ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸಹಕಾರ ಇರಲಿ: ಲಾಲಹುಸೇನ

Let the discourse program be successful: Lalhusena

ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸಹಕಾರ ಇರಲಿ: ಲಾಲಹುಸೇನ  

ತಾಳಿಕೋಟೆ, 29: ಪಟ್ಟಣದಲ್ಲಿ ಫೆ. 21, 22 ಹಾಗೂ 23ರಂದು ನಡೆಯಲಿರುವ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದ ಯಶಸ್ವಿಗೆ ಸರ್ವ ಸಮಾಜದ ಬಾಂಧವರ ಸಹಕಾರದ ಅಗತ್ಯ ಇದೆ ಎಂದು ಖ್ಯಾತವಾಗ್ಮಿ ಪ್ರೊ. ಲಾಲಹುಸೇನ ಕಂದಗಲ್ಲ ಹೇಳಿದರು.  

     ಪಟ್ಟಣದ ಶ್ರೀ ವಿಠಲ್ ಮಂದಿರದಲ್ಲಿ ಮಂಗಳವಾರ ಜಮಾಅತೆ ಇಸ್ಲಾಮಿ ಹಿಂದ್ ನಗರ ಶಾಖೆಯ ವತಿಯಿಂದ ಹಮ್ಮಿಕೊಂಡ ಕುರಆನ್ ಪ್ರವಚನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಈ ಮೂರು ದಿನದ ಪ್ರವಚನದಲ್ಲಿ ಮೊದಲನೇ ದಿನದಂದು ಅಮಲು ಮುಕ್ತ ಸಮಾಜ, ಎರಡನೇ ದಿನದಂದು ಸುಭದ್ರ ಕುಟುಂಬ ಹಾಗೂ ಕೊನೆಯ ದಿನದಂದು ಯಶಸ್ವಿ ಜೀವನ ಎಂಬ ವಿಷಯದ ಮೇಲೆ ಖ್ಯಾತ ಪ್ರವಚನಕಾರ ಜಟ ಮುಹಮ್ಮದ್ ಕುಂಞಿ ಮಂಗಳೂರು ಅವರು ಪ್ರವಚನ ನೀಡಲಿದ್ದಾರೆ.  

ಎಲ್ಲ ಸಮಾಜದ ಬಾಂಧವರ ಮಧ್ಯೆ ಪ್ರೀತಿ ವಿಶ್ವಾಸ ಭಾತೃತ್ವ ಬೆಳೆಸಿ ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಒಂದಾಗಿ ಶ್ರಮಿಸ ಬೇಕಾಗಿದೆ ಎನ್ನುವ ಜಾಗೃತಿಯನ್ನು ಮೂಡಿಸುವ ಉದ್ದೇಶ ಈ ಪ್ರವಚನ ಕಾರ್ಯಕ್ರಮದಿಂದ ಮಾಡಲಾಗುವುದು ಎಂದ ಅವರು ಪ್ರವಚನದ ವೇದಿಕೆ ಮೇಲೆ ಸರ್ವ ಸಮಾಜದ ಧಾರ್ಮಿಕ ಗುರುಗಳು, ರಾಜಕೀಯ ಮುಖಂಡರು ಹಾಗೂ ಚಿಂತಕರು ಇರಲಿದ್ದಾರೆ ಎಂದರು. 

ಸಭೆಯಲ್ಲಿ ಹಿರಿಯ ಪತ್ರಕರ್ತ ಜಿ.ಟಿ. ಘೋರೆ​‍್ಡ, ಸಾಹಿತಿ ಅಶೋಕ ಹಂಚಲಿ, ಜೆ.ಎಸ್‌.ಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಪತ್ತಾರ, ನ್ಯಾಯವಾದಿ ಗಂಗಾಧರ ಕಸ್ತೂರಿ, ದಲಿತ ಮುಖಂಡ ಜೈ ಭೀಮ್ ಮುತ್ತಗಿ,ಮಹಾಂತೇಶ ಮುರಾಳ ಹಾಗೂ ಶಿಕ್ಷಕ ರೋಶನ್ ಡೋಣಿ ತಮ್ಮ ಸಲಹೆಗಳನ್ನು ನೀಡಿದರು. ಶ್ರೀ ಸಾಂಭ ಪ್ರಭು ಶರಣ ಮುತ್ಯಾ ದೇವಸ್ಥಾನದ ಶ್ರೀ ಶರಣಪ್ಪ ಮುತ್ಯಾ ಶರಣರ, ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು. ಪ್ರವಚನ ಸಂಚಾಲಕ ಸೈಯದ್ ಇರ್ಫಾನ್ ಖಾಜಿ, ನಗರ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಹಾಗೂ ಪಟ್ಟಣದ ಸರ್ವ ಸಮಾಜದ ಗಣ್ಯರು ಇದ್ದರು.