ಅಕ್ಷತಾ ಕಾಂಬಳೆ ಎಂಎಸ್ಸಿ ಪರೀಕ್ಷೆಯಲ್ಲಿ ಕುವೆಂಪು ವಿವಿಗೆ ಪ್ರಥಮ ರಾ​‍್ಯಂಕ್‌

Kuvempu University first rank in Akshata Kamble MSc examination

ಅಕ್ಷತಾ ಕಾಂಬಳೆ ಎಂಎಸ್ಸಿ ಪರೀಕ್ಷೆಯಲ್ಲಿ ಕುವೆಂಪು ವಿವಿಗೆ ಪ್ರಥಮ ರಾ​‍್ಯಂಕ್‌

ಹಾರೂಗೇರಿ 24  : ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಶ್ರೀಮತಿ ಅಕ್ಷತಾ ಸಿದರಾಯ ಕಾಂಬಳೆಯವರು ಪ್ರಾಣಿಶಾಸ್ತ್ರ ಎಂಎಸ್ಸಿ ವಿಭಾಗದಲ್ಲಿ ಪ್ರಥಮ ರಾ​‍್ಯಂಕ್‌ನೊಂದಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಿದರು. 

   ಅಕ್ಷತಾ ಕಾಂಬಳೆ ಅವರು ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ 2022ರ ಪರೀಕ್ಷೆಯಲ್ಲಿ ಎಂಎಸ್ಸಿ ಪ್ರಾಣಿಶಾಸ್ತ್ರ ಪದವಿಯಲ್ಲಿ ಪ್ರಥಮ ರಾ​‍್ಯಂಕ್ ಪಡೆದುಕೊಂಡಿದ್ದರು.  

  ಶ್ರೀಮತಿ ಅಕ್ಷತಾ ಸಿದರಾಯ ಕಾಂಬಳೆ ಅವರು ಸವದತ್ತಿ ತಾಲೂಕಿನ ಹೂಲಿ ಗ್ರಾಮದ ವಿಟಿಎಂಕೆ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಸಿದರಾಯ ಕಾಂಬಳೆ ಅವರ ಪುತ್ರಿ. ಹೂಲಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ್ದು, ನಂತರ ಧಾರವಾಡದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ನಂತರ ಪದವಿಯನ್ನು ಕಿಟಲ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದು, ಪ್ರಸ್ತುತ ಅಥಣಿ ತಾಲೂಕಿನ ಖವಟಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಇವರ ಈ ಸಾಧನೆಗೆ ಪ್ರಾಥಮಿಕ, ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಪಿಯುಸಿ ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು ಅಭಿನಂದಿಸಿದ್ದಾರೆ.