ಕೊಪ್ಪಳ: ಮತದಾನ ಜಾಗೃತಿ ಕುರಿತು ಬೀದಿ ನಾಟಕ

ಲೋಕದರ್ಶನ ವರದಿ

ಕೊಪ್ಪಳ 17: ಭಾರತ ಸರ್ಕಾರ ಚುನಾವಣಾ ಆಯೋಗ ಬೆಂಗಳೂರು ಆದೇಶದ ಮೇರೆಗೆ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಗ್ರಾಮೀಣ ಜನರಿಗೆ ಮತದಾನದ ಅರಿವು ಜಾಗೃತಿ ಮೂಡಿಸಲು ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗಂಗಾವತಿ ತಾಲೂಕಿನ ಆನೆಗುಂದಿ, ಬಸಪಟ್ಟಣ ಚಿಕ್ಕಜಂತಕಲ್ಲ, ಕೆಸರಟ್ಟಿ, ಸಂಗಾಪೂರ, ವಂಕಟಗಿರಿ ಹಾಗೂ ಕೊಪ್ಪಳ ತಾಲೂಕಿನ ಇರಕಲ್ಲಗಡಾ, ಕಿನ್ನಾಳ ಆಯ್ದ ಗ್ರಾಮಗಳಲ್ಲಿ ನಮ್ಮ ಮತ ನಮ್ಮ ಹಕ್ಕು ಎಂಬ ಬೀದಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಲಾವಿದ ಶಿವಮೂತರ್ಿ ಮೇಟಿ ನಿರ್ದೇಶನದಲ್ಲಿ  ಕಲಾವಿದರಾಗಿ ಮಹ್ಮದಸಾಬ ನದಾಫ್, ರಾಮಣ್ಣ ವಾಲ್ಮೀಕಿ, ನೀಲಪ್ಪ ಮೋಚಿ, ಶರಣಪ್ಪ ಮೇಟಿ, ದಾವಲಾಸಬ್ ಅತ್ತಾರ, ಮಾಬುಸಾಬ ಕರಮುಡಿ, ಗೌರಮ್ಮ ಕುಷ್ಟಗಿ, ನಾಗರತ್ನ ಕೊಪ್ಪಳ ಇತರರು ಭಾಗವಹಿಸಿದ್ದರು.