ಕೊಪ್ಪಳ 19: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು ಮತದಾನ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಚುನಾವಣಾ ಸಾಮಾನ್ಯ ವೀಕ್ಷಕರಾದ ರಣ ವಿಜಯ ಯಾದವ್ ತಿಳಿಸಿದರು.
ಅವರು (ಏ.17) ಜಿಲ್ಲಾ ಆಡಳಿತ ಭವನದ ಆಡಿಟೋರಿಯಂನಲ್ಲಿ ಲೋಕಸಭಾ ಚುನಾವಣೆಗೆ ಮೈಕ್ರೋ ಅಬ್ಸರ್ವರ್ ಆಗಿ ನೇಮಕವಾಗಿರುವ ಕೇಂದ್ರ ಸಕರ್ಾರದ ವಿವಿಧ ಇಲಾಖೆ, ಬ್ಯಾಂಕ್ಗಳ ಅಧಿಕಾರಿಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಮೈಕ್ರೋಅಬ್ಸರ್ವರ್ ಮತದಾನ ಮುನ್ನ ಹಾಗೂ ಮತದಾನದ ದಿನ ತಮ್ಮ ಕೆಲಸ ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ. ಯಾವುದೇ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಮೊದಲು ನಿಮ್ಮ ವರದಿ ಮುಖ್ಯವಾಗಿರುತ್ತದೆ. ಆದ್ದರಿಂದ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿ ಮೈಕ್ರೋ ಅಬ್ಸರ್ವರ್ಗಳು ಮಸ್ಟರಿಂಗ್ ದಿನ ವರದಿ ಮಾಡಿಕೊಳ್ಳಬೇಕು. ನಿಮ್ಮೊಂದಿಗೆ ಸೆಕ್ಟರ್ ಅಧಿಕಾರಿಗಳು ಸಹ ಕೆಲಸ ಮಾಡಲಿದ್ದು ಮಸ್ಟರಿಂಗ್ ಹಾಗೂ ಮತದಾನ ದಿನ ತಮ್ಮ ಕೆಲಸ ಬಹಳ ಮುಖ್ಯವಾಗಿರುತ್ತದೆ. ತಾವುಗಳು ಗಮನಿಸಬೇಕಾದ ಅಂಶಗಳ ಬಗ್ಗೆ ಚೆಕ್ಲೀಸ್ಟ್ ನೀಡಲಾಗಿದ್ದು ಸಂಪೂರ್ಣವಾಗಿ ಅವಲೋಕಿಸಿ ವರದಿ ನೀಡಬೇಕು. ಮತದಾನ ದಿನ ಮತದಾನ ಪೂರ್ವದಲ್ಲಿ ಕನಿಷ್ಠ ಒಂದು ಮತಗಟ್ಟೆಯಲ್ಲಾದರೂ ಅಣಕು ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಮತದಾನದಿಂದ ಹೊರಗುಳಿಯಬಾರದು. ಅದಕ್ಕಾಗಿಯೇ ಇಡಿಸಿ ಮತ್ತು ಅಂಚೆ ಮತಪತ್ರ ವಿತರಣೆ ಮಾಡಲಾಗುತ್ತದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಮತದಾರರಾಗಿ ಈ ವ್ಯಾಪ್ತಿಯ 8 ವಿಧಾನಸಭಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಇಡಿಸಿ (ಚುನಾವಣಾ ಕರ್ತವ್ಯದ ಪ್ರಮಾಣ ಪತ್ರ) ನೀಡಲಾಗುತ್ತದೆ. ಇದನ್ನು ಹಾಜರುಪಡಿಸಿ ಯಾವ ಮತಗಟ್ಟೆಯಲ್ಲಾದರೂ ಮತ ಚಲಾಯಿಸಬಹುದು. ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ಬೇರೆ ಕ್ಷೇತ್ರದ ಮತದಾರರಾಗಿದ್ದಲ್ಲಿ ಅಂದರೆ ಮೂರನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರವನ್ನು ವಿತರಣೆ ಮಾಡಲಾಗುತ್ತದೆ. ಆದ್ದರಿಂದ ಇದಕ್ಕಾಗಿ ನಮೂನೆ-12 ಹಾಗೂ ಇಡಿಸಿಗೆ ನಮೂನೆ-12ಎ ರಡಿ ತಮ್ಮ ಕ್ಷೇತ್ರ, ಭಾಗದ ಸಂಖ್ಯೆಯ ವಿವರ ಭತರ್ಿ ಮಾಡಿ ನೀಡಬೇಕೆಂದು ತಿಳಿಸಿ ಇದಕ್ಕಾಗ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಲ್ಲೇಶ್ ರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.