ಮಿಂಚಿನ ನೋಂದಣಿ ವಿಶೇಷ ಕಾರ್ಯಕ್ರಮ

ಗದಗ 25:  ಭಾರತ ಚುನಾವಣಾ ಆಯೋಗದ ಮೇರೆಗೆ ಗದಗ ಜಿಲ್ಲೆಯಲ್ಲಿ ದಿ. 23, 24ರಂದು ಮತದಾರರ ನೊಂದಣಿಗಾಗಿ ವಿಶೇಷ ಕಾರ್ಯಕ್ರಮ ಜರುಗಿತು.  ಈ ವಿಶೇಷ  ಕಾರ್ಯಕ್ರಮದಲ್ಲಿ  1-1-2019 ರಂದು 18 ವರ್ಷ ತುಂಬಿದವರು ಅಂದರೆ ಮತದಾನದ ಪಟ್ಟಿಯಲ್ಲಿ ಹೆಸರು ನೊಂದಣಿ ಆಗದವರಿಗೆ ಅಜರ್ಿ ಸಲ್ಲಿಸಲು ಅವಕಾಶ ನೀಡಲಾಗಿದೆ.  ಇದಲ್ಲದೇ ಮತದಾರರ ನೊಂದಣಿಯಾಗಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಕೊಳ್ಳಲು ಹಾಗೂ ದೋಷಗಳಿದ್ದಲ್ಲಿ ಅದನ್ನು  ತಿದ್ದುಪಡಿ ಮಾಡಲು ಈ ವಿಶೇಷ ನೋಂದಣಿಯಲ್ಲಿ ಅವಕಾಶ ನೀಡಲಾಗಿದೆ.  ಈ ವಿಶೇಷ ಕಾರ್ಯಕ್ರಮವು ಮಾರ್ಚ 2  ಹಾಗೂ 3 ರಂದು ಜಿಲ್ಲೆಯ ಪ್ರತಿ ಮತಗಟ್ಟೆಯಲ್ಲಿ ಮತ್ತೆ ಜರುಗಲಿದ್ದು ನೊಂದಣಿ ಯಾಗದ ಅರ್ಹ ಮತದಾರರು ಹಾಗೂ ತಿದ್ದುಪಡಿ ಬಯಸುವ ಮತದಾರರು ಈ ಅವಕಾಶವನ್ನು ಬಳಸಿಕೊಳ್ಳಲು ಗದಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ,  ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ವಿನಂತಿಸಿದ್ದಾರೆ.    

    ರೋಣ ತಾಲೂಕಿನ ರಾಮಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ   ಹಿರೇಕೊಪ್ಪದ ಸಕರ್ಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯೊಂದರಲ್ಲಿ ಜರುಗಿದ ಮಿಂಚಿನ ನೊಂದಣಿಯಲ್ಲಿ ಮತಗಟ್ಟೆ ಅಧಿಕಾರಿ ಮತದಾರರಿಂದ ಅಜರ್ಿಗಳನ್ನು ಸ್ವೀಕರಿಸಿದರು.