ಬಸನಗೌಡರಿಂದ ನಗರದ ರೇಲ್ವೆ ನಿಲ್ದಾಣ, ಸುತ್ತಮುತ್ತಲಿನ ಸ್ಥಳ ವೀಕ್ಷಣೆ

ಲೋಕದರ್ಶನ ವರದಿ

ವಿಜಯಪುರ 29:ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಇವರು ಇಂದು ದಿ :29 ರಂದು ನಗರದ ರೇಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸ್ಥಳಗಳ ವೀಕ್ಷಣೆಯನ್ನು ಮಾಡಿದರು. ವಿಜಯಪುರ ಜಿಲ್ಲೆ ಐತಿಹಾಸಿಕ ಹಿನ್ನಲೆಯುಳ್ಳ ಜಿಲ್ಲೆಯಾಗಿದ್ದು ಬೇರೆ ಬೇರೆ ಸ್ಥಳಗಳಿಂದ ದೇಶಿ ಮತ್ತು ವಿದೇಶಿ ಯಾತ್ರಿಕರು ಎಲ್ಲ ಸ್ಮಾರಕಗಳನ್ನು ನೋಡಬೇಕೆಂದು ಬಂದಾಗ ರೇಲ್ವೆ ನಿಲ್ದಾಣದಿಂದ ಹೊರಬಂದರೆ ಅವರಿ ಕಣ್ಣಿಗೆ ಸುತ್ತಮುತ್ತಲಿನ ಕೊಳಚೆ ಪ್ರದೇಶ ಮತ್ತು ಗಬ್ಬುವಾಸನೆಯಿಂದ ನಾರುವ ಖಂದಕಗಳು ಕಾಣುತ್ತವೆ. ಈ ಎಲ್ಲ ಹೊಲಸಾಗಿರುವ ಪ್ರದೇಶಗಳನ್ನು ಸ್ವಚ್ಛಮಾಡಿ ಸುಂದರ ಮತ್ತು ಸುಸಜ್ಜಿತವಾದ ರೇಲ್ವೆ ನಿಲ್ದಾಣ ನಿಮರ್ಾಣ ಮಾಡಬೇಕೆಂದು ಯೋಜನೆಯನ್ನು ರೂಪಿಸಿ ರೇಲ್ವೆ ನಿಲ್ದಾಣಕ್ಕೆ ಭೇಟಿಯನ್ನು ನೀಡಿದರು.

ಯತ್ನಾಳ ಅವರು ಕೇಂದ್ರ ರೇಲ್ವೆ ಖಾತೆ (ರಾಜ್ಯ) ಸಚಿವರಿದ್ದಾಗ ವಿಜಯಪುರ ನಗರ ರೇಲ್ವೆ ನಿಲ್ದಾಣದ ಹಲವು ಕಾಮಗರಿಗಳನ್ನು ಮಂಜೂರು ಮಾಡಿಸಿದ್ದರು. ಇವರೆಗೂ ಆ ಕಾಮಗಾರಿಗಳು ನೆನೆಗುದಿಗೆ ಬಿದಿದ್ದವು ಆದರೆ ಶಾಸಕರಾದ ನಂತರ ಮತ್ತೆ ಆ ಕಾಮಗಾರಿಗಳನ್ನು ಚಾಲನೆಗೆ ನೀಡಬೇಕೆಂದು ಯೋಚಿಸಿ ಕೇಂದ್ರದ ರೇಲ್ವೆ ಸಚಿವರಿಗೆ ಭೇಟಿ ಆಗಿದ್ದರು. ವಿವಿಧ ಕಾಮಗಾರಿಗಳ ಪಟ್ಟಿಯನ್ನು ಮಾಡಿ ಅವುಗಳನ್ನು ಮಂಜೂರು ಮಾಡಿಸಿಕೊಂಡು ಆಗಿದೆ. ಅದೇ ರೀತಿ ವಿಜಯಪುರ ನಗರದ ವಿವಿಧ ಇಲಾಖೆಗಳಾದ ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ರೇಲ್ವೆ  ಅಧಿಕಾರಿಗಳೊಂದಿಗೆ ಇಂದು ಸ್ಥಳವನ್ನು ಪರಿಶೀಲನೆ ಮಾಡಿ, ರೇಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿನ ಒತ್ತುವರಿಗಳನ್ನು ತೆಗೆಸಿ ಅಲ್ಲಿ ಇದ್ದಂತಹ ನಿವಾಸಿಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ ಬೇರೆ ಕಡೆ ಮನೆಗಳನ್ನು ಮಂಜೂರು ಮಾಡಿಸಿ ಬೇಗ ಕಾಮಗಾರಿಯನ್ನು ಪ್ರಾರಂಭ ಮಾಡಬೇಕೆಂದು ಸೂಚನೆಯನ್ನು ನೀಡಿದರು. ಅದೇ ರೀತಿ ರೇಲ್ವೆ ನಿಲ್ದಾಣದ ಪಕ್ಕದಲ್ಲಿ ಸುಸಜ್ಜಿತವಾದ  ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಯಾತ್ರಿ ನಿವಾಸ, ಉತ್ತಮವಾದ ಉಪಹಾರ ಗೃಹ (ಹೋಟೆಲ್) ಹೀಗೆ ಹಲವಾರು ಯೋಜನೆಗಳನ್ನು ರೂಪಿಸಿ ಆದಷ್ಟು ಬೇಗನೆ ಮಹಾನಗರ ಪಾಲಿಕೆಯ ಆಯುಕ್ತರಾದ ಔದ್ರಾಮ ಇವರಿಗೆ ಸೂಚನೆಯನ್ನು ನೀಡಿದರು. ಈ ಎಲ್ಲ ಕಾಮಗಾರಿಗಳಿಗೆ ಬೇಕಾಗುವ ವಿವಿಧ ಇಲಾಖೆಗಳ ಸಹಾಯ ಮತ್ತು ಪರವಾನಿಗೆಗಳನ್ನು ಆಯಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಡ್ಡಿ ಪಡಿಸದೆ ಮಂಜೂರು ಮಾಡಿಕೊಡಬೇಕೆಂದು ಸೂಚಿಸಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಔದ್ರಾಮ, ರೇಲ್ವೆ ಇಲಾಖೆಯ ಅಧಿಕಾರಿಗಳು, ಪೌರಾತತ್ವ ಇಲಾಖೆಯ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಬಿಜೆಪಿ ವಿಜಯಪುರ ನಗರ ಮಂಡಲ ಅಧ್ಯಕ್ಷರಾದ ಶಿವರುದ್ರ ಬಾಗಲಕೋಟ, ಸಂತೋಷ ಪಾಟೀಲ, ದತ್ತಾ ಗೋಲಾಂಡೆ, ಚಂದ್ರು ಚೌಧರಿ, ಮುತ್ತು ಗಂಗಾಧರ, ಮಧು ಕಲಾದಗಿ, ಬಸವಾಜ ಗೊಳಸಂಗಿ, ವಿಷ್ಣು ಜಾಧವ, ರಾಜಶೇಖರ ಬಜಂತ್ರಿ, ಅಮೀತ್ ಗರುಡಕರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.