕ, ಧಾಮರ್ಿಕ ಆಧ್ಮ್ಯಾತ್ಮಿಕ ಯೋಗಾಶ್ರಮದ ಪೂಜ್ಯ ಶರಣ ಡಾ. ಈಶ್ವರ ಮಂಟೊರ ರವರು ಮತಾನಾಡಿ, ಬಿರಸಳ್ಳಿ ಕುಟುಂಬ ಅಪರೂಪ ಕುಟುಂಬ ಕಾಯಕವೇ ಅವರಿಗೆ ಮುಖ್ಯ, ದಾಸೋಹ, ಭಕ್ತಿ, ಶರಣರ ಅಮೃತವಾಣಿ ಇವು ಎಲ್ಲಾ ಒಂದೇ ಜಗತ್ತಿನ ನಿವಾಸಿಗಳಿದಂತೆ. ಹುಟ್ಟು ಹಬ್ಬಗಳಲ್ಲಿ ದೀಪ ಆರಿಸುತ್ತಾರೆ, ಜಯಂತಿಗಳಲ್ಲಿ ಹಚ್ಚುತ್ತಾರೆ. ಇಂತಂಹ ಕಾರ್ಯಕ್ರಮಗಳಿಗೆ ಎಷ್ಟು ಜನ ಸೇರಿದ್ದಾರೆ ಎಂಬುದಕ್ಕಿಂತ, ಎಂತಹ ಜನ ಸೇರಿದ್ದಾರೆ ಎಂಬುದು ಮುಖ್ಯ. ಮನುಷ್ಯನ ಸಾಧನೆ ಉಳಿಯಬೇಕು ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಇದನ್ನು ಅರಿತು ಕೊಂಡು ಬದುಕಿದರೆ ಜೀವನ ಸಾರ್ಥಕ ಎಂದರು.
ಚನ್ನಬಸವ ಮಹಾಸ್ವಾಮಿಗಳು ಇಂಗೇಳೇಶ್ವರಮಠ ಬಸವಬಾಗೇವಾಡಿ ಇವರುಗಳು ದಿವ್ಯ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು. ವಿಶೇಷ ಸನ್ಮಾನಿತರಾಗಿ ಹಂಪಿ ವಿವಿ ನಿದರ್ೇಶಕರಾದ ಡಾ. ರವೀಂದ್ರನಾಥ, ಡಾ. ಚಲುವರಾಯ, ದಾರವಾಡ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಟೈಮ್ ಸಂಸ್ಥೆಯ ಮುಖ್ಯವ್ಯಸ್ಥಾಪಕ ನಿದರ್ೇಶಕ ಅಬೀಲ ಹಲಗತ್ತಿ, ಹುಬ್ಬಳ್ಳಿ ಸಾಯಿಬಾಬಾ ಟ್ರಸ್ಟ್ ಕಮೀಟಿ ಅಧ್ಯಕ್ಷ ಅಪ್ಪಾಸಾಹೇಬ ಚವ್ಹಾಣ, ಕೊಪ್ಪಳದ ಹಿರಿಯ ಪತ್ರಕರ್ತ ಕನರ್ಾಟಕ ಮಾಧ್ಯಮ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರುಸ್ಕೃತ ಎಂ.ಸಾದಿಕ್ ಅಲಿ, ದುಬೈ ಸಾಹಿತಿ ಈರಣ್ಣ ಮೂಲಿಮನಿ, ದುಬೈ ಅಭಿಯಂತರರಾದ ಮುರಗೇಶ ಗಾಜರೆ ಪಾಲ್ಗೊಡಿದ್ದರು. ಕಾರ್ಯಕ್ರಮ ಸಂಘಟಕ ಟ್ರಸ್ಟ್ ಅಧ್ಯಕ್ಷರಾದ ಲಲಿತಾದೇವಿ ಎಸ್. ಬಿಸರಳ್ಳಿ, ಕಾರ್ಯದಶರ್ಿ ಶರಣ ಎಸ್. ಬಿಸರಳ್ಳಿ, ಪವನಕುಮರ ಕೆ. ಬಿಸರಳ್ಳಿ , ಚನ್ನವೀರೇಶ ವಿ.ಬಿಸರಳ್ಳಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದು, ಹಿರಿಯ ಸ್ವಾತಂತ್ರ ಯೋದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣ ಬಸವರಾಜ ಬಿಸರಳ್ಳಿ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವರ ಶಿಷ್ಯಂದಿರ ಅಭಿಮಾನಿ ಬಳಗದಿಂದ ಅವರಿಗೆ ಸನ್ಮಾನಿಸಲಾಯಿತು. ವಿರೇಶ ಬಂಗಾರಶೆಟ್ಟರು ಸ್ವಾಗತಿಸಿದರು, ಹಾಗೂ ಪತ್ರಕರ್ತ ವೀರಣ್ಣ ಅಂಗಡಿ ಕಾರ್ಯಕ್ರಮ ನಿರೂಪಿಸಿದರೆ, ಶಿವಾನಂದ ಬಿಸರಳ್ಳಿ ಕೊನೆಯಲ್ಲಿ ವಂದಿಸಿದರು.