ಕೊಪ್ಪಳ : ಕನ್ನಡದ ಮೊದಲ ಮಹಿಳಾ ಕವಿಯತ್ರಿ ಅಕ್ಕಮಹಾದೇವಿ: ದೇವರು

ಲೋಕದರ್ಶನ ವರದಿ

ಕೊಪ್ಪಳ 21: ವಚನಸಾಹಿತ್ಯದ ಮೂಲಕ ತಮ್ಮನ್ನ ಶರಣ ಚಳುವಳಿಯಲ್ಲಿ ತೊಡಗಿಸಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖಗಳನ್ನ ತ್ಯಾಗಮಾಡಿದ ಅಕ್ಕನ ಜೀವನ ಸರ್ವಕಾಲಕ್ಕೂ ಸ್ಮರಣೀಯವಾದದ್ದು ಅನ್ನದಾನೀಶ್ವರ ಮಠದ ಸ್ವಾಮಿಜೀ ಮಹದೇವ ದೇವರು ಎಂದು ಕುಕನೂರಿನ ಹೇಳಿದರು. 

ಅವರು ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಅಕ್ಕನ ಬಳಗದ ವತಿಯಿಂದ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ನಿಮಿತ್ಯ ಷಟಸ್ಥಳ ದ್ವಜಾರೋಹಣ ನೇರವೇರಿಸಿ ಮಾತನಾಡುತ್ತಾ ವಚನ ಸಾಹಿತ್ಯ ಮನುಷ್ಯನ ಬದುಕನ್ನ ತಿದ್ದುವ ಸಾಹಿತ್ಯ, ವಚನಗಳ ಅಧ್ಯಯನದಿಂದ ನೆಮ್ಮದಿಯ ಬದುಕನ್ನ ಸಾಗಿಸಲು ಸಾಧ್ಯ, ಅದರಲ್ಲೂ ಅಕ್ಕನ ವಚನಗಳಲ್ಲಿ ಇರುವ ವಿಚಾರಧಾರೆಗಳನ್ನ ನಾವೇಲ್ಲಾ ಅಳವಡಿಸಿಕೊಳ್ಳಬೇಕು ಅಕ್ಕನ ಜೀವನ ಕುರಿತು ಹಲವಾರು ಕಾವ್ಯ ಪುರಾಣಗಳು ತಿಳಿಸುತ್ತದೆ ಅಕ್ಕನ ತಂದೆ ನಿರ್ಮಲಶೆಟ್ಟಿ ತಾಯಿ ಸುಮತಿ, ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮ, ಅಕನ್ಕ ನೇರಮಾತುಗಳು ಧೀರ ವೈಚಾರಿಕತೆ ನಿಲವಿನಿಂದ ಕಲ್ಯಾಣದ ಅನುಭವ ಮಂಟಪದಲ್ಲಿ ಎಲ್ಲಾರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಳು, ಚೆನ್ನಮಲ್ಲಿಕಾಜರ್ುನ ಅಂಕಿತನಾಮದಲ್ಲಿ ಹಲವಾರು ವಚನಗಳನ್ನ ರಚಿಸಿ ಒಬ್ಬ ಶ್ರೇಷ್ಟ ವಚಾಕಾತರ್ಿಯಾಗಿ ಸಮಾಜವನ್ನ ತಿದ್ದುವ ಕಾಯಕ ಮಾಡಿದ್ದಾಳೆ ಎಂದರು. ಗೊಲರ್ೆಕೊಪ್ಪದ ಶರಣಯ್ಯ ಇಟಗಿ ಅಧಿಕಾರ ಸಂಪತ್ತು ವೈಭವ ಆಡಂಬರ ಭೋಗ ಜೀವನವನ್ನ ಸಂಪೂರ್ಣವಾಗಿ ತಿರಸ್ಕರಸಿ ಅತ್ಯಂತ ಸರಳ ಜೀವನ ಸಾಗಿಸಿದ ಅಕ್ಕನ ಜೀವನ ಈ ಕಾಲದ ಜನರಿಗೆ ಸ್ಪೂತರ್ಿಯಾಗಬೇಕು ಕಾಯಕದ ಮೂಲಕ ನಮ್ಮ ಜೀವನವನ್ನ ಸಾಗಿಸಬೇಕು ಎಂದು ಹೇಳಿ ಅದರಂತೆ ನಡೆದ ತೋರಿಸಿದ ಅಪ್ರತಿಮ ಮಹಿಳೆ ಎಂದರು. ಹಿರಿಯರಾದ ಶೇಖರಪ್ಪ ಶಿರೂರ, ಬಸಪ್ಪ ಮಾಸ್ತರ ಕವಲೂರ, ಗದಿಗೆಪ್ಪ ಪವಾಡಶೆಟ್ಟಿ, ಅಭಯ ಜೈನ, ಚೆನ್ನಮ್ಮ ವಾಲಿ, ಸುನಿತಾ ಯಕ್ಲಾಶಪುರ, ಗೌರಮ್ಮ ಮಂಡಲಗೇರಿ, ಸಂಗಪ್ಪ ಗುತ್ತಿ, ನಿರ್ಮಲ ಕಳ್ಳಮಠ, ಶಶಿಕಲಮ್ಮ ಹುಲ್ಲೂರ, ಅಕ್ಕಮ್ಮ ಕಳ್ಳಿಮಠ, ಶಿಲ್ಪ, ಸುಮಾ, ಜಯಶ್ರೀ, ನೀಲಕಂಠಯ್ಯ ಕಾಶೀಮಠ, ಬಸಪ್ಪ ಬಂಗಿ, ಮತ್ತು ಇತರರು ಪಾಲ್ಗೊಂಡಿದ್ದರು.