ಗದಗ 16: ಗದಗದಲ್ಲಿ ಇದೇ ದಿ. 28ರಿಂದ 10ದಿನಗಳ ಕಾಲ ನೇಮಕಾತಿ ಪ್ರಕ್ರಿಯೆ ಸುವ್ಯವಸ್ಥಿತವಾಗಿ ಶಾಂತಿಯುತವಾಗಿ ಜರುಗುವಂತೆ ಅವಶ್ಯಕ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಕೊಳ್ಳುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಭೂಸೇನಾ ನೇಮಕಾತಿ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ದಿನ ಜಿಲ್ಲಾವಾರು ಸರಾಸರಿ 2500 ಅಭ್ಯಥರ್ಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು ಅವರ ವಸತಿ, ಊಟೋಪಹಾರ , ಸಾರಿಗೆ, ಕುಡಿಯುವ ನೀರು, ಅವರ ದಾಖಲಾತಿಗಳ ಪರಿಶೀಲನೆಗೆ ತಂಡಗಳು, ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ, ಪೊಲೀಸ ಬಂದೋಬಸ್ತ , ಅಗ್ನಿಶಾಮಕ ವ್ಯವಸ್ಥೆ ಇತ್ಯಾದಿಗಳ ಕುರಿತಂತೆ ವಿವಿಧ ಇಲಾಖೆ, ಗದಗ ಬೆಟಗೇರಿ ನಗರಸಭೆ, ಅಭಿವೃದ್ಧಿ ಪ್ರಾಧಿಕಾರಗಳಿಗೆ ಜವಾಬ್ದಾರಿ ನೀಡಲಾಗಿದೆ. ಅವರು ಮುಂಚಿತವಾಗಿ ಈ ಕುರಿತು ಅವಶ್ಯಕ ಮಾಹಿತಿ ಪಡೆದು ಅಗತ್ಯದ ಕ್ರಮ ಕೈಕೊಳ್ಳಬೇಕು. ತಮಗೆ ವಹಿಸಿದ ಕಾರ್ಯಗಳಲ್ಲಿ ಅವ್ಯವಸ್ಥೆ ಉಂಟಾದಲ್ಲಿ ಸಂಬಂಧಿಸಿದ ಇಲಾಖೆ ಸಂಸ್ಥೆ ಅಧಿಕಾರಿಗಳೇ ಬಾಧ್ಯಸ್ಥರಾರಾಗುತ್ತಾರೆ. ಗದುಗಿನಲ್ಲಿ ನಡೆಯುವ ಭೂ ಸೇನಾ ನೇಮಕಾತಿ ಸಂಪೂರ್ಣ ಯಶಸ್ವಿಗೊಳಿಸಲು ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರವೀಂದ್ರ ಕರಿಲಿಂಗಣ್ಣವರ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾವಾರು ಅಭ್ಯರ್ಥಿ ಗಳಿಗೆ ವಿವಿಧ ಭವನ ಒಳಾಂಗಣ ಕ್ರೀಡಾಂಗಣದಲ್ಲಿ ಇರಲು ವ್ಯವಸ್ಥೆ, ಅವುಗಳನ್ನು ನಿತ್ಯವೂ ಸ್ವಚ್ಛವಾಗಿರಿಸಲು, ಕುಡಿಯುವ ನೀರು ಪೂರೈಕೆ, ಊಟೋಪಹಾರ, ಸಾರಿಗೆ, ನೇಮಕಾತಿ ಪ್ರಕ್ರಿಯೆಯಲ್ಲಿ ಸಹಾಯ ನೀಡಲು ಅಧಿಕಾರಿ ಸಿಬ್ಬಂದಿಗಳ ನೇಮಕ, ವಿದ್ಯುತ್ ಸಂಪರ್ಕ, ಪೊಲೀಸ ಬಂದೋಬಸ್ತ್, ಅಗ್ನಿ ಶಾಮಕ ಆರೋಗ್ಯಾಧಿಕಾರಿಗಳ ನಿಯುಕ್ತಿ ಕುರಿತಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಭೂಸೇನಾ ನೇಮಕಾತಿಯ ಮಂಗಳೂರು ಕೇಂದ್ರದ ನಿದರ್ೇಶಕ ಕರ್ನಲ್ ಎಂ.ಎ. ರಾಜಮನ್ನಾರ ಮಾತನಾಡಿ ಬಾಗಲಕೋಟಿ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಡಾವಣಗೆರೆ ಹಾಗೂ ಗದಗ ಜಿಲ್ಲೆಗಳಿಂದ ಗದಗದಲ್ಲಿ ನಡೆಯುವ ಭೂ ಸೇನಾ ನೇಮಕಾತಿಗೆ 23 ಸಾವಿರ ಅಭ್ಯರ್ಥಿಗಳು ಅಜರ್ಿ ಸಲ್ಲಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅವರ ದಾಖಲೆ ಪರಿಶೀಲನೆ, ದೈಹಿಕ ಅರ್ಹತೆ, ಓಟದ ಸ್ಪರ್ಧೆ , ದೈಹಿಕ ದಾಢ್ರ್ಯ ಪರೀಕ್ಷೆ, ಆರೋಗ್ಯ ಪರೀಕ್ಷೆ ಇವುಗಳಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಅಂತಿಮವಾಗಿ 10 ನೇ ತರಗತಿ ಮಟ್ಟದ ಗಣಿತ, ಇಂಗ್ಲೀಷ್, ಸಾಮಾನ್ಯ ಜ್ಞಾನ ವಿಷಯಗಳ 100 ಅಂಕಗಳ 1 ತಾಸಿನ ಪರೀಕ್ಷೆಯನ್ನು ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಜರುಗಿಸಲಾಗುವುದು. ಪ್ರತಿ ಜಿಲ್ಲೆ ಅಭ್ಯಥರ್ಿಗಲಿಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ತಿಳಿಸಿದರು.
ಗದಗ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ ಅವರು ಮಾತನಾಡಿ ಭೂಸೇನಾ ನೇಮಕಾತಿ ಪಾರದರ್ಶಕವಾಗಿ ಜರುಗುತ್ತಿದ್ದು ಯಾವುದೇ ಗೊಂದಲಗಳು ಉಂಟಾಗದಂತೆ ಜರುಗಿಸುವ ಅಗತ್ಯವಿದೆ . ಅದಕ್ಕಾಗಿ ಅಭ್ಯಥರ್ಿಗಳು ಶಾಂತಿ ಹಾಗೂ ಸಂಯಮದಿಂದ ಭಾಗವಹಿಸಲು ಅಗತ್ಯದ ಬಂದೋಬಸ್ತ್ ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಡಿ. ಪ್ರಾಣೇಶರಾವ್, ನಗರಾಭಿವೃಧ್ಧಿ ಕೋಶದ ಯೋಜನಾ ನಿದರ್ೇಶಕ ರವೀಂದ್ರ ಕರಿಲಿಂಗಣ್ಣವರ, ಧಾರವಾಡ ಸೈನಿಕ ಕಲ್ಯಾಣ ಪುನರ್ವಸತಿ ಕೆಂದ್ರದ ಉಪನಿರ್ದೇಶಕ ನಿವೃತ್ತ ವಿಂಗ್ ಕಮಾಂಡರ್ ಈಶ್ವರ ಕಡೊಳ್ಳಿ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ದೀಪಕ ಹರಡಿ, ತಹಶೀಲ್ದಾರ್ ಶ್ರೀನಿವಾಸ್ ಮೂತರ್ಿ ಕುಲಕಣರ್ಿ, ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.