ಕೊಪ್ಪಳ 19: ದಿನನಿತ್ಯಕ್ಕೆ ಅವಶ್ಯವಿರುವ ಕಾನೂನುಗಳನ್ನು ತಿಳಿದುಕೊಂಡು ಅದರಂತೆ ನಡೆಯಬೇಕು ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಂಜೀವ ವ್ಹಿ ಕುಲಕಣರ್ಿ ಅವರು ಹೇಳಿದರು.
ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಅಂಗವಾಗಿ ಕಕರ್ಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಕಾನೂನು ವಿದ್ಯಾ ಪ್ರಸಾರದ ಸಮಾರೋಪ ಸಮಾರಂಭ ಉದ್ಫಾಟಿಸಿ ಅವರು ಮಾತನಾಡಿದರು.
ಭಾರತದ ಕಟ್ಟ ಕಡೆಯ ಹಳ್ಳಿಯಲ್ಲಿ ವಾಸಿಸುವ ಜನರಿಗೂ ಸಹಾ ಕಾನೂನು ಅರಿವು ಮೂಡಿಸುವುದು ಈ ನಮ್ಮ ಪ್ರಾಧಿಕಾರದ ಪ್ರಥಮ ಗುರಿಯಾಗಿದ್ದು ಇದಕ್ಕೆ ಪ್ರಾಧಿಕಾರವು ಇಂತಹ ಕಾರ್ಯಕ್ರಮಗಳ ಮೂಲಕ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಸಾರ್ವಜನಿಕರು ಆಸಕ್ತಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಾಧಿಕಾರದ ಧೇಯೊದ್ದೇಶಗಳನ್ನು ಅರ್ಥ ಮಾಡಿಕೊಂಡು ಸುಂದರ ಜೀವನವನ್ನು ಸಾಗಿಸಬೇಕು ಮತ್ತು ದಿನನಿತ್ಯಕ್ಕೆ ಅವಶ್ಯವಿರುವ ಕಾನೂನುಗಳನ್ನು ತಿಳಿದುಕೊಂಡು ಅದರಂತೆ ನಡೆಯಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಂಜೀವ ವ್ಹಿ ಕುಲಕಣರ್ಿ ಅವರು ಗ್ರಾಮದ ಜನರಿಗೆ ಸಲಹೆಯನ್ನು ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ, ವಕೀಲರಾದ ವಿ.ಎಂ.ಭೂಸನೂರಮಠ ಮಾತನಾಡಿ, ಜನಸಾಮಾನ್ಯರಿಗಾಗಿ ಕಾನೂನು ಕುರಿತು ಅನೇಕ ಕಾನೂನುಗಳ ಬಗ್ಗೆ ಸಂಕ್ಷೀಪ್ತ ವಿವರಣೆಯನ್ನು ನೀಡಿ ರೈತರು ತಮ್ಮ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಕೋರ್ಟಗೆ ಅಲೆದಾಡದೇ ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ವಕೀಲರಾದ ಎ.ವಿ.ಕಣವಿ ಭಾರತೀಯ ನೊಂದಣಿ ಕಾಯ್ದೆ ಕುರಿತು ಉಪನ್ಯಾಸ ನೀಡಿ, ಸಾರ್ವಜನಿಕರು ಯಾವುದೇ ಜಮೀನಿಗೆ ಸಂಬಂಧಪಟ್ಟ ವ್ಯವಹರಣೆಗಳನ್ನು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು. ಮದ್ಯವತರ್ಿಗಳ ಮಾತು ಕೇಳಿ ಮೋಸ ಹೋಗಬಾರದು ಎಂದು ಜನರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕಮಲಮ್ಮ ಪಾಂಡುರಂಗನಗೌಡ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ, ಕುಮಾರ ಎಸ್., ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ್ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮನುಶಮರ್ಾ, ತರಬೇತಿ ಸಿವಿಲ್ ನ್ಯಾಯಾಧೀಶ ಮಲ್ಲಿಕಾಜರ್ುನ, ರಾಜೇಂದ್ರಪ್ರಸಾದ, ಚಂದ್ರಕಾಂತ, ಮುನಿರಾಬಾದ್ ಪಿಎಸ್ಐ ರಂಗಯ್ಯ, ಪಿ.ಡಿ.ಓ. ಗುರುಸಿದ್ದಪ್ಪ, ವಕೀಲರಾದ ಪಿ.ಆರ್. ಹೊಸಳ್ಳಿ, ರವಿ ಪಾಟೀಲ, ಎಸ್.ಬಿ. ನಿಲೋಗಲ್ ಹಾಗೂ ಇತರ ವಕೀಲರು, ಕೋರ್ಟ ಮ್ಯಾನೇಜರ್ ಬಸಪ್ಪ, ಶಿವಕುಮಾರ ಉಪಸ್ಥಿತರಿದ್ದರು.