ರೈತರ ಗಂಭೀರ ಪರಿಸ್ಥಿತಿಯನ್ನು ಸರ್ಕಾರ ಅರಿತುಕೊಳ್ಳಲಿ
ವಿಜಯಪುರ 05: 2024-25 ರ ತೊಗರಿ ಬೆಂಬಲ ಬೆಲೆ ರೈತರ ಬೇಡಿಕೆ 12000 ಆಗಿದ್ದು, ಸರ್ಕಾರದಿಂದ ಬೆಂಬಲ ಬೆಲೆ 8000 ನೀಡಿರುತ್ತಾರೆ. ತೊಗರಿ ಕೊಡಲು ಹೋದ ಸಂದರ್ಭದಲ್ಲಿ ರೈತರಿಗೆ ತೂಕದಲ್ಲಿ ಅನ್ಯಾಯ ಮಾಡುತ್ತಿದ್ದಾರೆ.
ಸೊಸೈಟಿಯುವರು ರೈತರೊಂದಿಗೆ ಸ್ಪಂದಿಸುವುದಿಲ್ಲ. ಮೊದಲೇ ಬೆಲೆ ಕುಸಿದಿದ್ದು, ರೈತರಿಗೆ ನಷ್ಟವುಂಟಾಗಿದೆ ಅದರ ಹಿನ್ನೆಲೆ ಸೊಸೈಟಿಯವರು ಬೇಕಾಬಿಟ್ಟಿಯಾಗಿ ಕಾಟಾ ಮಾಡಿಕೊಂಡು ಏನು ಅರಿಯದ ರೈತರಿಗೆ ವಂಚಿಸುತ್ತಿದ್ದಾರೆ. ಇದನ್ನು ಸರ್ಕಾರ ಕೂಡಲೇ ಪರೀಶೀಲಿಸಬೇಕು. 2024ರ ಬೆಳೆವಿಮೆ ತುಂಬಿದ್ದು, ಯಾರಿಗೂ ಸರಿಯಾಗಿ ಮುಟ್ಟಿರುವುದಿಲ್ಲ. ರೈತರಿಗೆ ಪಿನ್‌ಕ್ಲೀಯರ್ ಸಟ್ ಕಳಪೆಮಟ್ಟದ ಸಾಮಗ್ರಿಗಳನ್ನು ನೀಡಿದ್ದು, ಇದಕ್ಕೆ ಸರ್ಕಾರ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ತಕ್ಷಣ ಕಳಪೆ ಮಟ್ಟದ ಸಾಮಗ್ರಿ ನೀಡಿದವರ ಮೇಲೆ ಕ್ರಮ ಜರುಗಿಸಬೇಕು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ಅವರಿಗೆ ಜೀವನ ಉಲ್ಲಾಸಮಯಗೊಳಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.