ಗದಗ 08: ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಾಲ್ಕು ದಿನಗಳ ಮತದಾರ ಮಿಂಚಿನ ನೊಂದಣಿ ಕಾರ್ಯಕ್ರಮದಲ್ಲಿ ಒಟ್ಟು 10,889 ಅಜರ್ಿಗಳು ಸಲ್ಲಿಕೆಯಾಗಿವೆ ಎಂದು ಗದಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸ್ವೀಪ್ ಸಮಿತಿ ಕಾರ್ಯ ಚಟುವಟಿಕೆ ಕುರಿತು ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಫೆ. 23, 24 ರಂದು ನಡೆದ ಮಿಂಚಿನ ನೊಂದಣಿ ಕಾರ್ಯಕ್ರಮದಲ್ಲಿ ಹೊಸದಾಗಿ ಹೆಸರು ನೊಂದಾಯಿಸಲು 2,643 ಹಾಗೂ ತಿದ್ದುಪಡಿ ಹೆಸರು ತೆಗೆದು ಹಾಕುವಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ 2,391 ಸೇರಿದಂತೆ ಒಟ್ಟು 5034 ಅಜರ್ಿಗಳನ್ನು ಸ್ವೀಕರಿಸಲಾಗಿದೆ. ಎರಡನೇ ಹಂತದಲ್ಲಿ ಮಾರ್ಚ 2 ಹಾಗೂ 3 ರಂದು ನಡೆದ ವಿಶೇಷ ನೊಂದಣಿ ಕಾರ್ಯಕ್ರಮದಲ್ಲಿ 2,522 ಹೊಸ ನೊಂದಣಿ ಹಾಗೂ 3,333 ಇತರೆ ಅಜರ್ಿಗಳನ್ನು ಸೇರಿದಂತೆ ಒಟ್ಟು 5,855 ಅಜರ್ಿಗಳನ್ನು ಸ್ವೀಕರಿಸಲಾಗಿದೆ. 18-19 ರ ವಯೋಮಿತಿಯಲ್ಲಿರುವವರಿಂದ ಹೊಸದಾಗಿ ನೊಂದಣಿಗೆ ಫೆ. 23, 24 ರಂದು 1234 ಹಾಗೂ ಮಾರ್ಚ 2 ಹಾಗೂ 3 ರಂದು 1297 ಹೀಗೆ ಒಟ್ಟು 2,522 ಯುವ ಮತದಾರರ ಅಜರ್ಿಗಳನ್ನು ಹೆಸರು ನೊಂದಣಿಗೆ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸುದ್ದಿಗಾರರಿಗೆ ವಿವರಿಸಿದರು.
ಜಿಲ್ಲೆಯಲ್ಲಿ ಸ್ವೀಪ್ ಸಮಿತಿಯಿಂದ ಕೈಕೊಳ್ಳಲಾಗುತ್ತಿರುವ ಮತದಾರರ ಜಾಗೃತಿ ಕಾರ್ಯಕ್ರಮಗಳ ಕುರಿತು ಗದಗ ಜಿ.ಪಂ. ಸಿ.ಇ.ಓ ಹಾಗೂ ಜಿಲ್ಲಾ ಸ್ವೀಪ್ ಸಮಿತ ಅಧ್ಯಕ್ಷ ಮಂಜುನಾಥ ಚವ್ಹಾಣ ಅವರು ವಿವರಿಸಿ ಸ್ವೀಪ್ ಸಮಿತಿಯ ಮುಖ್ಯ ಉದ್ದೇಶ ಮತದಾರರ ಪಟ್ಟಿಯಲ್ಲಿರುವ ಮತದಾರರು ತಪ್ಪದೇ ನೈತಿಕ ಮತದಾನ ಮಾಡಬೇಕು. ಅರ್ಹರು ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಬೇಕು ಎನ್ನುವ ಉದ್ದೇಶ ಹೊಂದಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಟಾನ ಸಮಿತಿಗಳು, ಪ್ರತಿ ಮತದಾನ ಕೇಂದ್ರದಲ್ಲಿ ಬೂತ್ ಮಟ್ಟದ ಜಾಗೃತಿ ಗುಂಪು ಹಾಗೂ ಚುನಾವಣಾ ಜಾಗೃತಿ ಕ್ಲಬ್, ಪ್ರತಿ ಸಕರ್ಾರಿ ಕಚೇರಿಯಲ್ಲಿ ವೋಟರ್ ಅವೇರನೆಸ್ ಫೋರಂ ಗಳನ್ನು ರಚಿಸಲಾಗುತ್ತಿದೆ ಎಂದು ಮಂಜುನಾಥ ಚವ್ಹಾಣ ತಿಳಿಸಿದರು. ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಜಿಲ್ಲಾ , ವಿಧಾನಸಭಾ ಕ್ಷೇತ್ರ ಹಾಗೂ ಗ್ರಾಮ ಪಂಚಾಯತ್ ಸಮಿತಿಗಳನ್ನು ರಚಿಸಿ ವಿಕಲಚೇತನರಿಗೆ ಇರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಹಾಊ ನಗರ ಪ್ರದೇಶಗಳಲ್ಲಿ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗುತ್ತಿದ್ದು ಈವರೆಗೆ 2.56 ಲಕ್ಷ ಮತದಾರರಿಗೆ ತಿಳುವಳಿಕೆ ನೀಡಲಾಗಿದೆ. ವಿಕಲಚೇತನರು, ಹಿರಿಯ ನಾಗರಿಕರು, ತೃತೀಯ ಲಿಂಗ ಹಾಊ ಲೈಂಗಿಕ ಕಾರ್ಯಕತರ್ೆಯರ ಮತದಾನ ಜಾಗೃತಿಗಾಗಿ ಸಂಬಂಧಿತ ಸಂಘ ಸಂಸ್ಥೆಗಳ ಸಭೆಯನ್ನು ಜರುಗಿಸಲಾಗಿದೆ. ಈಗಾಗಲೇ ಪ್ರೌಢಶಾಲೆ ವಿದ್ಯಾಥರ್ಿಗಳಿಂದ ಮತದಾರ ಜಾಗೃತಿಯ ಘೋಷವಾಕ್ಯಗಳ ರಚನೆ ಹಾಊ ವಿದ್ಯಾಥರ್ಿಗಳಿಂದ ಪಾಲಕರಿಗೆ ಪತ್ರ ಬರೆಯುವ ಪತ್ರಾಂದೋಲನ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿಗೆ ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲೆಯಾದ್ಯಂತ ಕ್ರಮ ಜರುಗಿಸಿದೆ. ಮಾರ್ಚ 13 ರಂದು ವಿದ್ಯಾಥರ್ಿಗಳಿಂದ ಬೈಸಿಕಲ್ ರ್ಯಾಲಿ, ಹಾಗೂ ದಿನಾಂಕ 15 ರಂದು ಪ್ರೌಢಶಾಲಾ ವಿದ್ಯಾಥರ್ಿಗಳಿಂದ ಮತದಾನದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದಶರ್ಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಟಿ. ದಿನೇಶ, ಹಾಗೂ ಇತರರು ಉಪಸ್ಥಿತರಿದ್ದರು.