ಲೈಫ್ ಜಾಕೇಟ್-ಜಿ.ಪಿ.ಎಸ್ ಅಳವಡಿಕೆಯಿಂದ ಸುರಕ್ಷಿತ ಮೀನುಗಾರಿಕೆಗೆ ಸಹಕಾರಿ: ಯಾರಗಲ್

ಲೋಕದರ್ಶನ ವರದಿ

ಕಾರವಾರ 03: ಮೀನುಗಾರಿಕೆಯನ್ನು ಮಾಡುವಾಗ ಪ್ರತೀ ಬೊಟ್ಗಳಲ್ಲಿ ಲೈಫ್ ಜಾಕೇಟ್ಗಳನ್ನು ಮತ್ತು ಸಿಗ್ನಲ್ ಲೈಟ್ಗಳನ್ನು ಅಳವಡಿಸಿಕೊಂಡರೆ ಅಪಾಯದಲ್ಲಿ ಇರುವ  ಮೀನುಗಾರರ ರಕ್ಷಣೆ ಸಾಧ್ಯವಾಗುತ್ತದೆ ಎಂದು  ಎಂಪಿಡಾದ ಉಪ ನಿದರ್ೇಶಕ ವಿಜಯಕುಮಾರ್ .ಸಿ. ಯಾರಗಲ್ ಅಭಿಪ್ರಾಯಪಟ್ಟರು. 

ಅವರು ನೆಟ್ಪಿಶ್-ಎಂಪಿಡಾ, ಸ್ಕೊಡ್ವೆಸ್ ಸಂಸ್ಥೆ ಸಹಯೋಗದಲ್ಲಿ ಕಾರವಾರ ಎಂಪಿಡಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೌಕಾಯಾನ ಮತ್ತು ಕಡಲ ಸುರಕ್ಷತೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಮೀನುಗಾರಿಕೆ ಸಮಯದಲ್ಲಿ ಸಮುದ್ರದಲ್ಲಿ ನಡೆಯಬಹುದಾದ ಅಪಾಯಕಾರಿ ಘಟನೆಗಳಿಂದ ಸುರಕ್ಷತೆ ಪಡೆಯಬೇಕೆಂದರೆ ಪ್ರತಿಯೊಬ್ಬ ಮೀಣನುಗಾರರು ಬೋಟ್ಗಳಲ್ಲಿ ಲೈಫ್ ಜಾಕೆಟ್ ಮತ್ತು ಜಿ.ಪಿ.ಎಸ್. ಅಳವಡಿಕೆ ಮಾಡಿಕೊಂಡರೆ ಸಹಾಯಕವಾಗುತ್ತದೆ ಎಂದರು. ಕೊಸ್ಟ್ಗಾರ್ಡನ ಅಸಿಸ್ಟೆಂಟ್ ಕಾಮಾಂಡೆಂಟ್ ಎನ್ ದಿನೇಶ್ ರವರು ಮೀನುಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ತರಬೇತಿ ನೀಡಿದರು. 

ಇದೇ ಸಂದರ್ಭದಲ್ಲಿ ಮೀನುಗಾರರಿಗೆ ಐಸ್ ಬಾಕ್ಸ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಿನಿಯರ್ ಸೈಲರ್ ಕೊಸ್ಟ ಗಾಡರ್್ ಪ್ರವೀಣ ಕುಮಾರ್, ನೆಟ್ಫಿಶ್ನ ರಾಜ್ಯ ಸಮನ್ವಯಾಧಿಕಾರಿ ನಾರಾಯಣ ಕೆ.ಎ. ಸ್ಕೊಡ್ವೆಸ್ಯ ಉಮೇಶ್ ಮರಾಠಿ, ಉಪಸ್ಥತರಿದ್ರು,  ಸ್ಕೊಡ್ವೆಸ್ ಸಂಸ್ಥೆಯ ನಿಧಿ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದರು.